ಮಡಿಕೇರಿ, ಆ. ೧೯: ಕರ್ತವ್ಯ ನಿಮಿತ್ತ ತೆರಳಿದ್ದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ನಿಂದನೆ ಮಾಡಿ, ಗಲಾಟೆ ಮಾಡಿದ್ದಲ್ಲದೆ, ದೈಹಿಕವಾಗಿಯೂ ತೊಂದರೆ ನೀಡಿರುವುದಾಗಿ ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬAಧ ೧೩ ಮಂದಿ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ನಿನ್ನೆ ದಿನ ಚಿಕ್ಕಪೇಟೆ ಬಳಿಯಿರುವ ಸಾರ್ವಜನಿಕ ಶೌಚಾಲಯ ಶುಚಿತ್ವ ಬಗ್ಗೆ ಪರಿಶೀಲಿಸುವ ಸಂಬAಧ ನಗರಸಭಾ ಸದಸ್ಯರುಗಳೊಂದಿಗೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಗಲಾಟೆ ಮಾಡಿದ್ದಾರೆ. ದೈಹಿಕವಾಗಿಯೂ ತೊಂದರೆ ನೀಡಿರುವುದಾಗಿ ಅನಿತಾ ಪೂವಯ್ಯ ನಗರ ಪೊಲೀಸ್ ಠಾಣೆಗೆ ಇಂದು ರಾತ್ರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾಧಿಕಾರಿ ಶ್ರೀನಿವಾಸ್ ಅವರು, ೧೩ ಮಂದಿ ವಿರುದ್ಧ ಸೆಕ್ಷನ್ ೩೪೧, ೫೦೪, ೧೪೩, ೧೪೭, ೧೪೯ರಡಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.