ಚೆಯ್ಯಂಡಾಣೆ, ಆ. ೧೭. ನರಿಯಂದಡ ಗ್ರಾಮ ಪಂಚಾಯಿತಿಯ ಬ್ಲಾಕ್ ೧ ಮತ್ತು ೨ ರ ವಾರ್ಡ್ ಸಭೆಯು ಕ್ರಮವಾಗಿ ಸದಸ್ಯೆ ಪುಷ್ಪ ಹಾಗೂ ರಜೀನಾ ಅಧ್ಯಕ್ಷತೆಯಲ್ಲಿ ಸ್ಥಳೀಯ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು.
ಸಾರ್ವಜನಿಕರ ಪರವಾಗಿ ಬೆಳಿಯಂಡ್ರ ಹರಿಪ್ರಸಾದ್ ಮಾತನಾಡಿ, ಚೆಯ್ಯಂಡಾಣೆಯಿAದ ಪಾರಣೆ, ನಾಪೋಕ್ಲು ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಕಂಡಿಲ್ಲ. ಗ್ರಾಮ ಪಂಚಾಯಿತಿ ಕೂಡಲೇ ಇದಕ್ಕೊಂದು ಪರಿಹಾರ ಕಾಣಲು ಆಗ್ರಹಿಸಿದರು. ಪರಿಹಾರ ಕಂಡುಕೊಳ್ಳದಿದ್ದರೆ ವೀರಾಜಪೇಟೆ, ನಾಪೋಕ್ಲು ಮುಖ್ಯ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಗುವುದೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಸಂಪರ್ಕಿಸಿ ಆದಷ್ಟು ಬೇಗ ರಸ್ತೆ ದುರಸ್ತಿಪಡಿಸುವ ಭರವಸೆ ನೀಡಿದರು.
ಬಟ್ಟಿಯಂಡ ಜಯರಾಂ ಹಾಗೂ ಮಾಜಿ ಸೈನಿಕ ಚೇಯಂಡ ಲವ ಅಪ್ಪಚ್ಚು ಮಾತನಾಡಿ, ನರಿಯಂದಡ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಖಾಯಂ ಲೈನ್ಮ್ಯಾನ್ ಇಲ್ಲದೆ ವರ್ಷಗಳು ಕಳೆದಿವೆ. ಈ ವ್ಯಾಪ್ತಿಯಲ್ಲಿ ೩ ಅವಘಡಗಳು ಸಂಭವಿಸಿದರೂ ಕೂಡ ಲೈನ್ಮ್ಯಾನ್ ನಿಯೋಜಿಸಿಲ್ಲ. ಇನ್ನೂ ಕೂಡ ಅವಘಡ ಸಂಭವಿಸುವAತ್ತಿದ್ದು, ಸಂಭವಿಸಿದ ನಂತರ ಹೇಳಿಕೆ ಕೊಟ್ಟು ಪ್ರಯೋಜನ ಇಲ್ಲ ಎಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಸಂಬAಧಪಟ್ಟ ಚೆಸ್ಕಾಂ ಅಧಿಕಾರಿಗಳಿಗೂ ಹಾಗೂ ರಾಜೇಶ್ ಅಚ್ಚಯ್ಯ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಸಂಪರ್ಕಿಸಿ ಆದಷ್ಟು ಬೇಗ ರಸ್ತೆ ದುರಸ್ತಿಪಡಿಸುವ ಭರವಸೆ ನೀಡಿದರು.
ಬಟ್ಟಿಯಂಡ ಜಯರಾಂ ಹಾಗೂ ಮಾಜಿ ಸೈನಿಕ ಚೇಯಂಡ ಲವ ಅಪ್ಪಚ್ಚು ಮಾತನಾಡಿ, ನರಿಯಂದಡ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಖಾಯಂ ಲೈನ್ಮ್ಯಾನ್ ಇಲ್ಲದೆ ವರ್ಷಗಳು ಕಳೆದಿವೆ. ಈ ವ್ಯಾಪ್ತಿಯಲ್ಲಿ ೩ ಅವಘಡಗಳು ಸಂಭವಿಸಿದರೂ ಕೂಡ ಲೈನ್ಮ್ಯಾನ್ ನಿಯೋಜಿಸಿಲ್ಲ. ಇನ್ನೂ ಕೂಡ ಅವಘಡ ಸಂಭವಿಸುವAತ್ತಿದ್ದು, ಸಂಭವಿಸಿದ ನಂತರ ಹೇಳಿಕೆ ಕೊಟ್ಟು ಪ್ರಯೋಜನ ಇಲ್ಲ ಎಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಸಂಬAಧಪಟ್ಟ ಚೆಸ್ಕಾಂ ಅಧಿಕಾರಿಗಳಿಗೂ ಹಾಗೂ ರಸ್ತೆ ಬದಿಯ ಕಾಡು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲು ಮನವಿ ಸಲ್ಲಿಸಿದರು.
ಪ್ರತಿಕ್ರಿಯಿಸಿದ ಅಧ್ಯಕ್ಷರು ಅರಣ್ಯ ಇಲಾಖೆಗೂ, ಜಿಲ್ಲಾಧಿಕಾರಿಗಳಿಗೂ ಇದರ ಬಗ್ಗೆ ಮನವಿ ಸಲ್ಲಿಸಿದ್ದು, ಕೂಡಲೇ ಪರಿಹಾರ ದೊರಕುವ ಆಶ್ವಾಸನೆ ನೀಡಿದರು.
ಕೊಣಜಂಗೇರಿ ಪಂಚಾಯಿತಿಗೆ ಒಳಪಟ್ಟ ರಸ್ತೆ ಬದಿಯ ಕಾಡುಗಳನ್ನು ಕಡಿಯಲು ಕೂಡಲೇ ಅವರೊಂದಿಗೆ ಸಂಪರ್ಕಿಸಲಾಗುವುದೆAದರು. ನಂತರ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಾಯಿತು.
ಈ ಸಂದರ್ಭ ಜಲಜೀವನ್ ಮಿಷನ್ ಬಗ್ಗೆ ಇಂಜಿನಿಯರ್ ತೌಸೀಫ್ ಮಾಹಿತಿ ನೀಡಿದರು.
ಭಾರತ ಸರಕಾರದ ಸಂಜೀವಿನಿ ಒಕ್ಕೂಟದಿಂದ ಸ್ವಸಹಾಯ ಸಂಘಗಳಿಗೆ, ಮಹಿಳೆಯರಿಗೆ ನೀಡುವ ಸೌಲಭ್ಯದ ಚೆಕ್ಕನ್ನು ಇದೇ ಸಂದರ್ಭ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಹಾಗೂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ವಿತರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್, ಕಾರ್ಯದರ್ಶಿ ಬಿದ್ದಪ್ಪ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
-ಅಶ್ರಫ್