ಮಡಿಕೇರಿ: ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಷಿಯಲ್ ವೆಲ್‌ಫೇರ್ ಸೆಂಟರ್ ವತಿಯಿಂದ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಹಿರಿಯರಾದ ನಾಳಿಯಂಡ ಅಯ್ಯಪ್ಪ, ಮಾಜಿ ಅಧ್ಯಕ್ಷ ಮುಂಡAಡ ಸೋಮಣ್ಣ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ವತಿಯಿಂದ ಅಲ್ಲಿನ ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಸ್ಥೆಯೊAದಿಗೆ ಜಂಟಿಯಾಗಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು.

ಈ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಮಡಿಕೇರಿಯ ಸ್ಮಿತಾ ಆಸ್ಪತ್ರೆಯ ನೇತ್ರ ತಜ್ಞ ಡಾ. ಪ್ರಶಾಂತ್ ಈ ಶಿಬಿರ ನಡೆಸಿಕೊಟ್ಟರು. ಶಿಬಿರದಲ್ಲಿ ೧೩೦ ಮಂದಿ ಪ್ರಯೋಜನ ಪಡೆದುಕೊಂಡರು. ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ಗಣೇಶ್ ಹಾಗೂ ಸಂಭ್ರಮ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವಕಾಮತ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕÀ ಪತ್ರಿಕಾ ಭವನದಲ್ಲಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಹಾಗೂ ಸಿಬ್ಬಂದಿಗಳಾದ ಯಮುನ, ಸವಿತ, ರಾಜೇಶ್ ಹಾಗೂ ವರ್ತಕರಾದ ರೆಹಮಾನ್, ಅಶ್ರಫ್, ಲೀಲಾವತಿ ಮತ್ತಿತರರು ಭಾಗವಹಿಸಿದ್ದರು.ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿ ಕಟ್ಟಡ ಕಾರ್ಮಿಕರ ಮತ್ತು ಇತರ ನಿರ್ಮಾಣ ಸಂಘದ ವತಿಯಿಂದ ನಡೆದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಧ್ವಜಾರೋಹಣವನ್ನು ಅಧ್ಯಕ್ಷ ಕೆ.ಎ. ನಾಗೇಶ್ ನೆರವೇರಿಸಿದರು. ಉಪಾಧ್ಯಕ್ಷ ಕೆ.ಸಿ. ಶೇಖರ್, ಗೌರವಾಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ, ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ಇತರ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ಪಂಜರುಪೇಟೆಯ ಯುವ ತಂಡ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ೭೫ ಅಡಿ ಎತ್ತರಕ್ಕೆ ಕ್ರೇನ್ ಮೂಲಕ ಬೃಹತ್ ಭಾರತ ಧ್ವಜವನ್ನು ಹಾರಿಸಿತು.

ಈ ಸಂದರ್ಭ ಪಂಜರುಪೇಟೆಯ ಯುವ ತಂಡದ ಪ್ರಮುಖರಾದ ಗಗನ್ ಪೂಜಾರಿ, ಪ್ರದೀಪ್ ರೈ, ಸುಧಿ ಪೂವಣ್ಣ ಹಾಗೂ ಇನ್ನಿತರ ಪಂಜರುಪೇಟೆಯ ನಿವಾಸಿಗಳು, ಪ್ರಮುಖರು ಹಾಗೂ ಕೊಡಗು ಯುವ ಸೇನೆಯ ಸ್ಥಾಪಕ ಮುಖಂಡ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ, ಬಿಜೆಪಿ ಯುವ ಮೋರ್ಚಾದ ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಸಿ. ಭರತ್ ಹಾಗೂ ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದರು.ವೀರಾಜಪೇಟೆ: ಪಂಜರುಪೇಟೆಯ ಯುವ ತಂಡ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ೭೫ ಅಡಿ ಎತ್ತರಕ್ಕೆ ಕ್ರೇನ್ ಮೂಲಕ ಬೃಹತ್ ಭಾರತ ಧ್ವಜವನ್ನು ಹಾರಿಸಿತು.

