ಗುಡ್ಡೆಹೊಸೂರು, ಆ. ೧೪: ಇಲ್ಲಿಗೆ ಸಮೀಪದ ರಸಲ್ಪುರ-ಬಾಳುಗೋಡು ಗ್ರಾಮದ ಖಾನ್ ರಸಲ್ಪುರ ಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು. ಜೊತೆಯಲ್ಲಿ ಹುಲಿ ಮರಿಯ ಹೆಜ್ಜೆ ಕೂಡ ಪತ್ತೆಯಾಗಿದೆ. ಕುಟುಂಬ ಸಮೇತ ಕಾಫಿತೋಟದಲ್ಲಿ ನೆಲೆಸಿರುವ ಲಕ್ಷಣ ಕಂಡುಬAದಿದೆ.
ಕಾಫಿ ತೋಟದ ಕಾರ್ಮಿಕರು ಹುಲಿಯ ಹೆಜ್ಜೆ ಗುರುತು ಕಂಡು ಭಯಭೀತರಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಇದೇ ಸಮಯ ಹುಲಿಯ ಹೆಜ್ಜೆ ಕಾಫಿ ತೋಟದಲ್ಲಿ ಕಂಡು ಬಂದಿತ್ತು. ಮೈಸೂರು ಜಿಲ್ಲೆಯ ನಾಗರಹೋಳೆ ವಿಭಾಗದಿಂದ ಕೊಡಗಿನ ಈ ಭಾಗಕ್ಕೆ ಮರಿಯೊಂದಿಗೆ ಹುಲಿಯು ಬಂದು ತೋಟದಲ್ಲಿ ನೆಲೆಸಿರಬಹುದು. ಆನೆಕಾಡು, ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿಯೂ ಹುಲಿಯನ್ನು ಜನರು ಕಂಡಿರುವುದಾಗಿ ಮಾಹಿತಿ ನೀಡಿದ್ದಾರೆ.