ಮಡಿಕೇರಿ, ಆ.೧೭: ಗ್ರಾಮ ಒನ್ ಯೋಜನೆ ಸಂಬAಧ ಕೊಡಗು ಜಿಲ್ಲೆಯಲ್ಲಿ ಬಾಕಿ ಇರುವ ೧೬ ಗ್ರಾಮ ಪಂಚಾಯತ್‌ಗಳಲ್ಲಿ ಗ್ರೇಡ್ ೨ ರಡಿ ಸಮಗ್ರ ನಾಗರಿಕ ಸೇವಾ ಕೇಂದ್ರ ‘ಗ್ರಾಮ ಒನ್’ ಆರಂಭಿಸಲು ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಆ ದಿಸೆಯಲ್ಲಿ ಮಡಿಕೇರಿ ತಾಲೂಕಿನ ಬೆಟ್ಟಗೇರಿ, ಕರಿಕೆ, ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ, ಬೆಟ್ಟದಳ್ಳಿ, ಗರ್ವಾಲೆ, ಕುಶಾಲನಗರ ತಾಲ್ಲೂಕಿನ ಕೆದಕಲ್, ತೊರೆನೂರು, ಶಿರಂಗಾಲ, ವಿರಾಜಪೇಟೆಯ ಅಮ್ಮತ್ತಿ, ಪೊನ್ನಂಪೇಟೆಯ ನಿಟ್ಟೂರು, ಬಲ್ಯಮಂಡೂರು, ಕೆ.ಬಾಡಗ, ಪೊನ್ನಪ್ಪಸಂತೆ, ಬಿ.ಶೆಟ್ಟಿಗೇರಿ, ಕಿರುಗೂರು ಹಾಗೂ ನಾಲ್ಕೇರಿ ಈ ೧೬ ಗ್ರಾಮ ಪಂಚಾಯತ್‌ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ “ಗ್ರಾಮ ಒನ್” ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಪ್ರಾಂಚೈಸಿಗಳು hಣಣಠಿs://ತಿತಿತಿ.ಞಚಿಡಿಟಿಚಿಣಚಿಞಚಿoಟಿe.gov.iಟಿ/Pubಟiಛಿ/ಉಡಿಚಿmಔಟಿeಈಡಿಚಿಟಿಛಿhiseeಖಿeಡಿms ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್, ಜಿಲ್ಲಾಧಿಕಾರಿ ಅವರ ಕಚೇರಿ (ದೂ.ಸಂ.೦೮೨೭೨-೨೨೩೫೦೦, ೮೮೬೧೬೭೨೧೨೦) ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.
 
						