ಮಡಿಕೇರಿ, ಆ. ೧೩: ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈ ಬಗ್ಗೆ ಕೊಡಗು ಜಿಲ್ಲೆಯಾದ್ಯಂತ ಜನತೆಯಲ್ಲಿ ಪುಟ್ಟ ಮಕ್ಕಳಲ್ಲಿ ಅಮಿತೋತ್ಸಾಹ ಕಂಡುಬAದಿದೆ. ಹಸಿರು ನಾಡಾದ ಕೊಡಗು ಜಿಲ್ಲೆಯಾದ್ಯಂತ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜ ರಾರಾಜಿಸುತ್ತಿವೆ. ಹರ್ ಘರ್ ತಿರಂಗಾ ಕರೆಗೆ ವ್ಯಾಪಕ ಪ್ರತಿಸ್ಪಂದನ ದೊರೆತಿದೆ. ಎಲ್ಲರಲ್ಲೂ ದೇಶಾಭಿಮಾನದ ಪ್ರತೀಕ ಗೋಚರವಾಗುತ್ತಿದೆ.ವಿದ್ಯಾರ್ಥಿಗಳು, ಪುಟ್ಟ ಮಕ್ಕಳು ತಿರಂಗದೊAದಿಗೆ ಹೆಚ್ಚು ಸಂಭ್ರಮ ಪಡುತ್ತಿರುವುದು ವಿಶೇಷತೆಯಾಗಿ ಕಂಡುಬAದಿತು. ಪ್ರತಿ ಮನೆಮನೆಗಳಲ್ಲಿ ಅಂಗಡಿ ಮಳಿಗೆಗಳಲ್ಲಿ ಸಾರ್ವಜನಿಕ ಕಟ್ಟಡ, ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಾಟ ಪ್ರತಿಯೊಬ್ಬರಲ್ಲೂ ಹೊಸತೊಂದು ಭಾವನಾಲೋಕವನ್ನು ಹುಟ್ಟು ಹಾಕಿದೆ.
ಹರ್ ಘರ್ ತಿರಂಗಾ ಕರೆಯಂತೆ ತಾ. ೧೩ರ ಬೆಳಿಗ್ಗೆ ೮ ಗಂಟೆಯಿAದಲೇ ಕೊಡಗು ಜಿಲ್ಲೆಯಾದ್ಯಂತ ಭಾರೀ ಸಂಚಲನವುAಟಾಗಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ತಿರಂಗದೊAದಿಗೆ ಜಾಥಾಗಳು, ವಾಹನ ಜಾಥಾಗಳು ಸೇರಿದಂತೆ ಹಲವಾರು ರೀತಿಯ ಕಾರ್ಯಕ್ರಮಗಳು ಇಂದಿನಿAದ ಅಮೃತಮಹೋತ್ಸವದ ವಿಶೇಷತೆಯಾಗಿ ಆರಂಭಗೊAಡಿವೆ. ಹಲವಾರು ಕಡೆಗಳಲ್ಲಿ ವಿದ್ಯುತ್ ಅಲಂಕಾರದಲ್ಲಿ ಕೇಸರಿ, ಬಿಳಿ, ಹಸಿರಿನ ಬಣ್ಣ ಪ್ರತಿಬಿಂಬಿತವಾಗುತ್ತಿವೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಂದು ಬೆಳಿಗ್ಗೆ ಜೀಪು ಮಾಲೀಕರು, ಚಾಲಕರ ಸಂಘದಿAದ ಸಂಭ್ರಮದ ಮೆರವಣಿಗೆ ನಡೆಯಿತು. ಬಿಜೆಪಿ ಪಕ್ಷದಿಂದಲೂ ಮಡಿಕೇರಿ, ವೀರಾಜಪೇಟೆ ಸೇರಿದಂತೆ ವಿವಿಧೆಡೆ ವಾಹನ ಜಾಥಾದ ಮೂಲಕ ಸಂಭ್ರಮಾಚರಣೆ ಪ್ರಾರಂಭಗೊAಡಿದೆ.
ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರುಗಳು ತಮ್ಮ ತಮ್ಮ ಮನೆಗಳಲ್ಲಿ ತಿರಂಗಕ್ಕೆ ಗೌರವ ಸಲ್ಲಿಸಿದರು.
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸAಸ್ಥೆಗಳ ಮೂಲಕ ಅಲ್ಲಲ್ಲಿ ಜಾಗೃತಿ ಜಾಥಾಗಳು ನಡೆಯಿತು. ಅಂಗಡಿ-ಮುAಗಟ್ಟುಗಳು, ಮನೆ ಮೇಲ್ಭಾಗ, ಗೇಟ್‌ಗಳಲ್ಲಿ ನಾಗರಿಕರು ಧ್ವಜವನ್ನು ಅಳವಡಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣದಲ್ಲಿ ಬೃಹತ್ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ. ವಿದ್ಯುತ್ ಅಲಂಕೃತವಿರುವ ಧ್ವಜಸ್ತಂಭ ಇದಾಗಿದ್ದು, ಇದರಲ್ಲಿನ ಬೃಹತ್ ಧ್ವಜ ಹಾರಿಸಲು ವಿದ್ಯುತ್ ಚಾಲಿತ ಸ್ವಿಚ್‌ನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಬೃಹತ್ ಧ್ವಜಸ್ತಂಭ ಹಾಗೂ ಬೃಹತ್ ಧ್ವಜದ ಆಕರ್ಷಣೆ ಇದಾಗಿದೆ.
