ಮಡಿಕೇರಿ, ಆ. ೧೬: ಕೊಡಗು ಪ್ರೆಸ್‌ಕ್ಲಬ್ ಆಶ್ರಯದಲ್ಲಿ ತಾ. ೧೮ ರಂದು ಪತ್ರಿಕಾ ಭವನದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಯೋಜಿಸಲಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ ೧೦ ಗಂಟೆಯಿAದ ೧೧ ಗಂಟೆಯವರೆಗೆ ಕೊಡಗು ಪ್ರೆಸ್‌ಕ್ಲಬ್ ಸದಸ್ಯರಾಗಿರುವ ಪತ್ರಿಕಾ ಛಾಯಾಗ್ರಾಹಕರಿಗೆ ಮನರಂಜನಾ ಸ್ಪರ್ಧೆ ಆಯೋಜಿಸಲಾಗಿದೆ. ೧೧ ಗಂಟೆಗೆ ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಉದ್ಯಮಿ ಅಂಬೆಕಲ್ ನವೀನ್ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ. ಹಿರಿಯ ಛಾಯಾಗ್ರಾಹಕ ವಿಘ್ನೇಶ್ ಭಟ್ ಛಾಯಾಚಿತ್ರಗಳ ವಿಮರ್ಶೆ ಮಾಡಲಿದ್ದಾರೆ. ಹಿರಿಯ ಛಾಯಾಗ್ರಾಹಕ ರಾಜ್ ಮಾಚಯ್ಯ ಅವರಿಂದ ಅಪರೂಪದ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಉದ್ಯಮಿ ಮಾರ್ಟಿನ್ ಬಹುಮಾನ ವಿತರಿಸಲಿದ್ದು, ಕಾರ್ಯಕ್ರಮ ಸಂಚಾಲಕ ಕುಡಿಯರ ದಿವಾಕರ ಭೋಜಪ್ಪ ಉಪಸ್ಥಿತರಿರುತ್ತಾರೆ.

ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ವಿಶ್ವ ಛಾಯಾಗ್ರಹಣ ದಿನ ಪ್ರಯುಕ್ತ ವನ್ಯಜೀವಿಗಳ ಜೀವನ ಕ್ರಮ ಕುರಿತು ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ. ನಂದ ಗುಜ್ಜರ್ ಸ್ಮರಣಾರ್ಥ ಬೆಸ್ಟ್ ವಿಡಿಯೋಗ್ರಫಿ ಹಾಗೂ ಜೀವನ್ ಪಾಲೇಕಾಡ್ ಸ್ಮರಣಾರ್ಥ ಬೆಸ್ಟ್ ಫೋಟೋಗ್ರಫಿ ಬಹುಮಾನ ನೀಡಲಾಗುತ್ತದೆ. ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತಲಾ ೫ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ.