ವೀರಾಜಪೇಟೆ, ಆ. ೧೪: ವೀರಾಜಪೇಟೆ ಪುರಭವನದಲ್ಲಿ ಶಾಸಕರ ನೇತೃತ್ವದಲ್ಲಿ ಐತಿಹಾಸಿಕ ಗೌರಿ, ಗಣೇಶ ಉತ್ಸವ ಸಮಿತಿಯ ಸಭೆ ನಡೆಯಿತು.
ಸಭೆಯ ಮೊದಲಿಗೆ ಗೌರಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷ ಸಾಯಿನಾಥ್ ನಾಯಕ್ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ರಾತ್ರಿ ಹತ್ತರ ನಂತರ ಡಿ.ಜೆ., ಧ್ವನಿವರ್ಧಕ ಬಳಸಬಾರದು ಎಂದು ಆದೇಶ ಇರುವುದನ್ನು ಪೊಲೀಸ್ ಉಪ ಅಧೀಕ್ಷಕರು ತಿಳಿಸಿದ್ದಾರೆ. ಹಾಗಾಗಿ ಐತಿಹಾಸಿಕ ಹಬ್ಬವಾದ್ದರಿಂದ ಇತಿಮಿತಿಯಲ್ಲಾದರೂ ನಿಯಮ ಸಡಿಲಿಕೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ಶಾಸಕರಿಗೆ ಮನವಿ ಮಾಡಿದರು.
ಉತ್ಸವ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಸರ್ವೋಚ್ಚ ನ್ಯಾಯಾಲಯದ ಆದೇಶ ಇರುವುದರಿಂದ ಅದರ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಸಾಂಪ್ರದಾಯಿಕ ವಾದ್ಯಗಳನ್ನು ಬಳಕೆ ಮಾಡಿಕೊಂಡು ಉತ್ಸವವನ್ನು ಎಂದಿನAತೆ ಆಚರಣೆ ಮಾಡಬಹುದು ಎಂದರು.
ಉತ್ಸವಕ್ಕೆ ಬೇಕಾದ ವಿದ್ಯುತ್ ವ್ಯವಸ್ಥೆ, ರಸ್ತೆಯಲ್ಲಿರುವ ಗುಂಡಿ ಮುಚ್ಚುವುದು, ಕಾನೂನು ಸುವ್ಯವಸ್ಥೆ ಪರಿಪಾಲನೆ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಗಮನ ವಹಿಸುವಂತೆ ಸೂಚಿಸಿದರು.
ಉತ್ಸವ ಸಮಿತಿಯ ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ ಮಾತನಾಡಿದರು. ಕಾರ್ಯಕ್ರಮವನ್ನು ಪುರಸಭೆ ಸದಸ್ಯರಾದ ರಜನಿಕಾಂತ್ ನಿರೂಪಿಸಿದರು.
ವೇದಿಕೆಯಲ್ಲಿ, ಪೊಲೀಸ್ ಉಪ ಅಧೀಕ್ಷಕ ನಿರಂಜನ ರಾಜೇ ಅರಸ್, ತಹಶೀಲ್ದಾರ್ ಅರ್ಚನಾ ಭಟ್, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಪುರಸಭೆ ಸದಸ್ಯರುಗಳಾದ ತಸ್ಲಿನ ಅಖ್ತರ್, ಜ್ಯುನಾ, ಆಶಾ ಸುಬ್ಬಯ್ಯ, ಸುಭಾಷ್, ಮುಖ್ಯಾಧಿಕಾರಿ ಚಂದ್ರಕುಮಾರ್ ಉಪಸ್ಥಿತರಿದ್ದರು. ಪೊಲೀಸ್ ಅಧಿಕಾರಿಗಳು, ಲೋಕೋಪಯೋಗಿ, ಸೆಸ್ಕ್ ಅಭಿಯಂತರರು ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.