ಸೋಮವಾರಪೇಟೆ, ಆ. ೧೮: ರಾಜ್ಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರಪೇಟೆಗೆ ಆಗಮಿಸುವ ಸಂದರ್ಭ ಫ್ಲ್ಲೆಕ್ಸ್ ವಿಚಾರಕ್ಕೆ ಸಂಬAಧಿಸಿದAತೆ ಕೆಲಕಾಲ ಗೊಂದಲ ಉಂಟಾಯಿತು.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ನಿರ್ದೇಶಕರೂ ಆಗಿರುವ ಹರಪಳ್ಳಿ ರವೀಂದ್ರ ಅವರು ಸ್ವಾತಂತ್ರೊö್ಯÃತ್ಸವ ಮತ್ತು ಗೌರಿ ಗಣೇಶ ಹಬ್ಬಕ್ಕೆ ಶುಭಕೋರುವ ಬ್ಯಾನರ್‌ಗಳನ್ನು ಅವರ ಅಭಿಮಾನಿಗಳು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದರು.
ಇಂದು ಸಿದ್ದರಾಮಯ್ಯ ಭೇಟಿ ಹಿನ್ನೆಲೆ ಡಾ.ಮಂಥರ್ ಗೌಡ ಅವರು ಸ್ವಾಗತ ಕೋರುವ ಫ್ಲೆಕ್ಸ್ನ್ನು ಅಳವಡಿಸಲು ಕಾರ್ಯಕರ್ತರು ಮುಂದಾಗಿದ್ದರು. ಈಗಾಗಲೇ ಹರಪಳ್ಳಿ ರವೀಂದ್ರ ಅವರ ಅಭಿಮಾನಿಗಳು ಅಳವಡಿಸಿದ್ದ ಫ್ಲೆಕ್ಸ್ನ್ನು ಮುಚ್ಚಿ ಅದರ ಮೇಲೆ ಮಂಥರ್ ಗೌಡ ಅವರ ಫ್ಲೆಕ್ಸ್ ಅಳವಡಿಸಿದ್ದರು.
ಇದರಿಂದಾಗಿ ಕೆಲಕಾಲ ಹರಪಳ್ಳಿ ರವೀಂದ್ರ ಹಾಗೂ ಮಂಥರ್‌ಗೌಡ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ರವೀಂದ್ರ ಅವರ ಫ್ಲೆಕ್ಸ್ ಮೇಲಿದ್ದ ಮಂಥರ್ ಗೌಡ ಅವರ ಫ್ಲೆಕ್ಸ್ನ್ನು ತೆಗೆದು ಮತ್ತೊಂದು ಸ್ಥಳದಲ್ಲಿ ಅಳವಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಯಿತು. ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಸ್ಪರ್ಧಿಸಲು ಈ ಈರ್ವರು ನಾಯಕರು ಪ್ರಬಲ ಆಕಾಂಕ್ಷಿಗಳಾಗಿರುವುದು ಇಲ್ಲಿ ಉಲ್ಲೇಖನೀಯ.