ವೀರಾಜಪೇಟೆ, ಆ. ೧೭: ಆಜಾದಿ ಕಾ ಅಮೃತ ಮಹೋತ್ಸ್ವದ ಅಂಗವಾಗಿ ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ರಾಷ್ಟçಮಟ್ಟದ ಮುಕ್ತ ಕರಾಟೆ(ಇಂಡಿವಿಜ್ಯೂವಲ್ ಕುಮಿತೆ)ಯಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ವಿ.ಎಂ. ಪ್ರಜ್ವಲ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಈ ಹಿಂದೆ ರಾಜ್ಯಮಟ್ಟದ ಅಂತರ ಶಾಲಾ ಕರಾಟೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದರು. ವೀರಾಜಪೇಟೆಯ ಎಸ್.ಎಸ್. ಶಿಟೋರಿಯೋ ಅಕಾಡೆಮಿಯ ಕರ್ನಂಡ ಸೋಮಣ್ಣ ಅವರಿಂದ ತರಬೇತಿ ಪಡೆಯುತ್ತಿದ್ದು, ಪಿ.ಎ. ಮಂಜುನಾಥ್ ಹಾಗೂ ಅಶ್ವಿನಿ ಮಂಜುನಾಥ್ ಅವರ ಪುತ್ರ.