ಮಡಿಕೇರಿ, ಆ. ೧೬: ೭೫ನೆಯ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವದಲ್ಲಿ ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿಬಿಂಬಿಸಲು ಕೊಡವ ಸಾಂಪ್ರದಾಯಿಕ ಧಿರಿಸಿಗೆ ಅವಕಾಶ ಲಭಿಸಿರುವುದು ವಿಶೇಷವಾಗಿದೆ.

ಪ್ರಧಾನಿ ಮೋದಿ ಅವರ ಪರಿಕಲ್ಪನೆಯಂತೆ ಇಡೀ ಭಾರತದ ನಕ್ಷೆಯನ್ನು ಆಯಾ ರಾಜ್ಯಗಳ ಭೂಪಟದ ಮಾದರಿಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳ ಮೂಲಕ ಪ್ರತಿ ಬಿಂಬಿಸಲಾಗಿತ್ತು. ಪ್ರತಿ ರಾಜ್ಯದಿಂದ ಆಯಾ ರಾಜ್ಯಕ್ಕೆ ಸಂಬAಧಿಸಿದ ವಿಶೇಷವಾಗಿ ಗುರುತಿಸಲ್ಪಡುವ ಸಂಸ್ಕೃತಿಗೆ ಸಂಬAಧಿಸಿದ ಧಿರಿಸುಗಳನ್ನು ಧರಿಸಿದ ಎನ್‌ಸಿಸಿ ಕೆಡೆಟ್‌ಗಳನ್ನು ಇದಕ್ಕಾಗಿ ತಯಾರು ಮಾಡಲಾಗಿತ್ತು. ಇದರಲ್ಲಿ ಕರ್ನಾಟಕ ರಾಜ್ಯದ

(ಮೊದಲ ಪುಟದಿಂದ) ನಕಾಶೆಯ ಮಾದರಿಯಲ್ಲಿ ಭಾರತದ ಭೂಪಟ ದಲ್ಲಿ ರಾಜ್ಯವನ್ನು ಪ್ರತಿಬಿಂಬಿಸುವು ದಕ್ಕಾಗಿ ಕೊಡವ ಸಾಂಪ್ರದಾಯಿಕ ಧಿರಿಸಿಗೆ ಅವಕಾಶ ಕಲ್ಪಿಸಲಾಗಿತ್ತು.

ಕುಪ್ಯಚೇಲೆ ಹಾಗೂ ಕೊಡವ ಸೀರೆಯ ವೇಷಧರಿಸಿದ್ದ ಎನ್‌ಸಿಸಿ ಕೆಡೆಟ್‌ಗಳು ಗಮನ ಸೆಳೆದರು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು ೩೮ ಕೆಡೆಟ್‌ಗಳು ಇದರಲ್ಲಿ ಭಾಗಿಗಳಾಗಿದ್ದರು. ಈ ತಂಡವನ್ನು ೧೯ನೇ ಕರ್ನಾಟಕ ಬೆಟಾಲಿಯನ್‌ನ ಸಿಇಓ (ಕರ್ನಾಟಕ-ಗೋವಾ ಕಂಟಿAಜೆAಟ್ ಕಮಾಂಡರ್) ಮುನ್ನಡೆಸಿದ್ದರು.

ಯಾವ ಸಂಸ್ಕೃತಿಯನ್ನು ರಾಜ್ಯವನ್ನು ಪ್ರತಿಬಿಂಬಿಸಲು ಬಳಸುವುದು ಎಂಬ ವಿಚಾರ ಕೊನೆಯ ಕ್ಷಣದಲ್ಲಿ ತೀರ್ಮಾನವಾಗಿದ್ದು, ದೆಹಲಿಯಲ್ಲಿದ್ದ ಈ ತಂಡವನ್ನು ಸಾಧ್ಯವಾದಷ್ಟು ಮಟ್ಟದಲ್ಲಿ ತಯಾರು ಮಾಡಲಾಗಿತ್ತು. ತಂಡ ಮೊದಲೇ ದೆಹಲಿಯಲ್ಲಿದ್ದರಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದರಿAದ ಸಾಂಪ್ರದಾಯಿಕ ಧಿರಿಸು ಸಂಗ್ರಹಿಸುವುದು ತುಸು ಕಷ್ಟಕರವಾದರೂ ಪ್ರಯತ್ನ ನಡೆಸಿ ಯಶಸ್ಸು ಕಂಡಿರುವುದಾಗಿ ಎನ್‌ಸಿಸಿ ಮೂಲಗಳು ಹರ್ಷ ವ್ಯಕ್ತಪಡಿಸಿವೆ.

ಈ ಎಲ್ಲಾ ಕೆಡೆಟ್‌ಗಳೊಂದಿಗೆ ಪ್ರಧಾನಿ ಮೋದಿ ಅವರು ಬೆರೆತು ನಗುಮುಖದಿಂದ ಮಾತನಾಡಿಸಿದ್ದು, ಈ ಬಾರಿಯ ಅಮೃತ ಮಹೋತ್ಸವದ ವಿಶೇಷವಾಗಿತ್ತು.