ಮಡಿಕೇರಿ, ಆ. ೧೫: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಯೂತ್ ರೆಡ್‌ಕ್ರಾಸ್ ಘಟಕದ ವತಿಯಿಂದ ‘ವಿಶ್ವ ಜಿನೇವಾ ದಿನಾಚರಣೆ’ಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ರೆಡ್‌ಕ್ರಾಸ್ ಅಧ್ಯಕ್ಷ ರೊಟೇರಿಯನ್ ರವೀಂದ್ರರೈ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸಿ. ಜಗತ್ ತಿಮ್ಮಯ್ಯ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಸಲಹೆಗಾರರು ಮತ್ತು ಹಿಂದಿ ವಿಭಾಗದ ಮುಖ್ಯಸ್ಥರಾದ ಬಿ.ಹೆಚ್. ತಳವಾರ, ಹಿಂದಿ ಉಪನ್ಯಾಸಕಿ ಮತ್ತು ರೆಡ್‌ಕ್ರಾಸ್ ಘಟಕದ ಸಹಸಂಚಾಲಕರಾದ ಖುರ್ಷಿದಾಬಾನು, ಕಾಲೇಜಿನ ಐಕ್ಯೂಎಸಿ ಸಂಯೋಜಕರು ಮತ್ತು ಗಣಿತ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ. ಆರ್, ಹಿಂದಿ ಪ್ರಾಧ್ಯಾಪಕ ಶ್ರೀಧರ ಹೆಗಡೆ ಹಾಗೂ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿನಿ ಕೃತಿಕ ಸ್ವಾಗತಿಸಿ, ವಿನೋದ್ ಶೆಟ್ಟಿ ಮತ್ತು ಕೃತಿಕ ಪ್ರಾರ್ಥಿಸಿದರು. ರೇಚಲ್ಸಿಲ್ವೆಸ್ಟ ಅತಿಥಿಗಳನ್ನು ಪರಿಚಯಿಸಿ, ಸವಿತಾ ನಿರೂಪಿಸಿದರು. ನವ್ಯ ವಂದಿಸಿದರು.