ಮಡಿಕೇರಿ, ಆ. ೧೩ : ಭಾರತ ಸ್ವಾತಂತ್ರö್ಯ ಸಂದರ್ಭದಲ್ಲಿ ದೇಶ ಇಬ್ಭಾಗವಾದ ಘೋರ ದುರಂತ ಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಶನಿವಾರ ಚಾಲನೆ ನೀಡಿದರು.
ಭಾರತ ಸ್ವಾತಂತ್ರö್ಯ ಸಂದರ್ಭದಲ್ಲಿ ದೇಶ ವಿಭಜನೆಗೆ ಸಂಬAಧಿಸಿದ ಛಾಯಾಚಿತ್ರವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ವೀಕ್ಷಿಸಿದರು.
ಭಾರತ ಸ್ವಾತಂತ್ರö್ಯ ಅಮೃತ ಮಹೋತ್ಸವ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿಸ ಲಾಗಿರುವ ‘ಛಾಯಾಚಿತ್ರ ಪ್ರದರ್ಶನ’ವನ್ನು ಆಗಸ್ಟ್ ೧೫ರ ವರೆಗೆ ವೀಕ್ಷಿಸಲು ಅವಕಾಶವಿದೆ.
ಸ್ವಾತಂತ್ರö್ಯ ಸಂದರ್ಭದಲ್ಲಿ ದೇಶ ಇಬ್ಭಾಗವಾದ ದಿನಗಳಲ್ಲಿ ರೈಲು, ಎತ್ತಿನಗಾಡಿ ಹಾಗೂ ಲಾರಿಗಳಿಂದ ನಾಗರಿಕರು ತೆರಳುತ್ತಿರುವ ಛಾಯಾಚಿತ್ರಗಳು ಅಂದಿನ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುತ್ತಿವೆ. ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರು ಇದ್ದರು.