ಮಡಿಕೇರಿ, ಆ. ೧೯: ‘ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ’ ಎನ್ನುವ ಮಾತು ಛಾಯಾಗ್ರಹಣದ ಮಹತ್ವವನ್ನು ಸಾರುವಂತದ್ದು. ಇಂತಹ ವಿಶಿಷ್ಟ ಹವ್ಯಾಸ, ಕಲೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ‘ವಿಶ್ವ ಛಾಯಾಗ್ರಹಣ ದಿನ’ವನ್ನು ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕ್ಯಾಮೆರಾ ಕ್ಲಿಕ್ಕಿಸುವ ಮೂಲಕ ವಿಶ್ವ ಛಾಯಾಗ್ರಹಣ ದಿನಾಚರಣೆಗೆ ಯುವ ರಾಜಕಾರಣಿ ಡಾ.ಮಂತರ್ ಗೌಡ ಅವರು ಚಾಲನೆ ನೀಡಿ ಮಾತನಾಡಿ, ಕ್ಯಾಮರಾ ಕಣ್ಣಲ್ಲಿ ನೋಡಿ, ವಿಷಯವನ್ನು ಗ್ರಹಿಸಿ ಫೋಟೋ ಕ್ಲಿಕ್ಕಿಸಬೇಕು. ಒಂದು ಛಾಯಾಚಿತ್ರ ನೂರಾರು ವಿಷಯಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ನೋಡುವ ನೋಟಕ್ಕೆ ಅದು ಅರ್ಥೈಸದಿದ್ದಲ್ಲಿ ಪ್ರಯೋಜನವಾಗಲಾರದೆಂದು ಛಾಯಾಗ್ರಹಣದ ಸೂಕ್ಷö್ಮವನ್ನು ತೆರೆದಿಟ್ಟರು.
ಕ್ಯಾಮೆರಾ ರೋಲ್‌ಗಳ ಮೂಲಕ ಫೋಟೋ ಕ್ಲಿಕ್ಕಿಸುವ ಹಂತದಿAದ ಇಂದು ತಾಂತ್ರಿಕವಾಗಿ ನಾವು ಸಾಕಷ್ಟು ಮೇಲಕ್ಕೇರಿದ್ದೇವೆಂದು ತಿಳಿಸಿದ ಅವರು, ಪ್ರಸ್ತುತ ಕ್ಯಾಮೆರಾಗಳು ಅತ್ಯಂತ ದುಬಾರಿಯಾಗಿದ್ದು, ಎಲ್ಲರೂ ಅದನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆ ಸಂಘ ವ್ಯವಸ್ಥೆಯಡಿ ಕ್ಯಾಮೆರಾವೊಂದನ್ನು ಇಟ್ಟುಕೊಂಡು ಅದನ್ನು ಸಂಘದ ಸದಸ್ಯರುಗಳು ಅಗತ್ಯವಿದ್ದಾಗ ಬಳಸುವಂತಹ ಕ್ರಮ ಉಪಯುಕ್ತವಾದೀತೆಂದು ಸಲಹೆಯನ್ನಿತ್ತರು.
ಸಾಕಷ್ಟು ಛಾಯಾಚಿತ್ರಗಳು ಪರಿಸರ, ವನ್ಯಜೀವಿಗಳನ್ನು ಕೇಂದ್ರೀಕರಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರ ಮತ್ತು
(ಮೊದಲ ಪುಟದಿಂದ) ವನ್ಯಜೀವಿಗಳ ಸಂರಕ್ಷಣೆೆಯತ್ತ ಪ್ರತಿಯೊಬ್ಬರು ಆಸಕ್ತರಾಗಬೇಕು ಮತ್ತು ಅವುಗಳ ರಕ್ಷಣೆÉ ಅವಶ್ಯವಾಗಿ ಆಗಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಛಾಯಾಗ್ರಹಣ ಅತ್ಯಂತ ದುಬಾರಿ ಹವ್ಯಾಸವಾಗಿದೆ. ಹಿಂದೆ ಒಂದು ಫೋಟೋ ತೆಗೆದು ಅದು ಕೈಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತಿತ್ತು. ಆದರೆ, ಬದಲಾದ ತಾಂತ್ರಿಕತೆ ಡಿಜಿಟಲ್ ಪೋಟೋಗ್ರಫಿಯಿಂದ ಕ್ಷಣ ಮಾತ್ರದಲ್ಲಿ ಎಲ್ಲರಿಗೂ ದೊರಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳ್ಳು ವಂತಾಗಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ವರದಿಗಾರಿಕೆಯ ತಮ್ಮ ಕಲಿಕೆಯ ಅವಧಿಯಲ್ಲಿ ಛಾಯಾಗ್ರಹಣಕ್ಕೂ ಹೆಚ್ಚಿನ ಮಹತ್ವನ್ನು ನೀಡುವಂತಾಗಬೇಕೆAದು ಹೇಳಿದರು.
