ಗೋಣಿಕೊಪ್ಪಲು, ಆ. ೧೬: ರಾಜ್ಯದ ಸಾಹಿತಿ ಬರಗೂರು ರಾಮಚಂದ್ರಪ್ಪನವರು ‘ಭಾರತೀ ನಗರ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದು ಈ ಪುಸ್ತಕದ ಪುಟ ಸಂಖ್ಯೆ ೫೬ ಹಾಗೂ ೫೭ ರಲ್ಲಿ ಭಾರತದ ರಾಷ್ಟçಗೀತೆಯನ್ನು ಜನಗಣಮನ ಎಂದು ಪ್ರಾರಂಭಿಸಿ ಬಳಿಕ ಅವಮಾನಕರವಾಗಿ ಬರೆದು ಭಾರತದ ರಾಷ್ಟçಗೀತೆಯನ್ನು ತಮ್ಮ ಪುಸ್ತಕದ ಮೂಲಕ ವಿಡಂಬನೆ ಮಾಡಿ ಮನೋವಿಕೃತಿಯನ್ನು ಮೆರೆದಿದ್ದಾರೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಇದರಿಂದ ಇಡೀ ದೇಶದ ಪ್ರಜೆಗಳು ತಲೆತಗ್ಗಿಸುವಂತಾಗಿದೆ. ಕೂಡಲೆ ಸಾಹಿತಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ರೈತ ಸಂಘದ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ಸಿದ್ದಾಪುರದ ಕೆ.ಬಿ. ಹೇಮಚಂದ್ರ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅತ್ಯಂತ ಕ್ಷÄಲ್ಲಕ ರೀತಿಯಲ್ಲಿ ತಮ್ಮ ಪುಸ್ತಕದಲ್ಲಿ ಭಾರತದ ರಾಷ್ಟçಗೀತೆಗೆ ಅವಮಾನಿಸಲಾಗಿದೆ. ಕರ್ನಾಟಕ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಪೋಷಣೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಪ್ರತಿವರ್ಷ ನೀಡುತ್ತಿದೆ. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಸಂಪುಟ ದರ್ಜೆ ಮಂತ್ರಿಯ ಸ್ಥಾನಮಾನ ನೀಡಿದ್ದು ಈ ಹಣ ರಾಜ್ಯದ ತೆರಿಗೆದಾರರ ಹಣವಾಗಿದೆ. ಅಗಾಧ ಪ್ರಮಾಣದಲ್ಲಿ ಸರ್ಕಾರದಿಂದ ಅನುದಾನದ ರೂಪದಲ್ಲಿ ಹಣ ಪಡೆಯುತ್ತಿದ್ದಾರೆ. ವಿವಾದಾತ್ಮಕ ಪುಸ್ತಕ - ‘ಭಾರತೀ ನಗರ’ವನ್ನು ಪ್ರಕಟಣೆ ಮಾಡುವ ಮೂಲಕ ಬೇಜವಾಬ್ದಾರಿಯಿಂದ ಅಕಾಡೆಮಿಯು ನಡೆದುಕೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕಾಡೆಮಿಯ ಸಂಪಾದಕೀಯ ಮಂಡಳಿ ಇಂತಹ ರಾಷ್ಟçದ್ರೋಹ ಎಸಗುವ ಕೆಲಸ

(ಮೊದಲ ಪುಟದಿಂದ) ನಿರ್ವಹಿಸಿದೆ ಎಂದು ಗಂಭೀರವಾಗಿ ಆರೋಪಿಸಿರುವ ಇವರು ಪುಸ್ತಕದ ಪ್ರಕಟಣೆಯ ಮುನ್ನ ಪರಿಶೀಲನೆ ನಡೆಸುವಲ್ಲಿ ವಿಫಲರಾಗಿದ್ದಾರೆ. ನಮ್ಮ ರಾಷ್ಟçಗೀತೆಗೆ ಅವಮಾನಿಸಿದ ಇಂತಹ ವಿಕೃತಿ ಮೆರೆದಿರುವ ಸಾಲುಗಳನ್ನು ಪುಟ ನಂಬರ್ ೫೬, ೫೭ ರಲ್ಲಿ ಅಚ್ಚು ಹಾಕುವ ಮುನ್ನ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯೇ ನಡೆಸಿಲ್ಲ. ಯಾವುದೇ ಕಾರಣಕ್ಕೂ ರಾಷ್ಟçಗೀತೆಯನ್ನೇ ಅಪಮಾನಿಸುವ ಈ ಸಾಲುಗಳನ್ನು ಪ್ರಕಟ ಮಾಡಬಾರದಿತ್ತು. ಆದರೆ ಇದನ್ನು ಅಚ್ಚು ಹಾಕಿಸುವ ಸಂದರ್ಭ ಈ ವ್ಯಕ್ತಿಗಳು ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕೃತ್ಯ ನಾಡಿನ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನು ರೀತ್ಯಾ ಅಪರಾಧವಾಗಿರುತ್ತದೆ. ಇಡೀ ದೇಶದ ನೂರಾರು ಕೋಟಿ ದೇಶ ಭಕ್ತರು ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಿಸಿರುವ ಈ ಸಂದರ್ಭದಲ್ಲಿ ಮತ್ತು ಎಲ್ಲರೂ ರಾಷ್ಟçಗೀತೆ ಹಾಡುವ ಸಂದರ್ಭ ಎದ್ದು ನಿಂತು ಪುಟ್ಟ ಬಾಲಕ ಬಾಲಕಿಯರಿಂದ ವಯೋವೃದ್ಧರವರೆಗೆ ಗೌರವ ಸಲ್ಲಿಸಿರುವ ಈ ಸನ್ನಿವೇಶದಲ್ಲಿ ರಾಷ್ಟçಗೀತೆಯನ್ನು ತಿರುಚುವ ಮೂಲಕ ಅವಮಾನಿಸಲಾಗಿದೆ. ಈ ವಿವಾದಾತ್ಮಕ ಪುಸ್ತಕ-‘ಭಾರತೀ ನಗರ’ವನ್ನು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿರುವ ಇವರು ರಾಷ್ಟçಗೀತೆಗೆ ಎಸಗಿರುವ ಈ ಅಪಚಾರದ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನಾಡಿನ ಜನತೆ ಆಘಾತಕ್ಕೊಳಗಾಗಿದ್ದಾರೆ. ಈ ಪುಸ್ತಕದ ಪ್ರಕಟಣೆಗೆ ಕಾರಣರಾದ ಸಾಹಿತಿ ಬೆಂಗಳೂರಿನ ಬರಗೂರು ರಾಮಚಂದ್ರಪ್ಪ ಹಾಗೂ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪ್ರಕಾಶಕರು ಹಾಗೂ ಸಂಪಾದಕೀಯ ಮಂಡಳಿ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಮೇಲೆಯೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

-ಹೆಚ್.ಕೆ. ಜಗದೀಶ್