ಹೆಚ್.ಜೆ.ರಾಕೇಶ್ ಮಡಿಕೇರಿ, ಆ. ೧೭: ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ವಸತಿ ರಹಿತರು ವಾಸವಿದ್ದಾರೆ. ನಿವೇಶನ ರಹಿತರಿಗೆ ವಸತಿ ಕಲ್ಪಿಸುವುದು ಜಿಲ್ಲೆಯ ಪ್ರಮುಖ ಬೇಡಿಕೆಯೂ ಕೂಡ ಆಗಿದೆ. ಸರಕಾರಿ ಭೂಮಿ ಕಬಳಿಕೆಯಿಂದ ವಸತಿ ಕಲ್ಪಿಸುವುದು ಅಸಾಧ್ಯ ಎಂಬ ಸ್ಥಿತಿ ಸೃಷ್ಟಿಯಾಗಿದೆ. ೨೦೧೮ರ ಬಜಿಲ್ಲೆಯಲ್ಲಿ ಮಳೆಯ ಆರ್ಭಟದಿಂದ ಪ್ರತಿವರ್ಷ ನೂರಾರೂ ಮನೆಗಳು ಹಾನಿಯಾಗಿ ಬದುಕು ಅತಂತ್ರಗೊAಡಿದೆ. ಇವರಲ್ಲಿ ಕೆಲವರಿಗೆ ಸೂರು ಕಲ್ಪಿಸಲಾಗಿದೆ. ಇದೀಗ ಳಿಕ ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ೭.೮೦ ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮಳೆ ಹಾನಿ ಸಂತ್ರಸ್ತರಿಗೆ ಮೊದಲ ಪ್ರಾಶಸ್ತö್ಯದಲ್ಲಿ ನಿವೇಶನದ ಜೊತೆಗೆ ವಸತಿ ಕಲ್ಪಿಸಲಾಗುವುದು. ನಿವೇಶನದ ಅಭಿವೃದ್ಧಿಗಾಗಿ ಅನುದಾನವನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಬಿಡುಗಡೆಗೊಳಿಸಿದೆ.

ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ವಸತಿ ಹಾಗೂ ನಿವೇಶನ ರಹಿತ ಹಾಗೂ ಮಳೆಹಾನಿಯಿಂದ ಬಾಧಿತರಾದವರಿಗೆ ಪುನರ್ ವಸತಿ ಕಲ್ಪಿಸಲು ವೀರಾಜಪೇಟೆ ನಗರದ ಹೊರವಲಯದ ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬಟ್ಟಿಯಲ್ಲಿ ಸರ್ವೇ ನಂಬರ್ ೯೦/೧ರಲ್ಲಿ ೭.೮೦ ಎಕರೆ ಜಾಗವನ್ನು ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆಯಡಿ ಖರೀದಿಸಲು ಹಾಗೂ ಆ ಜಮೀನಿನಲ್ಲಿ ನಿವೇಶನಗಳ ರಚನೆ ಮತ್ತು ಅಭಿವೃದ್ಧಿಗೆ

(ಮೊದಲ ಪುಟದಿಂದ) ಅನುದಾನ ಬಿಡುಗಡೆ ಮಾಡುವ ಕುರಿತು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಜಿಲ್ಲಾಡಳಿತ ಹಾಗೂ ವೀರಾಜಪೇಟೆ ಪುರಸಭೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಇದನ್ನು ಪರಿಶೀಲಿಸಿದ ನಿಗಮ ಅನುಮೋದನೆ ನೀಡಿ ವಿವಿಧ ವಿಚಾರಗಳಿಗಾಗಿ ಒಟ್ಟು ರೂ. ಒಂದು ಕೋಟಿ ಅರವತ್ತೆರಡು ಲಕ್ಷದ ಇಪ್ಪತ್ತಾನಾಲ್ಕು ಸಾವಿರ (೧,೬೨,೨೪,೦೦೦) ಹಣವನ್ನು ಜಿಲ್ಲಾಧಿಕಾರಿ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದೆ.

ಅಂದಾಜು ೩೧೨ ನಿವೇಶನ

ಉದ್ದೇಶಿತ ಜಾಗದಲ್ಲಿ ನಿಗಮದ ಪ್ರಾಥಮಿಕ ಸಮೀಕ್ಷೆ ಪ್ರಕಾರ ೨೦x೩೦ ಅಳತೆಯ ೩೧೨ ನಿವೇಶನಗಳನ್ನು ರಚಿಸಲು ಅವಕಾಶವಿದೆ. ಒಂದು ಎಕರೆಯಲ್ಲಿ ಕನಿಷ್ಟ ೪೦ ನಿವೇಶನ ಮಾಡಬಹುದಾಗಿದೆ. ಆದರೆ, ಮೂಲಭೂತ ಸೌಲಭ್ಯಗಳಾದ ನೀರು, ಚರಂಡಿ, ರಸ್ತೆ, ಉದ್ಯಾನವನ ಸೇರಿದಂತೆ ಇನ್ನಿತರ ವಿಚಾರಗಳಿಗೆ ಭೂಮಿ ನೀಡಿದರೆ ನಿವೇಶನಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ. ಜಾಗದಲ್ಲಿ ಯಾವುದೇ ರೀತಿಯ ವಿವಾದಗಳಿಲ್ಲ. ನಿವೇಶನದ ಜೊತೆಗೆ ಮೂಲಭೂತ ಸೌಲಭ್ಯ ನೀಡಬೇಕಾಗುತ್ತದೆ. ಇದಕ್ಕಾಗಿ ವಿವಿಧ ಇಲಾಖೆಯ ನೆರವು ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಅನುದಾನದ ಹಂಚಿಕೆ

೨ ವಿಧಗಳಲ್ಲಿ ಅನುದಾನವನ್ನು ರಾಜೀವ್ ಗಾಂಧಿ ವಸತಿ ನಿಗಮ ಬಿಡುಗಡೆ ಮಾಡುತ್ತಿದೆ. ಪ್ರತಿ ಎಕರೆಗೆ ೨೦ ಲಕ್ಷದಂತೆ ರೂ. ೧.೫೬ ಕೋಟಿ ಹಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುದಾನ ನೀಡಲಾಗುತ್ತಿದೆ.

