ಮಡಿಕೇರಿ, ಆ. ೧೭: ಜಿಲ್ಲೆಯ ಯುವಕ ಬರೋಬ್ಬರಿ ೭,೮೦೦ ಕಿಲೋ ಮೀಟರ್ ತನ್ನ ಬೈಕ್‌ನಲ್ಲಿ ಕ್ರಮಿಸಿ ಇದೀಗ ಮರಳಿದ್ದಾರೆ.
ವೀರಾಜಪೇಟೆಯ ಕದನೂರು ಬೋಯಿಕೇರಿ ನಿವಾಸಿ ವೈಲೇಶ್ ಪಿ.ಎಸ್. ಹಾಗೂ ಶಿವಮ್ಮ ಅವರ ಪುತ್ರ ಕವನ್ ಕುಮಾರ್ ಪಿ.ವಿ. (೨೮) ತನ್ನ ಬಜಾಜ್ ಪಲ್ಸರ್ ೨೨೦ ಬೈಕ್‌ನಲ್ಲಿ ತಾ. ೧೦ ರಂದು ಲೇಹ್ ಲಡಾಕ್‌ನತ್ತ ಪಯಣ ಬೆಳೆಸಿದ್ದಾರೆ. ಕಾರ್ಗಿಲ್ ವಿಜಯೋತ್ಸವದಂದು ಲಡಾಕ್ ತಲುಪಿದ ಕವನ್ ನಂತರ ಋಷಿಕೇಶ, ಹರಿದ್ವಾರ, ಕೇದಾರನಾಥಕ್ಕೆ ತೆರಳಿ ನಂತರ ದೆಹಲಿಯಿಂದ ವಾಯು ಮಾರ್ಗವಾಗಿ ಜಿಲ್ಲೆಗೆ ತಲುಪಿದ್ದಾರೆ.