ಮಡಿಕೇರಿ, ಆ. ೧೬: ಮಕ್ಕಳಲ್ಲಿ ಮಾನಸಿಕವಾಗಿ ಸ್ಥೆöÊರ್ಯ ತುಂಬುವ ಸಲುವಾಗಿ ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ನ ಸಾಮಾಜಿಕ ಕಾರ್ಯ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.

ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆ, ಪ.ಪೂ.ಕಾಲೇಜು ಹಾಗೂ ಮೂರ್ನಾಡು ಪ್ರೌಢಶಾಲೆಗಳಲ್ಲಿ ತರಬೇತಿ ನೀಡಲಾಯಿತು.

೫೦೦ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇಂದಿನಿAದ ಎಲ್ಲೆಲ್ಲಿ ತರಬೇತಿ..?

ತಾ.೧೭ರಂದು (ಇಂದು) ಮೂರ್ನಾಡು ಮಾರುತಿ ಪ್ರೌಢಶಾಲೆ, ಪ.ಪೂ. ಕಾಲೇಜು, ಮಡಿಕೇರಿ ಜ.ತಿಮ್ಮಯ್ಯ ಪಬ್ಲಿಕ್ ಶಾಲೆ, ಕಡಗದಾಳು ಸರಕಾರಿ ಪ್ರೌಢಶಾಲೆ, ನಾಪೋಕ್ಲು ಅಂಕುರ್ ಶಾಲೆ, ವೀರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ತಾ. ೧೮ ರಂದು ಅರಮೇರಿ ಎಸ್‌ಎಂಎಸ್ ಶಾಲೆ, ಮೂರ್ನಾಡು ಪ.ಪೂ. ಕಾಲೇಜು, ಅಮ್ಮತ್ತಿಯ ಗುಡ್ ಶೆರ‍್ಡ್ ಕಾನ್ವೆಂಟ್. ತಾ. ೧೯ ರಂದು ವೀರಾಜಪೇಟೆಯ ತ್ರಿವೇಣಿ ಸ್ಕೂಲ್, ಪ್ರಗತಿ ಸ್ಕೂಲ್, ಸಂತ ಅನ್ನಮ್ಮ ಶಾಲೆ, ಪೊನ್ನಂಪೇಟೆಯ ಸಾಯಿ ಶಂಕರ ಶಾಲೆ, ಮಡಿಕೇರಿಯ ಕೊಡಗು ವಿದ್ಯಾಲಯ, ಕುಶಾಲನಗರದ ನಳಂದ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ ೧೦ ರಿಂದ ಮ. ೧ರವರೆಗೆ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನ ೨ ರಿಂದ ೪ರ ವರೆಗೆ ಪೋಷಕರು ಹಾಗೂ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.