ಶನಿವಾರಸಂತೆ, ಆ. ೧೬: ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸಮೀಪದ ಕೊಡ್ಲಿಪೇಟೆಯ ರುಕ್ಮಿಣಿ ಪಾಂಡುರAಗ ದೇವಾಲಯದ ಮುಂಭಾಗ ಬರೆ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದೇವಾಲಯದ ಮುಂದೆ ಐದಾರು ಕಡೆ ಕುಸಿದಿವೆ.

ಎತ್ತರದಲ್ಲಿರುವ ದೇವಾಲಯದ ಮುಂಭಾಗ ಹಾಗೂ ೮-೧೨ ಅಡಿ ಆಳದಲ್ಲಿರುವ ಗದ್ದೆಗಳ ನಡುವೆ ನಿರ್ಮಿಸಿರುವ ತೋಡಿನಿಂದ ನಿರಂತರ ಹರಿಯುತ್ತಿರುವ ನೀರಿನಿಂದ ಬರೆ ಕುಸಿತವಾಗಿದೆ. ಯಂತ್ರದಿAದ ತೋಡು ನಿರ್ಮಿಸಿದ್ದು ಕೆಲ ವರ್ಷಗಳಿಂದ ಸ್ವಲ್ಪ ಸ್ವಲ್ಪ ಕುಸಿಯುತ್ತಿದ್ದ ಬರೆ ಈ ವರ್ಷದ ಅಧಿಕ ಮಳೆ, ಭೂಮಿಯ ತೇವಾಂಶದಿAದ ಜಾಸ್ತಿ ಪ್ರಮಾಣದಲ್ಲಿ ಕುಸಿದಿದೆ.

ಇದೀಗ ಈ ದೇವಾಲಯಕ್ಕೆ ಅಪಾಯ ಎದುರಾಗಿದ್ದು ತಡೆಗೋಡೆ ನಿರ್ಮಿಸಿಕೊಡುವುದಾಗಿ ಹೇಳಿದ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು, ಶಾಸಕರು ಎಲ್ಲರಿಗೂ ಹಲವಾರು ಬಾರಿ ಪರಿಹಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ಶ್ರೀನಾಮದೇವ ಸಂಪಿ ಸಮಾಜದ ಅಧ್ಯಕ್ಷ ಡಿ. ಮೋಹನ್ ಕುಮಾರ್ ಕೋಳೆಕರ್ ಪ್ರಸ್ತುತ ಬರೆ ಕುಸಿತದ ಬಗ್ಗೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದು ಕಂದಾಯ ನಿರೀಕ್ಷಕ ಮನುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದೇವಾಲಯದ ರಕ್ಷಣೆಗೆ ತಡೆಗೋಡೆ ನಿರ್ಮಾಣವಾಗಲೇಬೇಕು. ದೇವಾಲಯ ಮುಂಭಾಗದ ಕೆಳಗೆ ಉದ್ದಕ್ಕೂ ಗದ್ದೆ ಇದೆ. ಅಪಾಯದ ಬಗ್ಗೆ ಶಾಸಕರ ಗಮನ ಸೆಳೆದಿದ್ದು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ. ತಡೆಗೋಡೆ ಒಂದೇ ದೇವಾಲಯದ ರಕ್ಷಣೆಗೆ ಶಾಶ್ವತ ಪರಿಹಾರ ಎಂದು ಡಿ. ಮೋಹನ್‌ಕುಮಾರ್ ಕೋಳೆಕರ್ ತಿಳಿಸಿರುತ್ತಾರೆ.