ಈ ಸಂದರ್ಭ ಪಂಜರುಪೇಟೆಯ ಯುವ ತಂಡದ ಪ್ರಮುಖರಾದ ಗಗನ್ ಪೂಜಾರಿ, ಪ್ರದೀಪ್ ರೈ, ಸುಧಿ ಪೂವಣ್ಣ ಹಾಗೂ ಇನ್ನಿತರ ಪಂಜರುಪೇಟೆಯ ನಿವಾಸಿಗಳು, ಪ್ರಮುಖರು ಹಾಗೂ ಕೊಡಗು ಯುವ ಸೇನೆಯ ಸ್ಥಾಪಕ ಮುಖಂಡ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ, ಬಿಜೆಪಿ ಯುವ ಮೋರ್ಚಾದ ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಸಿ. ಭರತ್ ಹಾಗೂ ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದರು.ಸೋಮವಾರಪೇಟೆ: ಇಲ್ಲಿನ ಮೋಟಾರ್ ಯೂನಿಯನ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್, ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಶನಿವಾರಸಂತೆ: ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಸಂಯುಕ್ತ ಪಿ.ಯು. ಕಾಲೇಜಿನಲ್ಲಿ ನಡೆದ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ನಿವೃತ್ತ ಬಿ.ಎಸ್.ಎಫ್. ಅಧಿಕಾರಿ ಡಿ.ಎಂ. ನಿಂಗರಾಜು ಧ್ವಜಾರೋಹಣ ನೆರವೇರಿಸಿದರು.

ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ಭಾಷಣ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಫಾದರ್ ಸೆಬಾಸ್ಟಿಯನ್ ಮೈಕಲ್ ದಿನದ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕರು ಹಾಜರಿದ್ದರು.ಸೋಮವಾರಪೇಟೆ: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಈರಪ್ಪ ಧ್ವಜಾರೋಹಣ ಮಾಡಿದರು. ನಂತರ ಮಾತನಾಡಿದ ಅವರು, ಸ್ವಾತಂತ್ರö್ಯ ಹೋರಾಟದಲ್ಲಿ ಹಲವಷ್ಟು ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನು ಅರ್ಪಿಸಿದ್ದು, ಅವರುಗಳ ಸ್ಮರಣೆಯೂ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳು, ಸಾರ್ವಜನಿಕರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆ ಸಮೀಪದ ಕಳಲೆ ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವದ ಪ್ರಯುಕ್ತ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್ ಧ್ವಜಾರೋಹಣ ನೆರವೇರಿಸಿದರು. ಸದಸ್ಯ ಸುದೀಪ್, ರವಿಕುಮಾರ್, ವೆಂಕಟೇಶ್, ಗಣೇಶ್, ಮೋಹನ್, ಮುಖ್ಯ ಶಿಕ್ಷಕಿ ಇಂದಿರಾ, ಶಿಕ್ಷಕರು ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರö್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ನೆರವೇರಿಸಿದರು. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಸತೀಶ್ ಕುಮಾರ್ ಮುಖ್ಯ ಭಾಷಣ ಮಾಡಿದರು. ಪ್ರಾಸ್ತಾವಿಕವಾಗಿ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ. ಲೋಕೇಶ್ ಕುಮಾರ್, ನಿವೃತ್ತ ಸೈನಿಕ ಶ್ರೀನಿವಾಸ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಗ್ರಾ.ಪಂ. ಸದಸ್ಯ ಪಿ.ಎಫ್. ಸಬಾಸ್ಟಿನ್, ಪಿ.ಆರ್. ಸುನಿಲ್‌ಕುಮಾರ್, ಮಂಜುನಾಥ್, ಬಿ.ಎಂ. ಸುರೇಶ್, ಆಲಿಕುಟ್ಟಿ, ಶಬ್ಬೀರ್, ಸೋಮನಾಥ್, ರಫೀಕ್‌ಖಾನ್, ನಾಗರತ್ನ ರೇಷ್ಮಾ, ಹಸೀನಾ, ವಸಂತಿ, ಮಂಜುಳಾ, ಗೀತಾ, ಮಂಗಳಿ, ಮಾಜಿ ಅಧ್ಯಕ್ಷ ಕೆ.ಇ. ಕರೀಂ, ಬಿ.ಐ. ಭವಾನಿ, ಎಂ.ಎ. ಉಸ್ಮಾನ್, ಉಪಾಧ್ಯಕ್ಷರುಗಳಾದ ಪಿ.ಆರ್. ಸುಕುಮಾರ್, ಬಿ.ಕೆ. ಮೋಹನ, ವಿವಿಧ ಸಂಘ-ಸAಸ್ಥೆಗಳ ಅಧ್ಯಕ್ಷರುಗಳು ಇದ್ದರು.

ಸುಂಟಿಕೊಪ್ಪದ ವಿಭಾಗದಲ್ಲಿ ಶಿಕ್ಷಣದಲ್ಲಿ ಅತೀ ಹೆಚ್ಚು ಅಂಕ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರ, ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ೨೧ ಮಂದಿಯನ್ನು ಸನ್ಮಾನಿಸಲಾಯಿತು. ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ರಹೆನಾ ಫೈರೋಜ್ ಸ್ವಾಗತಿಸಿದರು. ಸಂತ ಮೇರಿ ಸರಕಾರಿ ಪ್ರೌಢಶಾಲೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಥಸಂಚಲನ, ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಯಿAದ ಧ್ವಜ ವಂದನೆ ನೆರವೇರಿತು.ಕುಶಾಲನಗರ: ದಂಡಿನಪೇಟೆಯ ಮಸೀದಿಯ ವತಿಯಿಂದ ಸ್ವಾತಂತ್ರ‍್ಯ ದಿನ ಆಚರಿಸಲಾಯಿತು. ಮಸೀದಿ ಆಡಳಿತ ಮಂಡಳಿ ವತಿಯಿಂದ ಮಸೀದಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮಸೀದಿ ಸಮಿತಿ ಅಧ್ಯಕ್ಷ ಶಬ್ಬೀರ್ ಪಾಷಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ನಬಿ ಅಹಮ್ಮದ್ ಮತ್ತು ಹೊನ್ನಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕುಶಾಲನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯ ಭಾನು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪ್ರಮುಖರಾದ ಮಹಮ್ಮದ್ ಯೂಸಫ್ ಮೌಲಾನ ಮಹಮ್ಮದ್ ರಫಿ, ತಾಹಿರ್ ಹುಸೇನ್, ಮಹಮ್ಮದ್ ಇರ್ಫಾನ್, ಹಾಫಿಜ್ ರೆಹಮಾನ್, ಶಬೀರ್ ಸೇರಿದಂತೆ ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳಿದ್ದರು.ಸಂಪಾಜೆ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸ್ವಾತಂತ್ರ‍್ಯೋತ್ಸವನ್ನು ಆಚರಿಸಲಾಯಿತು. ಪಯಸ್ವಿನಿ ಪ್ರಾ.ಕೃ.ಪ.ಸ. ಸಂಘ ಚೆಂಬು ಶಾಖೆಯಲ್ಲಿ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಮತ್ತು ಸಂಪಾಜೆಯಲ್ಲಿ ಉಪಾಧ್ಯಕ್ಷ ರಾಜಾರಾಮ ಕಳಗಿ ಧ್ವಜಾರೋಹಣ ನೆರವೇರಿಸಿದರು.

ಸಮಾರಂಭದಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆನಂದ ಬಿ.ಕೆ., ಅಕ್ರಮ-ಸಕ್ರಮ ಸಮಿತಿ ಸದಸ್ಯ ಸುಬ್ರಮಣ್ಯ ಉಪಾಧ್ಯಾಯ, ಸಂಘದ ನಿರ್ದೇಶಕರು, ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಕುಶಾಲನಗರ: ಅಜಾದಿ ಕಾ ಅಮೃತ ಮಹೋತ್ಸವವನ್ನು ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಆಚರಿಸಲಾಯಿತು.

ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಸುರಯ್ಯ ಭಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಸೇರಿದಂತೆ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.ಶನಿವಾರಸಂತೆ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹೇಮಾವತಿ ರೋಟರಿ ಸಂಸ್ಥೆ ಅಧ್ಯಕ್ಷ ಯತೀಶ್ ಹಾಗೂ ನಿಕಟಪೂರ್ವ ಅಧ್ಯಕ್ಷ ದಿನೇಶ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಶೋಭಿತ್ ಗೌಡ, ಸದಸ್ಯರು ಇದ್ದರು.ಮೂರ್ನಾಡು: ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ‍್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು..

