ವೀರಾಜಪೇಟೆ. ೧೪: ವೀರಾಜಪೇಟೆಯ ಹಿರಿಯ ಹಾಗೂ ಹೆಸರಾಂತ ಪತ್ರಕರ್ತರಾದ ಡಿ.ಎಂ. ರಾಜ್ಕುಮಾರ್ ಭಾನುವಾರದಂದು ಬೆಳಿಗ್ಗೆ ೮.೪೫ಕ್ಕೆ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಇವರಿಗೆ ೬೮ ವರ್ಷ ವಯಸ್ಸಾಗಿತ್ತು.
ಶಕ್ತಿ ದಿನಪತ್ರಿಕೆಯಲ್ಲಿ ಕಳೆದ ಮೂರೂವರೆ ದಶಕಗಳ ಕಾಲ ವೀರಾಜಪೇಟೆ ತಾಲೂಕು ಗೌರವ ವರದಿಗಾರರಾಗಿ ಸೇವೆ ಸಲ್ಲಿಸಿದ ರಾಜ್ಕುಮಾರ್ ಕೆಲವು ವರ್ಷಗಳ ಕಾಲ ಪ್ರಜಾವಾಣಿ ವರದಿಗಾರರಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದರು.
ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ಒಂದು ವರ್ಷದಿಂದ ವರದಿಗಾರಿಕೆಯಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಒಂದು ವಾರದಿಂದ ಚೇತರಿಸಿಕೊಂಡು ಮತ್ತೆ ವರದಿಗಾರಿಕೆ ಆರಂಭ ಮಾಡಿದ್ದರು.
ಆದರೆ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡ ಹಠಾತ್ ಉಸಿರಾಟದ ತೊಂದರೆ ಹಾಗೂ ಎದೆನೋವಿನಿಂದ ಇಂದು ನಿಧನರಾದರು. ಇವರು ಪತ್ನಿ ರುಕ್ಮಿಣಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇವರ ಅಂತಿಮ ದರ್ಶನಕ್ಕೆ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಸಂಪಾದಕ ಜಿ. ಚಿದ್ವಿಲಾಸ್ ಹಾಗೂ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ‘ಶಕ್ತಿ’ ಬಳಗದ ಪರವಾಗಿ ಆಗಮಿಸಿ ತಮ್ಮ ಅಂತಿಮ ನಮನ ಸಲ್ಲಿಸಿದರು.
ಕಾಂಗ್ರೆಸ್ ಕಾನೂನು ಘಟಕದ ಸಲಹೆಗಾರ ಎ.ಎಸ್. ಪೊನ್ನಣ್ಣ, ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪುರಸಭೆಯ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಸದಸ್ಯರುಗಳಾದ ರಾಜೇಶ್ ಪದ್ಮನಾಭ, ದೇಚಮ್ಮ, ಸಮಾಜ ಸೇವಕ ಸಂಕೇತ್ ಪೂವಯ್ಯ, ಕೆ.ಎಂ. ಸೋಮಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ಪಿ.ಎ., ಜೆಡಿಎಸ್ ನಗರ ಅಧ್ಯಕ್ಷ ಯೋಗೀಶ್ ನಾಯ್ಡು, ವೀರಾಜಪೇಟೆಯ ಹಲವು ಪ್ರಮುಖರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು.
ಇವರ ಅಂತ್ಯ ಸಂಸ್ಕಾರವು ವೀರಾಜಪೇಟೆ ಅರಸು ನಗರ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು.
ಸಂತಾಪ ಸಭೆ
ಕೊಡಗು ಜಿಲ್ಲಾ ಕಾರ್ಯನಿರತ
(ಮೊದಲ ಪುಟದಿಂದ) ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಡಿ.ಎಂ. ರಾಜ್ಕುಮಾರ್ ಅವರ ಅಗಲಿಕೆಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.
ವೀರಾಜಪೇಟೆ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಡಿ.ಎಂ. ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಜಿತ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಮಿತಿ ಸದಸ್ಯ ಟಿ.ಎನ್. ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಪಳೆಯಂಡ ಪಾರ್ಥಚಿಣ್ಣಪ್ಪ, ಕಾರ್ಯದರ್ಶಿ ವಾಸು, ವಿರಾಜಪೇಟೆ ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಜಿಲ್ಲಾ ನಿದೆೆÃðಶಕರಾದ ಕೋಲತಂಡ ರಘು ಮಾಚಯ್ಯ, ತಾಲೂಕು ಸಂಘದ ಕಾರ್ಯದರ್ಶಿ ಬಡಕಡ ರಜಿತಾ ಕಾರ್ಯಪ್ಪ, ನಿದೆÉÃðಶಕರಾದ ಡಿ. ಮಂಜುನಾಥ್, ರವಿಕುಮಾರ್, ಕಿಶೋರ್ಕುಮಾರ್ ಶೆಟ್ಟಿ, ಸದಸ್ಯರಾದ ಕಾಂಗೀರ ಬೋಪಣ್ಣ, ಮಾಳೇಟಿರ ಶ್ರೀನಿವಾಸ್ ಪಾಲ್ಗೊಂಡಿದ್ದರು. ಸಭೆಯ ಬಳಿಕ ತೆಲುಗರ ಬೀದಿಯಲ್ಲಿರುವ ಮೃತರ ಮನೆಗೆ ತೆರಳಿ ಪತ್ರಕರ್ತರ ಸಂಘದಿAದ ಅಂತ್ಯಕ್ರಿಯೆಗೆ ನೀಡುವ ಹತ್ತು ಸಾವಿರ ಹಣವನ್ನು ರಾಜ್ಕುಮಾರ್ ಅವರ ಪತ್ನಿಗೆ ನೀಡಲಾಯಿತು.
ಕೊಡಗು ಪತ್ರಕರ್ತರ ಸಂಘ
ಹಿರಿಯ ಪತ್ರಕರ್ತ ಡಿ.ಎಂ. ರಾಜಕುಮಾರ್ ನಿಧನರಾದ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಪರವಾಗಿ ಹಿರಿಯ ಪತ್ರಕರ್ತರಾದ ಶ್ರೀಧರ್ ನೆಲ್ಲಿತ್ತಾಯ, ರಾಜೇಶ್ ಪದ್ಮನಾಭ, ಉಷಾ ಪ್ರೀತಮ್, ಯುವರಾಜ್ ಕೃಷ್ಣ ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಕುಮಾರ್ ಅವರ ನಿಧನಕ್ಕೆ ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷ ಎಸ್.ಎ. ಮುರುಳೀಧರ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಹಾಗೂ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.