ಹಿರಿಯ ಛಾಯಾಗ್ರಾಹಕ ಎನ್.ಎಂ. ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊAಡು, ೧೯೭೦ ರ ದಶಕದಲ್ಲಿ ಕಪ್ಪು ಬಿಳುಪು ಛಾಯಾಗ್ರಹಣ ಮಾಡಲಾಗುತಿತ್ತು. ಅಂದು ಒಂದು ಟ್ರೆöÊಪೋಡ್‌ನಲ್ಲಿ ಅಳವಡಿಸಿದ ದೊಡ್ಡ ಕ್ಯಾಮೆರಾದಿಂದ ಕೇವಲ ಒಂದು ಫೋಟೋ ತೆಗೆಯಲಷ್ಟ್ಟೆ ಸಾಧ್ಯವಾಗುತಿತ್ತು. ನಂತರದ ದಿನಗಳಲ್ಲಿ ಎಂಟು ಹತ್ತು ಫೊಟೋ ಕ್ಲಿಕ್ಕಿಸುವ ಬಾಕ್ಸ್ ಕ್ಯಾಮೆರಾಗಳು ಬರಲಾರಂಭಿಸಿದ್ದನ್ನು ನೆನಪಿಸಿಕೊಂಡರಲ್ಲದೆ, ಅಂದಿನ ದಿನಮಾನಗಳಲ್ಲಿನ ಕಪ್ಪು ಬಿಳುಪಿನ ಚಿತ್ರಗಳು ಇಂದಿಗೂ ಅದೇ ಗುಣಮಟ್ಟದಲ್ಲಿ ತಮ್ಮ ಸಂಗ್ರಹದಲ್ಲಿ ಇದೆ. ಅಂದು ಕ್ಯಾಮೆರಾ ರೋಲ್‌ಗಳಿಂದ ತೆಗೆಯುವ ಫೋಟೋ, ಅವುಗಳನ್ನು ವಾಶ್ ಮಾಡಿ ಫೋಟೋಗಳನ್ನಾಗಿ ಸಜ್ಜುಗೊಳಿಸುವ ಸಂಕಷ್ಟಗಳು ಇತ್ತಾದರು, ಪೋಟೋ ತೆಗೆಯುವ ಆ ಸಂತೋಷದ ಮುಂದೆ ಅದು ಗೌಣವೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ವರದಿಗಾರ, ಛಾಯಾಗ್ರಾಹಕ ಅನಿಲ್ ಹೆಚ್.ಟಿ., ಛಾಯಾಗಾಹಕರನ್ನು ಗುರುತಿಸಿ, ಪ್ರೋತ್ಸಾಹಿಸುವ ದಿನವೇ ‘ವಿಶ್ವ ಛಾಯಾಗ್ರಹಣ ದಿನ’. ಪ್ರಾಕೃತಿಕ ವಿಕೋಪವಿರಬಹುದು, ನೋವು ನಲಿವಿನ ಕ್ಷಣಗಳಿರಬಹುದು . ಈ ಯಾವುದೇ ವಿಚಾರ ಸುದ್ದಿಯಾಗಿ ಗಮನ ಸೆಳೆÉಯಬೇಕಾದರೆ ಪೂರಕವಾದ ಫೋಟೋ ಅತ್ಯವಶ್ಯವೆಂದು ಅಭಿಪ್ರಾಯಿಸಿದರು. ಇಡೀ ವಿಶ್ವವೇ ಕೋವಿಡ್‌ನಿಂದ ನಲುಗಿ ಲಾಕ್‌ಡೌನ್‌ಗೆ ಒಳಗಾದ ಹಂತದಲ್ಲಿ ಮಾಧ್ಯಮಗಳ ಮಂದಿ ಮನೆಯಿಂದಲೇ ಸುದ್ದಿಗಳನ್ನು ಮಾಡುತ್ತಿದ್ದರಾದರೆ, ಛಾಯಾಗ್ರಾಹಕರು ಅಂದಿನ ಸ್ಥಿತಿಗತಿಗಳನ್ನು ಕೆಚ್ಚೆದೆಯಿಂದ ತೆಗೆದ ಅತ್ಯಪೂರ್ವವಾದ ಫೋಟೋಗಳ ಮೂಲಕ ತೋರಿಸಿಕೊಟ್ಟಿದ್ದಾರೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಪ್ರಸ್ತುತ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿಗಳಿಗೆ ಎದುರಾಗಿರುವ ಅಪಾಯವೆಂದರೆ ಅದು ಮೊಬೈಲ್ ಫೋಟೋಗ್ರಪಿಯೆಂದು ತಿಳಿಸಿದ ಅವರು, ಇವುಗಳನ್ನು ಮೀರಿ ಬೆಳೆÉಯಲು ಛಾಯಾಗ್ರಾಹಕರು ತಾವು ತೆಗೆಯುವ ಒಳ್ಳೆಯ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕೆಂದು ತಿಳಿಸಿ, ಫೋಟೋಗ್ರಫಿ ಎನ್ನುವುದು ನಮ್ಮ ಮನಸ್ಸಿನ ಚಿಂತನೆಗಳ ಅಭಿವ್ಯಕ್ತಿ ಆಗಿದೆಯೆಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘÀದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಎಲ್ಲಾ ಪತ್ರಕರ್ತರು ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಛಾಯಾಗ್ರಹಣದೆಡೆಗಿನ ಆಸಕ್ತಿ, ವಿಷಯದ ಆಳವಾದ ಅರಿವು ಇರುವವರು ಉತ್ತಮ ಛಾಯಾಗ್ರಾಹಕರಾಗುತ್ತಾರೆ. ಸಾಕಷ್ಟು ಸಂಕಷ್ಟದ ಅವಧಿಗಳಲ್ಲಿ ಛಾಯಾಗ್ರಾಹಕರು ಜೀವದ ಹಂಗು ತೊರೆದು ಅತ್ಯುತ್ತಮವಾದ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಅಂತಹವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಹೆಮ್ಮೆಯಾಗಿದೆಯೆಂದು ನುಡಿದರು.