ಸಂಘದ ಕಚೇರಿಯ ಆವರಣದಲ್ಲಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಅಬೂಬಕ್ಕರ್ ಪಿ.ಕೆ. ನೆರವೇರಿಸಿದರು. ಈ ಸಂದರ್ಭ ಮೂರ್ನಾಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಚಂದ್ರಮೌಳಿ, ಪಂಚಾಯಿತಿ ಸದಸ್ಯ ಅವರೆಮಾದಂಡ ಅನಿಲ್, ಕಾರ್ಯದರ್ಶಿ ಶಶಿ, ಉಪಾಧ್ಯಕ್ಷ ವಿನೋದ್, ಖಜಾಂಚಿ ರಿಯಾಜ್, ಗೌರವಾಧ್ಯಕ್ಷ ಭೀಮಯ್ಯ, ಸಹ ಕಾರ್ಯದರ್ಶಿ ಥೋಮಸ್ ಹಾಗೂ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಮಾರಂಭದ ನಂತರ ಪಟ್ಟಣದಲ್ಲಿ ವಾಹನಗಳ ಮೆರವಣಿಗೆ ನಡೆಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.ಭಾಗಮಂಡಲ: ಭಾಗಮಂಡಲದ ಜನತಾ ಕ್ಲಿನಿಕ್‌ನಲ್ಲಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಕ್ಲಿನಿಕ್ ನಡೆಸುತ್ತಿರುವ ಡಾ. ಮೇ. ಕುಶ್ವಂತ್ ಕೋಳಿಬೈಲು ಅವರು ತಿಂಗಳ ಉಚಿತ ಮೆಡಿಕಲ್ ಕ್ಯಾಂಪಿನಲ್ಲಿ ಮಕ್ಕಳಿಗೆ ಸಿಹಿ ಹಂಚಿ ರಾಷ್ಟçಧ್ವಜ ನೀಡಿದರು.ಸೋಮವಾರಪೇಟೆ: ಕರ್ನಾಟಕ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೇಷನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಅವರು ಧ್ವಜಾರೋಹಣ ಮಾಡಿದರು. ಸಂಘದ ಅಧ್ಯಕ್ಷ ಬಿ.ವಿ. ರವಿ ಸೇರಿದಂತೆ ಪದಾಧಿಕಾರಿಗಳು, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಶಿವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.ಶನಿವಾರಸಂತೆ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹೇಮಾವತಿ ರೋಟರಿ ಸಂಸ್ಥೆ ಅಧ್ಯಕ್ಷ ಯತೀಶ್ ಹಾಗೂ ನಿಕಟಪೂರ್ವ ಅಧ್ಯಕ್ಷ ದಿನೇಶ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಶೋಭಿತ್ ಗೌಡ, ಸದಸ್ಯರು ಇದ್ದರು.ಭಾಗಮಂಡಲ: ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಭಾಗಮಂಡಲ ಠಾಣಾಧಿಕಾರಿ ಪ್ರಿಯಾಂಕಾ ತ್ಯಾಗರಾಜ್, ಪ್ರಾಂಶುಪಾಲ ದಿವಾಕರ್, ಕಾರ್ಯದರ್ಶಿ ನಿಡ್ಯಮಲೆ ರವೀಂದ್ರ, ನಿರ್ದೇಶಕರಾದ ಪುಷ್ಪ, ರವಿ ಹೆಬ್ಬಾರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಕೃಷ್ಣ ಸೇರಿದಂತೆ ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು.ಪೊನ್ನAಪೇಟೆ: ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಯಿತು. ಠಾಣಾಧಿಕಾರಿ ಡಿ.ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಕ್ರೈಮ್ ಸಬ್ ಇನ್ಸ್ಪೆಕ್ಟರ್ ಸುಬ್ರಮಣಿ, ಎಎಸ್‌ಐಗಳಾದ ಬಸವರಾಜ ಶೆಟ್ಟಿ, ಅರುಣ, ತಿರುಮಲೇಶ್, ಸುಂದರೇಶ್, ವೆಂಕಟೇಶ್ ಹಾಗೂ ಸಿಬ್ಬಂದಿ ಇದ್ದರು.ಪೊನ್ನಂಪೇಟೆ: ಗುಂಡಿಕೆರೆ ಜಮಾಅತ್ ವತಿಯಿಂದ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ‍್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಗುಂಡಿಕೆರೆ ಜಮಾಅತ್ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸ್ವಾತಂತ್ರ‍್ಯೋತ್ಸವದ ಮಹತ್ವವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ.ಎA. ಇಸ್ಮಾಯಿಲ್ ಅವರು ಮಾತನಾಡಿದರು. ಬೇಟೋಳಿ ಗ್ರಾ.ಪಂ. ಸದಸ್ಯ ಎಂ.ಎA. ರಝಾಕ್, ಸ್ಥಳೀಯ ಮದರಸ ಮುಖ್ಯೋಪಾಧ್ಯಾಯ ಸಮದ್ ಸಖಾಫಿ, ಸಲೀಂ ಅಹ್ಸನಿ ಸ್ವಾತಂತ್ರ‍್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಗುಂಡಿಕೆರೆ ಜಮಾಅತ್ ಉಪಾಧ್ಯಕ್ಷ, ತಾ.ಪಂ. ಮಾಜಿ ಸದಸ್ಯ ಎಂ.ವೈ. ಆಲಿ, ಕೋಶಾಧಿಕಾರಿ ಎಂ. ಅಲಿ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಸಿ ಪಿ. ಆಲಿ ಸೇರಿದಂತೆ ಜಮಾಅತ್‌ನ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಆಡಳಿತ ಮಂಡಳಿಯ ಮಾಜಿ ಪದಾಧಿಕಾರಿಗಳು, ಗ್ರಾಮಸ್ಥರು, ಮದರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮದ್ ಸಖಾಫಿ ಸ್ವಾಗತಿಸಿ, ಜಾಫರ್ ಮಿಸ್ಬಾಹಿ ಐಕ್ಯತೆ ಮತ್ತು ಸ್ವಾತಂತ್ರ‍್ಯೋತ್ಸವದ ಕುರಿತ ಪ್ರತಿಜ್ಞಾವಿದಿ ಬೋಧಿಸಿದರು. ಸಿ.ಪಿ. ಅಲಿ ವಂದಿಸಿದರು.ಶನಿವಾರಸAತೆ: ಇಲ್ಲಿನ ಜಾಮೀಯಾ ಮಸೀದಿ ಮುಂಭಾಗ ಸ್ವಾತಂತ್ರö್ಯ ಧ್ವಜಾರೋಹಣ ನೆರವೇರಿಸಲಾಯಿತು. ಜಾಮೀಯಾ ಮಸೀದಿ ಅಧ್ಯಕ್ಷ ಮುಷರತ್ ಪಾಷ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ ಸೇವೆ ಮಾಡಿದ ನಿವೃತ್ತ ಸೈನಿಕ ಅಬ್ದುಲ್ ರಜಾಕ್ ಹಾಗೂ ತಾಜ್ಮುದ್ದೀನ್ ಮತ್ತು ಹಿರಿಯ ವೈದ್ಯರು ಮಸೀದಿಯ ಮಾಜಿ ಅಧ್ಯಕ್ಷ ಡಾ. ಇಕ್ಬಾಲ್ ಹುಸೇನ್ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಕುರಿತು ವಕೀಲ ದೌಲತ್ ಹುಸೈನ್, ಶಿಕ್ಷಕ ಫಯಾಜ್ ಮಾಸ್ಟರ್, ಪತ್ರಕರ್ತ ಹನೀಫ್, ಮುಖಂಡರಾದ ಔರಂಗಜೇಬ್, ಸಮಾಜ ಸೇವಕ ಕ.ರ.ವೇ. ಕಾರ್ಯದರ್ಶಿ ಡಿ.ಆರ್. ವೇದ್‌ಕುಮಾರ್ ಮಾತ ನಾಡಿದರು.

ಆಡಳಿತ ಸಮಿತಿ ಕಾರ್ಯದರ್ಶಿ ಸಮೀವುಲ್ಲಾ ಸ್ವಾಗತಿಸಿ, ಸದಸ್ಯರಾದ ಇಫ್ತಿಕಾರ್ ನಿರೂಪಿಸಿದರು. ಈ ಸಂದರ್ಭ ಧರ್ಮಗುರುಗಳು, ಆಡಳಿತ ಸಮಿತಿಯ ಸದಸ್ಯರು, ಮೊಹಲ್ಲಾದ ಹಿರಿಯರು, ಯುವಕರು ಉಪಸ್ಥಿತರಿದ್ದರು.

(ಮುಂದುವರಿಯುವುದು)