ವೀರಾಜಪೇಟೆ, ಆ. ೧೮: ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅಂದು ಸಂಪೂರ್ಣ ತಿರಸ್ಕರಿಸಬೇಕೆಂದು ಹೇಳುತ್ತಿದ್ದವರು ಈಗ ತಿದ್ದುಪಡಿಗಳೊಂದಿಗೆ ಅನುಷ್ಠಾನಕ್ಕೆ ಸಿದ್ಧರಾಗಿ ಜನತೆಗೆ ವಂಚನೆ ಮಾಡುತ್ತಿರುವುದನ್ನು ವಿರೋಧಿಸಿ ತಾ. ೧೯ ರಂದು (ಇಂದು) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್ ಹೇಳಿದರು.
ಕಸ್ತೂರಿರಂಗನ್ ವರದಿ ಸಂಬAಧ ವೀರಾಜಪೇಟೆ ಸಿಪಿಐಎಂ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಸೂಕ್ಷö್ಮ ಸಮೀಕ್ಷೆ ನಡೆಸದೆ ಸಿದ್ಧಪಡಿಸಲಾಗಿದ್ದು, ಈ ವರದಿ ಜಾರಿಯಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದೆ, ವರದಿ ಜಾರಿಯಾದರೆ ೧,೫೫೩ ಗ್ರಾಮಗಳ ಜನರ ಮೇಲೆ ಪರಿಣಾಮ ಬೀರಲಿದೆ. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದೆ. ಪ್ರದೇಶದ ಭೂ ಸಮೀಕ್ಷೆ ನಡೆಸದೆ ಹಸಿರು ಪ್ರದೇಶಗಳನ್ನೆಲ್ಲಾ ಪರಿಸರ ಸೂಕ್ಷö್ಮ ಪ್ರದೇಶವೆಂದು ಘೋಷಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿರುವುದರಿಂದ ಮುಂದಿನ ಚುನಾವಣೆಯನ್ನು ಮನದಲಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರಚುವಂತಹ ನಾಟಕವಾಡುತ್ತಿರು ವುದರಿಂದ ಹೋರಾಟದ ಅನಿವಾರ್ಯತೆ ಅಗತ್ಯವಿರುವುದಾಗಿ ದುರ್ಗಾಪ್ರಸಾದ್ ತಿಳಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ. ರಮೇಶ್ ಮಾತನಾಡಿ, ಕಸ್ತೂರಿರಂಗನ್ ಸಮಿತಿಯ ವರದಿಗೆ ಸಂಬAಧಿಸಿದAತೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾಪಕ್ಷ ಜನರಿಗೆ ವಂಚಿಸುತ್ತಾ ಬಂದಿದ್ದು ವಂಚನೆಯನ್ನು ಮರೆಮಾಚಲು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಈ ಸಂಬAಧ ಬಲವಾದ ಚಳುವಳಿಯನ್ನು ನಡೆಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಎ.ಸಿ. ಸಾಬು, ವೀರಾಜಪೇಟೆ ಘಟಕದ ಶಾಜಿ ರಮೇಶ್, ಮತ್ತಿತರರು ಉಪಸ್ಥಿತರಿದ್ದರು.