ಭ್ರಷ್ಟಾಚಾರ, ವಂಶ ಆಳ್ವಿಕೆ ಭಾರತದ ದೊಡ್ಡ ಸವಾಲುಗಳು - ನರೇಂದ್ರ ಮೋದಿ
ನವದೆಹಲಿ, ಆ. ೧೫ : ಸ್ವಾತಂತ್ರ‍್ಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ಕಾಂಗ್ರೆಸ್‌ಗೆ ಪರೋಕ್ಷವಾಗಿ ತಿವಿದಿದ್ದು, ಭ್ರಷ್ಟಾಚಾರ, ವಂಶ ಆಳ್ವಿಕೆ ಭಾರತದ ೨ ದೊಡ್ಡ ಸವಾಲುಗಳಾಗಿವೆ ಎಂದು ಹೇಳಿದ್ದಾರೆ. ಸತತ ೯ನೇ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ ರಾಷ್ಟçದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ. ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣವಾಗುತ್ತಿದೆ ಎಂದರು. ಅಂತೆಯೇ ಸಮಾಜದಲ್ಲಿ ಎಲ್ಲಿಯವರೆಗೆ ಭ್ರಷ್ಟಾಚಾರದ ಬಗ್ಗೆ ಅಸಹ್ಯದ ಭಾವನೆ ಬರಬೇಕು. ಸಮಾಜದಲ್ಲಿ ಭ್ರಷ್ಟಾಚಾರಿಗಳಿಗೆ ಗೌರವ ಇಲ್ಲದ ವಾತಾವರಣ ಮೂಡಬೇಕು. ಭ್ರಷ್ಟಾಚಾರದ ಬಗ್ಗೆ ಜಾಗ್ರತೆ ಬರಬೇಕು ಎಂದರು. ಸಂವಿಧಾನ ನಿರ್ಮಾತೃಗಳನ್ನು ನಾನು ಗೌರವಿಸುತ್ತೇನೆ. ಕಾಲಘಟ್ಟ ಬೇರೆ ಇದ್ದರೂ ನಮ್ಮ ಆಶಯಗಳು ಪ್ರತ್ಯೇಕ ಅಲ್ಲ. ಭಾರತದ ಅಭಿವೃದ್ಧಿ ಎನ್ನುವುದು ನಾವು ಎಲ್ಲಿಯೇ ಇದ್ದರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದ ಹಲವು ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ಬಲ ಹೆಚ್ಚಿಸಿವೆ. ನಾವು ಸಹಕಾರದ ಒಕ್ಕೂಟ ವ್ಯವಸ್ಥೆಯ ಜೊತೆಗೆ ನಮ್ಮ ರಾಜ್ಯಗಳಲ್ಲಿ ಆರೋಗ್ಯಕರ ಸ್ಪರ್ಧೆಯೂ ಇರಬೇಕು. ನಮ್ಮ ರಾಜ್ಯಗಳ ನಡುವೆ, ಸರ್ಕಾರಿ ಸೇವೆಗಳ ವಿಚಾರದಲ್ಲಿ ಸ್ಪರ್ಧೆಯ ವಾತಾವರಣ ಇರಬೇಕು ಎಂದು ನರೇಂದ್ರ ಮೋದಿ ಹೇಳಿದರು. ಪುಟ್ಟ ಮಕ್ಕಳಿಗೂ ನಾನು ನಮನ ಸಲ್ಲಿಸುತ್ತೇನೆ. ಮನೆಗಳಲ್ಲಿ ಐದು ವರ್ಷದ ಮಗು ವಿದೇಶಿ ಆಟಿಕೆಗಳಲ್ಲಿ ಆಡುವುದಿಲ್ಲ ಎಂದು ಸಂಕಲ್ಪ ಮಾಡಿದಾಗ ಆತ್ಮ ನಿರ್ಭರ್ ಭಾರತದ ಆಶಯ ಈಡೇರುತ್ತದೆ. ಉದ್ಯೋಗದ ಹೊಸ ಸಾಧ್ಯತೆಗಳು ಕಂಡುಬರುತ್ತಿವೆ. ಭಾರತವು ತಯಾರಿಕಾ ಕೇಂದ್ರ (ಮ್ಯಾನ್ಯು ಫ್ಯಾಕ್ಚರಿಂಗ್ ಹಬ್) ಆಗುತ್ತಿದೆ. ಮೊಬೈಲ್ ಸೇರಿದಂತೆ ಹಲವು ಉಪಕರಣಗಳು ಇಲ್ಲಿಯೇ ತಯಾರಾಗುತ್ತಿವೆ. ನಾವು ವಿದ್ಯುತ್ ಕ್ಷೇತ್ರದಲ್ಲಿಯೂ ಸ್ವಾವಲಂಬಿ ಆಗಬೇಕಿದೆ ಎಂದರು.
