ಮಡಿಕೇರಿ, ಆ. ೧೩: ಭಾರತ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ೧೯೭೧ರ ಯುದ್ಧದಲ್ಲಿ ಪಾಲ್ಗೊಂಡ ಮಾಜಿ ಯೋಧರನ್ನು ಭಾರತೀಯ ಸೇನೆ ವಿಶೇಷವಾಗಿ ಗುರುತಿಸಿ ಪ್ರಶಂಸನಾ ಪತ್ರದೊಂದಿಗೆ ಅಭಿನಂದನೆ ಸಲ್ಲಿಸಿದೆ.

ಕೊಡಗಿನಲ್ಲಿ ಈ ಯುದ್ಧದಲ್ಲಿ ಪಾಲ್ಗೊಂಡ ೮೦ ಮಂದಿಯನ್ನು ಗುರುತಿಸಲಾಗಿದೆ. ಇವರಿಗೆ ದಕ್ಷಿಣ ಭಾರತ್ ಏರಿಯಾದ ಚೆನ್ನೆöÊನ ಜನರಲ್ ಆಫೀಸರ್ ಕಮಾಂಡಿAಗ್ ಲೆಫ್ಟಿನೆಂಟ್ ಜನರಲ್ ಎ. ಅರುಣ್ (ಙSಒ Sಒ ಗಿSಒ) ಅವರು ಸೇನೆಯ ಪರವಾಗಿ ಅಭಿನಂದನೆಯೊAದಿಗೆ ಪ್ರಶಂಸನಾ ಪತ್ರವನ್ನು ಕಳುಹಿಸಿದ್ದಾರೆ.

ಇದಕ್ಕಾಗಿ ಸೇನೆಯಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ಯೋರ್ವರನ್ನು ಜಿಲ್ಲೆಗೆ ಕಳುಹಿಸಲಾಗಿದೆ. ಇವರು ಈ ಎಲ್ಲಾ ಮಾಜಿ ಯೋಧರಿಗೆ ಸೇನೆಯ ಪರವಾದ ಈ ಪ್ರಶಂಸನಾ ಪತ್ರವನ್ನು ನೇರವಾಗಿ ತಲುಪಿಸಿದ್ದಾರೆ. ಈ ಮೂಲಕ ಇದು ಯೋಧರಲ್ಲಿ ಸಾರ್ಥಕ್ಯ ಭಾವನೆಯನ್ನು ಮೂಡಿಸಿದಂತಾಗಿದೆ.