ಇದರೊಂದಿಗೆ ಸರಕಾರದ ಆದೇಶದಂತೆ ನಿವೇಶನಗಳ ರಚನೆ ಮತ್ತು ಅಭಿವೃದ್ಧಿಗಾಗಿ ಪ್ರತಿ ನಿವೇಶನಕ್ಕಾಗಿ ರೂ. ೨ ಸಾವಿರ ಹಣವನ್ನು ಬಿಡುಗಡೆಗೊಳಿಸಲಾಗುತ್ತದೆ. ಇದು ಒಟ್ಟು ೬.೨೪ ಲಕ್ಷ ಮೌಲ್ಯ ಆಗಿದೆ. ಜಮೀನು ಖರೀದಿ ಹಾಗೂ ನಿವೇಶನಗಳ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಉಪಯೋಗಿಸಿದ ಬಗ್ಗೆ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ಕಡ್ಡಾಯವಾಗಿ ತಿಳಿಸುವಂತೆಯೂ ಆದೇಶಿಸಲಾಗಿದೆ. ಜಿಲ್ಲಾ ಜಮೀನು ಖರೀದಿ ಸಮಿತಿಯ ನಿರ್ಣಯ ಹಾಗೂ ಶಿಫಾರಸ್ಸಿನಂತೆ ಮೇಲ್ಕಂಡ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಮುಂದೆ ಸಂಭವಿಸಬಹುದಾದ ಯಾವುದೇ ತಕರಾರು, ವಿವಾದಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ಜವಾಬ್ದಾರಿಯಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಳೆಹಾನಿ ಸಂತ್ರಸ್ತರಿಗೆ ಮೊದಲ ಪ್ರಾಶಸ್ತö್ಯ

ವೀರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದಲ್ಲಿ ವಾಸಿಸುತ್ತಿರುವವರಿಗೆ ಹಾಗೂ ಮಳೆಹಾನಿ ಸಂತ್ರಸ್ತರಿಗೆ ಮೊದಲ ಪ್ರಾಶಸ್ತö್ಯದಲ್ಲಿ ನಿವೇಶನ ಹಂಚಿಕೆ ಮಾಡಿ ಪುನರ್ವಸತಿಗೆ ಕ್ರಮವಹಿಸಲಾಗುವುದು.

ಬಳಿಕ ನಿವೇಶನ ರಹಿತರಿಗೆ ನಿವೇಶನ ನೀಡಿ ವಿವಿಧ ವಸತಿ ಯೋಜನೆಯಡಿ ವಸತಿ ಕಲ್ಪಿಸಲಾಗುವುದು. ಖರೀದಿಸಲಾದ ಜಾಗದಲ್ಲಿ ನಿವೇಶನಗಳನ್ನು ರಚಿಸುವುದು ಮತ್ತು ನಿವೇಶನಗಳನ್ನು ಸಂಖ್ಯೆಯನ್ನು ನೀಡತಕ್ಕದು, ಕರ್ನಾಟಕ ಲ್ಯಾಂಡ್ ಗ್ರಾö್ಯಂಟ್ ಕಾಯ್ದೆ ಪ್ರಕಾರ ನಿವೇಶನಗಳಿಗೆ ಹಕ್ಕುಪತ್ರ ನೀಡಲಾಗುವುದು. ಅರ್ಹ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಆಯ್ಕೆ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಪ್ರಸ್ತಾವನೆ ಸಲ್ಲಿಸಬೇಕು.

ಹರೀಶ್ ಬೋಪಣ್ಣ ಪಾತ್ರ

ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಭೂಮಿ ಖರೀದಿ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಂತೆ ಸ್ಥಳೀಯ ಆಡಳಿತ ಸದಸ್ಯರು ಹರೀಶ್ ಗಮನಕ್ಕೆ ತಂದಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕ ಇದ್ದ ಹಿನ್ನೆಲೆ ನಿರಂತರವಾಗಿ ಈ ಬಗ್ಗೆ ಅವರ ಗಮನಕ್ಕೆ ತಂದ ಕಾರಣಕ್ಕಾಗಿ ಯೋಜನೆ ಫಲಪ್ರದಗೊಂಡಿದೆ. ನಿವೇಶನ ಹಂಚಿಕೆ ಬಳಿಕ ವಸತಿ ಸೌಕರ್ಯ ಒದಗಿಸಲು ಪ್ರಯತ್ನ ನಡೆಸಲಾಗುವುದು ಎಂದು ನಮ್ಮ ಮನವಿಗೆ ಸ್ಪಂದಿಸಿ ಹಣ ಬಿಡುಗಡೆ ಮಾಡಿರುವುದು ಸ್ವಾಗತರ್ಹ ಎಂದು ಕದ್ದಣಿಯಂಡ ಹರೀಶ್ ಬೋಪಣ್ಣ ತಿಳಿಸಿದ್ದಾರೆ.