ಹುತಾತ್ಮ ಯೋಧರ ಕುಟುಂಬಕ್ಕೆ ೨೫ ಲಕ್ಷ ಪರಿಹಾರದೊಂದಿಗೆ ಸರಕಾರಿ ಉದ್ಯೋಗ
ಬೆಂಗಳೂರು, ಆ. ೧೫: ಹುತಾತ್ಮ ಯೋಧರ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ನೀಡುವುದರೊಂದಿಗೆ, ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಯಾವುದೇ ಅಡೆತಡೆಯಾಗದೆಯೇ ಹುತಾತ್ಮ ಯೋಧರ ಮನೆ ಬಾಗಿಲಿಗೆ ಉದ್ಯೋಗದ ಆದೇಶ ಪ್ರತಿಯನ್ನು ಕಳುಹಿಸಲಾಗುವುದು ಎಂದು ೭೫ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ದೇಶವನ್ನು ರಕ್ಷಿಸಲು ಸೈನಿಕರು ತಮ್ಮ ಪ್ರಾಣವನ್ನು ಮುಡಿಪಾಗಿಡುತ್ತಾರೆ ಮತ್ತು ತ್ಯಾಗ ಮಾಡುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರ್ವಹಿಸುತ್ತಿರುವಾಗ ಹುತಾತ್ಮರಾದರೆ, ಅವರ ಕುಟುಂಬಕ್ಕೆ ಭದ್ರತೆ ಒದಗಿಸಲು ಅನುಕಂಪದ ಆಧಾರದ ಮೇಲೆ ಅವರ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದರು. ಇದರೊಂದಿಗೆ, ಈಗಾಗಲೇ ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು. ಈ ಹಿಂದೆ ರೈತರು, ಮೀನುಗಾರರು, ನೇಕಾರರು ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಈ ಯೋಜನೆಯನ್ನು ಘೋಷಿಸಿದರು.
ಶಿವಮೊಗ್ಗದಲ್ಲಿ ಲಾಠಿಚಾರ್ಜ್ - ಚೂರಿ ಇರಿತ
ಶಿವಮೊಗ್ಗ, ಆ. ೧೫: ೭೫ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದಂದೆ ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಸಂಘಟನೆ ಕಾರ್ಯಕರ್ತರು ಅಮೀರ್ ಅಹ್ಮದ್ ವೃತ್ತದಲ್ಲಿ ಅಳವಡಿಸಿದ್ದ ವೀರ್ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಮುಂದಾಗಿದ್ದು ಈ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇನ್ನು ಫ್ಲೆಕ್ಸ್ ತೆರವು ಖಂಡಿಸಿ ಹಿಂದೂ ಪರ ಸಂಘಟನೆಗಳು ಧರಣಿ ನಡೆಸಿದ್ದು ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶಿವಮೊಗ್ಗ ನಗರದಲ್ಲಿ ೩ ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದAತಾಗಿದ್ದು ಎರಡು ಗಂಟೆ ಅವಧಿಯಲ್ಲಿ ಇಬ್ಬರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ. ಉಪ್ಪಾರಕೇರಿ ಬಡಾವಣೆಯಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಹಾಗೂ ಅಶೋಕ ನಗರದಲ್ಲಿ ಪ್ರವೀಣ್ ಎಂಬುವರಿಗೆ ಚೂರಿ ಇರಿಯಲಾಗಿದೆ.
ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆಯಲು ಅಸ್ಸಾಂ ಸರಕಾರ ನಿರ್ಧಾರ
ಗುವಾಹಟಿ, ಆ. ೧೫: ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡಲು ಅಸ್ಸಾಂ ಸರ್ಕಾರ ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆಯಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ ಘೋಷಿಸಿದ್ದಾರೆ. ಇಂದು ೭೫ನೇ ಸ್ವಾತಂತ್ರ‍್ಯೋತ್ಸವ ಭಾಷಣ ಮಾಡಿದ ಅಸ್ಸಾಂ ಸಿಎಂ, ರಾಜ್ಯ ಸರ್ಕಾರ ಔಪಚಾರಿಕವಾಗಿ ಒಂದು ಲಕ್ಷ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಹೆಚ್ಚಾಗಿ ಫೇಸ್‌ಬುಕ್ ಮತ್ತು ಟ್ವಿಟರ್ ಪೋಸ್ಟ್ಗಳಿಗೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಆಗಸ್ಟ್ ೧೪, ೨೦೨೨ ರ ಮಧ್ಯರಾತ್ರಿಯವರೆಗೆ ದಾಖಲಾಗಿರುವ ಮತ್ತು ಬಾಕಿ ಉಳಿದಿರುವ ಸಣ್ಣ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಇದರಿಂದಾಗಿ ನ್ಯಾಯಾಂಗವು ಇತರ ಗಂಭೀರ ಪ್ರಕರಣಗಳ ಮೇಲೆ ಹೆಚ್ಚು ಗಮನಹರಿಸುತ್ತದೆ ಎಂದು ಹೇಳಿದ್ದಾರೆ. ಪ್ರಕರಣಗಳನ್ನು ಹಿಂಪಡೆಯುವAತೆ ಸರ್ಕಾರವು ನ್ಯಾಯಾಂಗಕ್ಕೆ ಮನವಿ ಸಲ್ಲಿಸಲಿದೆ. ದಂಗೆಕೋರ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಪರೇಶ್ ಬರುವಾ ಬಣಕ್ಕೆ ಹಿಂಸಾಚಾರದ ಮಾರ್ಗ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಶರ್ಮಾ ಮನವಿ ಮಾಡಿದರು. ಅಲ್ಲದೆ ಅಸ್ಸಾಂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದರು.
ಕೆAಪುಕೋಟೆಯಲ್ಲಿ ‘ಮೇಡ್ ಇನ್ ಇಂಡಿಯಾ’ ಗನ್‌ಗಳು
ನವದೆಹಲಿ, ಆ. ೧೫: ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮ ಈ ಬಾರಿ ವಿಶೇಷವಾಗಿತ್ತು. ತ್ರಿವರ್ಣ ಧ್ವಜಕ್ಕೆ ೨೧ ಬಾರಿ ಕುಶಾಲ ತೋಪು ಸಿಡಿಸಿ ವಂದನೆ ಸಲ್ಲಿಸಲು ೭೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ವದೇಶಿ ಗನ್ ಗಳನ್ನು ಬಳಸಲಾಯಿತು. ಈವರೆಗೂ ಈ ಕಾರ್ಯಕ್ರಮಕ್ಕೆ ಬ್ರಿಟಿಷ್ ಗನ್‌ಗಳನ್ನು ಬಳಸಲಾಗುತಿತ್ತು. ಇದೇ ಮೊದಲ ಬಾರಿಗೆ ಎಂಐ- ೧೭ ಹೆಲಿಕಾಪ್ಟರ್ ಮೂಲಕ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ೭೫ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕೆ ಸ್ವದೇಶಿ ನಿರ್ಮಿತ ಗನ್‌ಗಳಿಂದ ಗೌರವ ವಂದನೆ ಸಲ್ಲಿಸಲಾಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ ಹೊವಿಟ್ಜರ್ ಗನ್‌ಗಳನ್ನು ಸೋಮವಾರ ಗೌರವ ವಂದನೆ ಸಮಾರಂಭಕ್ಕೆ ಬಳಸಲಾಗಿದ್ದು, ಆತ್ಮ ನಿರ್ಭರ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವತ್ತ ಮುನ್ನಡೆದಿರುವ ಭಾರತೀಯ ಯೋಧರು ಮತ್ತು ಸಶಸ್ತç ಪಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ೩೦೦ ಸಲಕರಣೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಯೋಧರು ನಿರ್ಧರಿಸಿದಾಗ ಅದು ಸಣ್ಣ ನಿರ್ಣಯವಲ್ಲ, ಆತ್ಮ ನಿರ್ಭರ ಭಾರತದ ಬೀಜ ಮುಂದೆ ಹೆಮ್ಮರವಾಗಿ ಬೆಳೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.