ಸೋಮವಾರಪೇಟೆ, ಆ. ೧೭: ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಟಿದ ಕೂಟ ಕಾರ್ಯಕ್ರಮ ಹಾಗೂ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.

ಮಹಿಳೆಯರು, ಮಕ್ಕಳು, ವಿವಿಧ ಆಟಗಳಲ್ಲಿ ಭಾಗವಹಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಹಗ್ಗಜಗ್ಗಾಟದಲ್ಲಿ ಗೆಲುವಿಗಾಗಿ ಶಕ್ತಿ ಪ್ರದರ್ಶಿಸಿದರು. ಪುರುಷರ ಹಗ್ಗ ಜಗ್ಗಾಟದಲ್ಲಿ ಅನಿಲ್ ಶೆಟ್ಟಿ ತಂಡದವರು ಪ್ರಥಮ ಬಹುಮಾನ ಪಡೆದರು. ನವೀನ್ ಶೆಟ್ಟಿ ತಂಡದವರು ದ್ವಿತೀಯ ಸ್ಥಾನಗಳಿಸಿದರು. ಮಹಿಳೆಯರ ವಿಭಾಗದಲ್ಲಿ ರೋಷಿತ ರೈ ಮತ್ತು ತಂಡ (ಪ್ರ) ಹಾಗೂ ನೇತ್ರ ರೈ ತಂಡ (ದ್ವಿ) ಸ್ಥಾನ ಗಳಿಸಿದರು.

ಮಡಿಕೆ ಒಡೆಯುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಕ್ಷಿತ್ ಶೆಟ್ಟಿ (ಪ್ರ), ನವೀನ್ ರೈ(ದ್ವಿ) ಸ್ಥಾನಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಇಂದು ಶೆಟ್ಟಿ(ಪ್ರ), ಭಾರತಿ ರೈ(ದ್ವಿ) ಸ್ಥಾನಗಳಿಸಿದರು. ಕಾಳು ಹೆಕ್ಕುವ ವಿಭಾಗದಲ್ಲಿ ಚರಣ್ ರೈ(ಪ್ರ) ಮತ್ತು ತುಷಾರ್ ರೈ(ದ್ವಿ) ಹಾಗು ಬಾಲಕಿಯರ ವಿಭಾಗದಲ್ಲಿ ಪದ್ಮಶೆಟ್ಟಿ(ಪ್ರ), ಚೈತ್ರ ಶೆಟ್ಟಿ(ದ್ವಿ) ಸ್ಥಾನಗಳಿಸಿದರು.

ಬಕೆಟ್ ಇನ್ ದ ಬಾಲ್ ಸ್ಪರ್ಧೆಯಲ್ಲಿ ಕಾರ್ತಿಕ್ ಶೆಟ್ಟಿ(ಪ್ರ), ಮೌಲ್ಯ ಶೆಟ್ಟಿ(ದ್ವಿ) ಸ್ಥಾನಗಳಿಸಿದರು. ಪಾಸಿಂಗ್ ದ ಬಾಲ್‌ನಲ್ಲಿ ರೋಹಿತ್ ಶೆಟ್ಟಿ(ಪ್ರ) ಮತ್ತು ಪುಣ್ಯಶ್ರೀ(ದ್ವಿ) ಸ್ಥಾನ ಗಳಿಸಿದರು. ಪಾಸಿಂಗ್ ದ ಪೆನ್ ಪುರುಷರ ವಿಭಾಗದಲ್ಲಿ ಅನಿಲ್ ಶೆಟ್ಟಿ(ಪ್ರ), ಬಾಲಕೃಷ್ಣ (ದ್ವಿ) ಸ್ಥಾನಗಳಿಸಿದರು. ೧೧ ರಿಂದ ೧೮ ವಯೋಮಾನದ ವಿಭಾಗದಲ್ಲಿ ಮನಿಶ್ ರೈ(ಪ್ರ) ಮತ್ತು ಯಶಸ್ವಿನಿ ಶೆಟ್ಟಿ (ದ್ವಿ) ಸ್ಥಾನಗಳಿಸಿದರು. ಉದ್ಯಮಿಗಳಾದ ಐತಪ್ಪ ರೈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಬಿ.ಬಿ. ಜನಾರ್ಧನಶೆಟ್ಟಿ, ಉಪಾಧ್ಯಕ್ಷ ರವೀಂದ್ರ ರೈ, ಯುವ ಘಟಕದ ಅಧ್ಯಕ್ಷ ಅನಿಲ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಚೌಟ ಇದ್ದರು.