ಮಡಿಕೇರಿ, ಆ. ೧೭: ಸಂಪಾಜೆ ಹೋಬಳಿಯ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾಕತ್ತೂರು ಮತ್ತು ಕಗ್ಗೋಡ್ಲು ಗ್ರಾಮಗಳಿಗೆ ಸಂಬAಧಿಸಿದAತೆ ಹಾಕತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕುವೆಂಪು ಶತಮಾನೋತ್ಸವ ಶಾಲೆ ಸಭಾಂಗಣದಲ್ಲಿ ತಾ.೨೦ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಹಾಕತ್ತೂರು ಮತ್ತು ಕಗ್ಗೋಡ್ಲು ಗ್ರಾಮಗಳಿಗೆ ಸಂಬAಧಿಸಿದAತೆ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿ, ಪೌತಿ ಖಾತೆ, ಸರ್ಕಾರದ ಯೋಜನೆಗಳಾದ ಇಂದಿರಾಗಾAಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ರಾಷ್ಟಿçÃಯ ಕುಟುಂಬ ನೆರವು ಯೋಜನೆ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವುದು, ಗ್ರಾಮಗಳಿಗೆ ಸ್ಮಶಾನಕ್ಕಾಗಿ ಜಾಗ ಕಲ್ಪಿಸುವುದು, ಆಶ್ರಯ ಯೋಜನೆಯಲ್ಲಿ ಜಮೀನು ಕಾಯ್ದಿರಿಸುವ ಬಗ್ಗೆ, ಆಧಾರ್ ಕಾರ್ಡ್ನ ಅನುಕೂಲತೆ ಬಗ್ಗೆ, ಮತದಾರರ ಪಟ್ಟಿಯ ಪರಿಷ್ಕರಣೆ, ಪ್ರಕೃತಿ ವಿಕೋಪದಿಂದ ಹಾನಿಯಾದ ವಾಸದ ಮನೆಗಳಿಗೆ ಪರಿಹಾರ ಮತ್ತು ಬೆಳೆ ಪರಿಹಾರ, ಸಕಾಲ ಯೋಜನೆಯಡಿಯಲ್ಲಿ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ ಹದ್ದುಬಸ್ತು, ಪೋಡಿ, ದರಕಾಸ್ತು, ಮಂಜೂರಾದ ಜಮೀನುಗಳ ದುರಸ್ತಿ (ನಮೂನೆ ೧-೫ ಮತ್ತು ನಮೂನೆ ೬-೧೦)ನ್ನು ಮಾಡಿ ಪೋಡಿ ಮಾಡುವುದು ಹಾಗೂ ಪಡಿತರ ಚೀಟಿಯಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.