ಭಾಗಮಂಡಲ, ಆ. ೧೫: ಯಾವುದೇ ಊರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಅಡೆತಡೆಗಳು ಬರುವುದು ಸಹಜ; ಆದರೆ ಅದನ್ನು ಎದುರಿಸುವ ಮನೋಸ್ಥೆöÊರ್ಯ ಹಾಗೂ ಆ ಊರಿನ ಜನರ ವಿಶ್ವಾಸ ಗಳಿಸುವುದರೊಂದಿಗೆ ಕೆಲಸ ಮಾಡುವುದು ಉತ್ತಮ ಎಂದು ಹೈಕೋರ್ಟ್ ಹಿರಿಯ ವಕೀಲ ಮೊಟ್ಟನ ರವಿಕುಮಾರ್ ಹೇಳಿದರು.
ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕರ ವತಿಯಿಂದ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾಗಮಂಡಲ-ಪಟ್ಟಿ-ತೊಡAಕಾನ-ಅರAತೋಡು ರಸ್ತೆ ಅಭಿವೃದ್ಧಿ ಕುರಿತು ಪ್ರಯತ್ನ ಮಾಡಲಾಗುವುದು. ಭಾಗಮಂಡಲ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಬಡವರ್ಗದ ಜನರು ವಾಸಿಸುತ್ತಿದ್ದಾರೆ. ಇಲ್ಲಿಗೆ ಸುಸಜ್ಜಿತವಾದ ಆಸ್ಪತ್ರೆಯೊಂದರ ಅಗತ್ಯವಿದ್ದು, ಈನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ, ದೇಶದ ಉದ್ದಗಲಕ್ಕೂ ಸ್ವಾತಂತ್ರೊö್ಯÃತ್ಸವ ಮಹೋತ್ಸವ ಮಾಡುತ್ತಿದ್ದು, ಪ್ರಧಾನಿ ಮೋದಿ ಅವರ ಕರೆಯಂತೆ ಮೂರು ದಿನ ಮನೆ ಮನೆಯಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮದ ಜೊತೆಯಲ್ಲಿ ಈ ದಿನ ನಾವು ಸಮಾಜಕ್ಕೆ ಕೊಡುಗೆ ನೀಡಿದ ಇದೇ ಗ್ರಾಮದವರಾದ ಮೊಟ್ಟನ ಕಾರ್ಯಪ್ಪ ರವಿಕುಮಾರ್ ಅವರನ್ನು ಭಾಗಮಂಡಲ ನಾಡಿನ ಸಮಸ್ತ ನಾಗರಿಕರ ಪರವಾಗಿ ಊರಿಗೆ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗಿದೆ. ಇವರು ಸಮಾಜದಿಂದ ಯಾವುದೇ ಫಲಾಪೇಕ್ಷೆಗಳನ್ನು
(ಮೊದಲ ಪುಟದಿಂದ) ನಿರೀಕ್ಷಿಸದೆ ಭಾಗಮಂಡಲದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದು, ಇವರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಊರಿನಲ್ಲಿ ಯಾವುದೇ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಅಪಪ್ರಚಾರ ಹಾಗೂ ತೊಡಕುಂಟು ಮಾಡುವುದು ಸಹಜವಾಗಿದ್ದು, ಅವುಗಳನ್ನು ಲೆಕ್ಕಿಸದೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದರು.
ಸ್ಥಳೀಯ ಹಿರಿಯ ಮುಖಂಡ ರವಿ ಹೆಬ್ಬಾರ್ ಸನ್ಮಾನಿತರ ಬಗ್ಗೆ ಮಾತನಾಡಿ, ಮೊಟ್ಟನ ರವಿಕುಮಾರ್ ಈ ನಾಡಿನಲ್ಲಿ ಜನಿಸಿದ್ದು, ಬೆಂಗಳೂರಿನಲ್ಲಿ ವಾಸವಿದ್ದಾರೆ. ತನ್ನ ನಾಡಿಗೆ ಏನಾದರೂ ಒಂದು ಕೊಡುಗೆ ನೀಡಬೇಕೆಂದು ನಾಡಿನ ಚೇರಂಗಾಲದಲ್ಲಿ ಕಾವೇರಿ ಜನ್ಮಭೂಮಿ ಟ್ರಸ್ಟ್ ರಚಿಸಿಕೊಂಡು ಅನಾಥಾಶ್ರಮವೊಂದನ್ನು ಸ್ಥಾಪಿಸಿ ಅನಾಥ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ಅಲ್ಲದೆ ಸೈನ್ಯದಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ವೀರಯೋಧರಿಗೆ ಯುದ್ಧ ಸ್ಮಾರಕ ಸ್ಥಾಪಿಸಿದ್ದು, ಮಳೆಗಾಲದಲ್ಲಿ ಕಾವೇರಿ, ಕನ್ನಿಕೆ ನದಿಯಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದ್ದನ್ನು ಮನಗಂಡು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದೂರನ್ನು ದಾಖಲಿಸಿ ನದಿಯ ಹೂಳು ತೆಗಿಯಲು ಸರ್ಕಾರಕ್ಕೆ ಆದೇಶವನ್ನು ನೀಡಲು ಯಶಸ್ವಿಯಾಗಿ ಹೂಳು ತೆಗೆಯುವ ಕಾರ್ಯ ನಡೆದಿದೆ. ನಂತರ ಎರಡನೇ ಬಾರಿಗೆ ಪ್ರತಿವಾದಿಸಿ ರೂ. ೯೮ ಲಕ್ಷದಷ್ಟು ಮತ್ತೆ ಹೂಳೆತ್ತಲು ಬಿಡುಗಡೆಗೊಳಿಸಿದ್ದು, ಸದ್ಯದಲ್ಲಿ ಈ ಕಾರ್ಯ ಆರಂಭವಾಗಲಿದೆ ಎಂದರು.
ಭಾಗಮAಡಲ ಠಾಣಾಧಿಕಾರಿ ಪ್ರಿಯಾಂಕ ತ್ಯಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿದ್ದು, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಸಂಯಮ ಉತ್ತಮ ನಡತೆಯನ್ನು ರೂಪಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೆಕು. ಇದರಲ್ಲಿ ಪೋಷಕರ ಪಾತ್ರವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಈ ಸಂದರ್ಭ ಭಾಗಮಂಡಲ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕರಿಂದ ದೇಶಭಕ್ತಿ ಗೀತೆಗಳು ಮೂಡಿಬಂದವು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮಿತಾ ವಹಿಸಿದ್ದರು. ಕುದುಕುಳಿ ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಟ್ಟನ ಜಯಮ್ಮ ರವಿಶಂಕರ್, ಪ್ರಮುಖರಾದ ಪಟ್ಟಡ ಸಂಜು, ನಿಡ್ಯಮಲೆ ರವೀಂದ್ರ, ಚಲನ್ ನಿಡ್ಯಮಲೆ, ಕುದುಕುಳಿ ಅಶ್ವತ್ ಸೇರಿದಂತೆ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಗಂಗಾಧರ, ವಿಜಯ್, ದಿನೇಶ್ ಅಯ್ಯಣ್ಣಿರ ಪ್ರಾರ್ಥಿಸಿದರೆ, ನಿರ್ದೇಶಕ ನಂಜುAಡಪ್ಪ ಕಾರ್ಯಕ್ರಮ ನಿರೂಪಿಸಿದರು. ದೇವಂಗೋಡಿ ಹರ್ಷ ವಂದಿಸಿದರು.
-ಸುನಿಲ್, ಸುಧೀರ್