ಛಾಯಾಗ್ರಾಹಕರಿಗೆ ಸನ್ಮಾನ: ಸಮಾರಂಭದಲ್ಲಿ ಹಿರಿಯ ಛಾಯಾಗ್ರಾಹಕರಾದ ಪೊನ್ನಂಪೇಟೆಯ ಎಸ್.ಎಲ್. ಶಿವಣ್ಣ, ಪೊನ್ನಂಪೇಟೆಯ ಐನಂಡ ಬೋಪಣ್ಣ, ಮೂರ್ನಾಡಿನ ಟಿ.ಸಿ. ನಾಗರಾಜ್, ಸುಂಟಿಕೊಪ್ಪದ ಎಂ.ಬಿ. ವಿನ್ಸೆಂಟ್, ಮಡಿಕೇರಿಯ ಹೆÉಚ್.ಎನ್. ಲಕ್ಷಿö್ಮÃಶ್ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.ಸ್ಪರ್ಧಾ ವಿಜೇತರು: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಪತ್ರಕರ್ತ ಕವನ್ ಕಾರ್ಯಪ್ಪ ಪ್ರಥಮ, ಮಡಿಕೇರಿಯ ಅಶೋಕ್ ದ್ವಿತೀಯ, ಚೆಯ್ಯಂಡಾಣೆಯ ಅಶ್ರಫ್ ತೃತೀಯ, ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಮಡಿಕೇರಿಯ ಲತೀಶ್ ಪೂಜಾರಿ(ಪ್ರ), ಸಿದ್ದಾಪುರದ ಗುರುದರ್ಶನ್(ದ್ವಿ), ಅಶ್ರಫ್(ತೃ) ಬಹುಮಾನ ಪಡೆದರು. ಪದವಿ ಕಾಲೇಜುಗಳ ವಿಭಾಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಹಬೀಜ್ ರುಮಾನ್(ಪ್ರ), ಕುಶಾಲನಗರದ ಎಂಜಿಎA ಪದವಿ ಕಾಲೇಜಿನ ಗಗನ್(ದ್ವಿ), ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ತರುಣ್(ತೃ) ಹಾಗೂ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಬಿಟಿಸಿಜಿ ಕಾಲೇಜಿನ ಆಸ್ಪದ್(ಪ್ರ), ಕುಶಾಲನಗರ ಎಂಜಿಎA ಕಾಲೇಜಿನ ಗಗನ್(ದ್ವಿ) ಹಾಗೂ ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಮಹೇಂದ್ರ(ತೃ) ಬಹುಮಾನ ಪಡೆದರು. ವಿಜೇತರಿಗೆ ಹಿರಿಯ ಪತ್ರಕರ್ತರಾದ ಬಿ.ಜಿ. ಅನಂತ ಶಯನ ಅವರು, ತಮ್ಮ ಪುತ್ರಿ ಡಾ.ಅನುಶ್ರೀ ಅನಂತಶಯನ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಿನಲ್ಲಿ ಪ್ರಾಯೋಜಿಸಿದ್ದ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು.
ಛಾಯಾಚಿತ್ರ ಪ್ರದರ್ಶನ: ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ವನ್ಯ ಜೀವಿ ಛಾಯಾಗ್ರಾಹಕರಾದ ಡಾ. ಬಿಷನ್ ಮೊಣ್ಣಪ್ಪ ಮತ್ತು ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತ ಬಲ್ಲಚಂಡ ದರ್ಶನ್ ಗಣಪತಿ ಅವರ ಅಪರೂಪದ ಛಾಯಾಚಿತ್ರಗಳನ್ನು ಟಿವಿ ಸ್ಕಿçÃನ್ ಮೂಲಕ ಪ್ರದರ್ಶಿಸಲಾಯಿತು. ಹಿರಿಯ ಛಾಯಾಗ್ರಾಹಕ ಎಸ್.ಎಲ್. ಶಿವಣ್ಣ ಅವರು ಕ್ಲಿಕ್ಕಿಸಿದ ೪೦ ಕ್ಕೂ ಹೆಚ್ಚಿನ ಅಪರೂಪದ ಛಾಯಾಚಿತ್ರಗಳು ಗಮನ ಸೆಳೆÉದವು.
ಅತಿಥಿಗಳ ಪರಿಚಯವನ್ನು ಸಂಘದ ಪದಾಧಿಕಾರಿಗಳಾದ ಸುರೇಶ್ ಬಿಳಿಗೇರಿ, ಟಿ.ಕೆ. ಸಂತೊಷ್ ಮಾಡಿದರು. ಸನ್ಮಾನಿತರ ಪರಿಚಯವನ್ನು ಹಿರಿಯ ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ, ಉಷಾ ಪ್ರೀತಂ, ಉಜ್ವಲ್ ರಂಜಿತ್, ಕವನ್ ಕಾರ್ಯಪ್ಪ, ವಿವೇಕ್ ನರೇನ್ ಮಾಡಿದರು. ಕೌಸರ್ ಕಾರ್ಯಕ್ರಮ ನಿರೂಪಿಸಿದರೆ, ರಂಜಿತ್ ಕವಲಪಾರ ವಂದಿಸಿದರು.