ಮೂರ್ನಾಡು, ಆ. ೧೮: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಅಂಗಾAಗ ದಾನ ದಿನಾಚರಣೆಯನ್ನು ಆಚರಿಸಲಾಯಿತು.

ದಿನದ ಮಹತ್ವವನ್ನು ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಬೊಟ್ಟೋಳಂಡ ಭವಾನಿ ತಮ್ಮಯ್ಯ ಅವರು ನೀಡಿದರು. ಅಂಗಾAಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್-೧೩ನ್ನು ವಿಶ್ವ ಅಂಗದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಹೆಚ್ಚಿನ ಜೀವಗಳನ್ನು ಉಳಿಸುವ ಸಲುವಾಗಿ ಸಾವಿನ ನಂತರ ತಮ್ಮ ಆರೋಗ್ಯಕರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮೂತ್ರಪಿಂಡಗಳು, ಹೃದಯ, ಕಣ್ಣುಗಳು ಶ್ವಾಸಕೋಶಗಳು ಮುಂತಾದ ಅಂಗಾAಗಗಳನ್ನು ದಾನ ಮಾಡುವುದರಿಂದ ದೀರ್ಘ ಕಾಲದ ಖಾಯಿಲೆಗಳಿಂದ ಬಳಲುತ್ತಿರುವವರ ಜೀವವನ್ನು ಉಳಿಸಲು ಸಹಾಯವಾಗುತ್ತದೆ ಎಂದರು.

ಅAಗದಾನ ಮಾಡುವವರು ವಯಸ್ಸು, ಜಾತಿ, ಮತ್ತು ಧರ್ಮವನ್ನು ಲೆಕ್ಕಿಸದೆ ಅಂಗಾAಗ ದಾನಿಯಾಗಲು ಸ್ವಯಂ ಸೇವಕರಾಗಬಹುದು. ಹೆಚ್.ಐ.ವಿ., ಕ್ಯಾನ್ಸರ್ ಅಥವಾ ಯಾವುದೇ ಹೃದಯ ಮತ್ತು ಶ್ವಾಸಕೋಶದ ಖಾಯಿಲೆಗಳಿಂದ ಬಳಲುತ್ತಿರುವವರು ಅಂಗದಾನ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.