*ಗೋಣಿಕೊಪ್ಪಲು, ಆ. ೧೮: ಪೊನ್ನಂಪೇಟೆ ಸಂತ ಅಂಥೋನಿ ಶಾಲೆಯಲ್ಲಿ ಸ್ವಾತಂತ್ರ÷್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ÷್ಯ ಹೋರಾಟಗಾರರ ಪರಿಚಯದ ಭಾಷಣ, ದೇಶಭಕ್ತಿ ಗೀತೆ, ನೃತ್ಯಗಳು ವಿದ್ಯಾರ್ಥಿಗಳಿಂದ ನಡೆಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫ್ಲೋಸ್ಸಿರವರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು, ಶಿಕ್ಷಕರು ಪೊನ್ನಂಪೇಟೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಭಾರತಮಾತೆಗೆ ಜೈಕಾರ ಮೊಳಗಿಸುತ್ತಾ, ತಿರಂಗ ಹಿಡಿದು ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಸ್ವಾತಂತ್ರೊö್ಯÃತ್ಸÀವದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.