ಮಡಿಕೇರಿ, ಆ. ೧೫: ಆಗಸ್ಟ್ ೨೨ ವಿಶ್ವ ಜಾನಪದ ದಿನವಾಗಿದ್ದು, ಅಂದು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಘಟಕಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ತಿಳಿಸಿದ್ದಾರೆ.

೨೨ ರ ಬೆಳಿಗ್ಗೆ ಮಡಿಕೇರಿ ತಾಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕಾಧ್ಯಕ್ಷ ಎಚ್.ಟಿ. ಅನಿಲ್ ತಿಳಿಸಿದ್ದಾರೆ. ಅಂದು ಜಾನಪದ ಪರಿಣಿತರಾದ ಶೋಭಾ ಸುಬ್ಬಯ್ಯ, ರಾಣಿ ಮಾಚಯ್ಯ, ಕಾಶಿ ಅಚ್ಚಯ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಾನಪದ ಕಲೆಯ ಸೊಗಡು ಮತ್ತು ವೈಷಿಷ್ಠö್ಯದ ಕುರಿತು ಮಾತನಾಡಲಿದ್ದಾರೆ. ಉಪಪ್ರಾಂಶುಪಾಲೆ ನಳಿನಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷೆ ಡಾ. ಕಾವೇರಿ ಪ್ರಕಾಶ್ ಉಪಸ್ಥಿತರಿರುತ್ತಾರೆ. ಈ ಸಂದರ್ಭ ಕಿಗ್ಗಾಲುವಿನ ನಿವಾಸಿ, ಜಾನಪದ ಕರಕುಶಲ ತಜ್ಞೆ ರಂಜನಿ ರಂಜಿತ್ ಅವರನ್ನು ಸನ್ಮಾನಿಸಲಾಗುತ್ತದೆ.

ಪೊನ್ನಂಪೇಟೆ ಜಾನಪದ ಪರಿಷತ್ ಘಟಕದಿಂದ ಸಾಯಿಶಂಕರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಧ್ಯಾಹ್ನ ೨ ಗಂಟೆಗೆ ದಿನಾಚರಣೆ ನಡೆಯಲಿದೆ ಎಂದು ಘಟಕಾಧ್ಯಕ್ಷ ದಿಲನ್ ಚೆಂಗಪ್ಪ ತಿಳಿಸಿದ್ದಾರೆ. ಸಂಪನ್ಮೂಲ ವ್ಯಕ್ತಿ ಡಾ. ಜಿ. ಸೋಮಣ್ಣ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಶಾಲಾ ಮುಖ್ಯಸ್ಥ ಝರು ಗಣಪತಿ ಉಪಸ್ಥಿತರಿರುತ್ತಾರೆ. ವೀರಾಜಪೇಟೆ ತಾಲೂಕು ಘಟಕದಿಂದ ದೇವಣಗೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ

(ಮೊದಲ ಪುಟದಿಂದ) ಕಾರ್ಯಕ್ರಮ ನಡೆಯಲಿದೆ ಎಂದು ಘಟಕಾಧ್ಯಕ್ಷ ‘ನಾ ಕನ್ನಡಿಗ’ ಠೋಮಿ ಥೋಮಸ್ ತಿಳಿಸಿದ್ದಾರೆ. ಮುಖ್ಯ ಉಪನ್ಯಾಸಕರಾಗಿ ವಿದ್ವಾನ್ ದಿಲೀಪ್ ಕುಮಾರ್ ಹಾಗೂ ಮುಖ್ಯ ಅತಿಥಿಗಳಾಗಿ ಕೊಡವ ಕ್ಲಬ್‌ನ ಅಧ್ಯಕ್ಷರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಭಾಗವಹಿಸಲಿರುವರು.

ಕುಶಾಲನಗರ ತಾಲೂಕು ಘಟಕದ ವತಿಯಿಂದ ಸರಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಘಟಕಾಧ್ಯಕ್ಷ ಚಂದ್ರಮೋಹನ್ ತಿಳಿಸಿದ್ದಾರೆ. ಬಾಚರಣಿಯಂಡ ಅಪ್ಪಣ್ಣ ಅವರು ಉಪನ್ಯಾಸ ನೀಡಲಿದ್ದಾರೆ. ಪ್ರಾಂಶುಪಾಲ ಡಾ. ಸೀನಪ್ಪ ಉಪಸ್ಥಿತರಿರುತ್ತಾರೆ.

ಸೋಮವಾರಪೇಟೆ ಘಟಕದಿಂದ ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಜಾನಪದ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಘಟಕಾಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ. ಅಂದು ಜಾನಪದ ಕಲಾವಿದ ಬೆಸೂರು ಶಾಂತೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸು ವರು. ಶಾಂತೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಶಾಲಾ ಮುಖ್ಯಸ್ಥರು ಉಪಸ್ಥಿತರಿರುವರು.

ವಿಶ್ವ ಜಾನಪದ ದಿನದ ಅಂಗವಾಗಿ ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಘಟಕಾಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಮಾತನಾಡುತ್ತಾರೆ.