ಮಡಿಕೇರಿ, ಆ. ೧೪: ೨೦೨೨-೨೩ನೇ ಸಾಲಿಗೆ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪದವಿ ಬಿ.ಎ. ತರಗತಿಗಳಿಗೆ ಉಚಿತ ಪ್ರವೇಶಾತಿ ನೀಡಲಾಗುತ್ತಿದೆ. ಆಸಕ್ತ ವಿದ್ಯಾರ್ಥಿನಿಯರು ತಕ್ಷಣ ಕಾಲೇಜಿನ ಕಚೇರಿಯ ವೇಳೆಯಲ್ಲಿ ಬಂದು ಅರ್ಜಿಯನ್ನು ಪಡೆದು ಭರ್ತಿ ಮಾಡಿ ಈ ಕೆಳಗಿನ ದಾಖಲಾತಿಗಳೊಂದಿಗೆ ಪ್ರವೇಶಾತಿ ಪಡೆಯಲು ಈ ಮೂಲಕ ತಿಳಿಸಲಾಗಿದೆ.
ಕೊಡಬೇಕಾದ ದಾಖಲಾತಿಗಳು
ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪಿಯುಸಿ ವರ್ಗಾವಣೆ ಪತ್ರ, ಗುಣ ನಡತೆ ಪ್ರಮಾಣ ಪತ್ರ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ವಿದ್ಯಾರ್ಥಿನಿಯ ಬ್ಯಾಂಕ್ ಪಾಸ್ ಪುಸ್ತಕ ದಾಖಲಾತಿಗಳು ಹಾಗೂ ನಕಲು ಪ್ರತಿಗಳನ್ನು ನೀಡಬೇಕು. ಇತ್ತೀಚಿನ ಭಾವಚಿತ್ರವನ್ನು ಸಹ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ೯೯೪೫೧೮೫೭೮೩ ಅನ್ನು ಸಂಪರ್ಕಿಸಬಹುದು.