*ಗೋಣಿಕೊಪ್ಪ, ಆ. ೧೪: ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳು ಸ್ವಾತಂತ್ರ÷್ಯ ಹೋರಾಟಗಾರರ ಛದ್ಮವೇಶವನ್ನು ಹಾಕುವ ಮೂಲಕ ಗಮನ ಸೆಳೆದರು.
ಶಾಲೆಯಲ್ಲಿನ ೧ನೇ ತರಗತಿ ಯಿಂದ ೪ನೇ ತರಗತಿಯವರೆಗೆ ನಡೆದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಗಾಂಧಿಜಿ, ನೆಹರು, ಸುಭಾಷ್ ಚಂದ್ರ ಬೋಸ್ ಅವರ ಛದ್ಮವೇಶ ಧರಿಸಿದ್ದರು. ನಮ್ಮ ಸಂಸ್ಕöÈತಿಯನ್ನು ಬಿಂಬಿಸುವ ಮದು ಮಗಳು ಮತ್ತು ಮಧುಮಗನ ವೇಷ, ರೈತ, ಮರ, ಶಿಕ್ಷಕಿ ಹೀಗೆ ಹಲವು ವೇಶಗಳನ್ನು ತೊಟ್ಟು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಕಂಠಪಾಠ, ಧಾರ್ಮಿಕ ಪಠಣ, ಭಕ್ತಿಗೀತೆ, ಚಿತ್ರಕಲೆ, ಕಥೆ ಹೇಳುವುದು ಇವುಗಳ ಜೊತೆಗೆ ಮಣ್ಣಿನಿಂದ ಕಲಾಕೃತಿಗಳ ತಯಾರಿಯನ್ನು ಮಾಡಿದ್ದರು.
ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಸಹಶಿಕ್ಷಕರಾದ ಅನಿತಾಕುಮಾರಿ, ಧಮಯಂತಿ, ತ್ರಿವೇಣಿ, ಶಾರದ, ಇಂದಿರಾ, ಜಯಶ್ರೀ, ನಿರ್ಮಲ, ಜೋಸ್ಲಿಯಾ, ಸರಸ್ವತಿ, ಚಿತ್ರಕಲಾ ಶಿಕ್ಷಕ ಸತೀಶ್, ದೈಹಿಕ ಶಿಕ್ಷಕ ರಮಾನಂದ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ರಾಧ ಇದ್ದರು.