(ಮೊದಲ ಪುಟದಿಂದ) ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್ ಗೈಡ್ಸ್, ಸೇವಾದಳದವರೊಂದಿಗೆ, ಸಾರ್ವಜನಿಕರು, ಪ್ರವಾಸಿಗರು ಪಾಲ್ಗೊಂಡಿದ್ದರು. ಈ ಆವರಣದಲ್ಲಿ ವಿಶೇಷ ಛಾಯಾ ಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ತಾಲೂಕು ಕಚೇರಿಯಲ್ಲಿ ಧ್ವಜ ಪ್ರದರ್ಶನ
ವೀರಾಜಪೇಟೆ: ವೀರಾಜಪೇಟೆ ತಾಲೂಕು ಕಚೇರಿ ವತಿಯಿಂದ ಮನೆ ಮನೆಗೆ ತ್ರಿವರ್ಣ ಧ್ವಜ ವಿತರಣೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಹಶೀಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ಡಿವೈಎಸ್‌ಪಿ ನಿರಂಜನ್ ರಾಜೇ ಅರಸ್ ತಾಲೂಕು ಕಚೇರಿಯ ಅಧಿಕಾರಿಗಳು, ಕಂದಾಯ ಇಲಾಖೆ ಮತ್ತು ಸಿಬ್ಬಂದಿಗಳು ತಿರಂಗಾ ಧ್ವಜವನ್ನು ಸಾಮೂಹಿಕವಾಗಿ ಪ್ರದರ್ಶಿಸಿದರು. ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ತಾ. ೧೩ ರಿಂದ ೧೫ರ ವರೆಗೆ ಪ್ರತಿ ಮನೆಯಲ್ಲೂ ತಿರಂಗಾ ಧ್ವಜವನ್ನು ಹಾರಿಸುವಂತೆ ವಿನಂತಿಸಲಾಯಿತು.
ಪಟ್ಟಣದಲ್ಲಿ ಜಾಥಾ
ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ಸಾರ್ವಜನಿಕರಲ್ಲಿ ದೇಶಾಭಿಮಾನ ಹಾಗೂ ಜಾಗೃತಿ ಮೂಡಿಸಲು ಪಟ್ಟಣದಾದ್ಯಂತ ಜಾಗೃತಿ ಜಾಥಾ ನಡೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ನಗರದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.
ಸ್ವಾತಂತ್ರೊ÷್ಯÃತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕು ಮಿನಿ ವಿಧಾನಸೌಧವನ್ನು ಅಲಂಕಾರ ಮಾಡಲಾಗಿದೆ.
ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಕಚೇರಿಗಳಲ್ಲಿ ರಾಷ್ಟç ಧ್ವಜಕ್ಕೆ ಗೌರವ ಸಲ್ಲಿಸುವುದರೊಂದಿಗೆ ಸಾಕಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಖುಷಿ ವ್ಯಕ್ತಪಡಿಸಿದರು. ಕೈಯಲ್ಲಿ ರಾಷ್ಟçಧ್ವಜವನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಗೋಣಿಕೊಪ್ಪದಿಂದ ವೀರಾಜಪೇಟೆವರೆಗೆ ಜಾಥಾ
*ಗೋಣಿಕೊಪ್ಪ: ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ವೀರಾಜಪೇಟೆ ಬಿಜೆಪಿ ಮಂಡಲ ವತಿಯಿಂದ ಗೋಣಿಕೊಪ್ಪದಿಂದ ವೀರಾಜಪೇಟೆಯವರೆಗೆ ವಾಹನ ಜಾಥಾ ನಡೆಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಆರಂಭಗೊAಡ ಜಾಥಾದಲ್ಲಿ ಸುಮಾರು ೬೦೦ ಕ್ಕೂ ಹೆಚ್ಚು ವಾಹನಗಳು ಪಾಲ್ಗೊಂಡವು. ಭಾರತಾಂಭೆಗೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಲಾಯಿತು. ವೀರಾಜಪೇಟೆ ತಾಲೂಕು ಮೈದಾನದವರೆಗೆ ಜಾಥಾ ನಡೆಯಿತು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸ್ವಾತಂತ್ರö್ಯದ ಅಮೃತ ಮಹೋತ್ಸವ ಹಿನ್ನೆಲೆ, ರಾಷ್ಟç ಪ್ರೇಮ ಮೂಡಿಸಲು ದೇಶವ್ಯಾಪಿ ಜಾಥಾ ನಡೆಯುತ್ತಿದೆ. ‘ಹರ್‌ಘರ್ ತಿರಂಗ’ ಅಭಿಯಾನ ಶ್ರದ್ಧಾ ಭಕ್ತಿಯಿಂದ ಮಾಡಿದ್ದೇವೆ. ಧ್ವಜಾರೋಹಣದಲ್ಲಿ ಹೆಚ್ಚು ಜಾಗ್ರತೆ ಇರಲಿ ಎಂದು ಮನವಿ ಮಾಡಿಕೊಂಡರು.
ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಮಾತನಾಡಿ, ಪಕ್ಷದಿಂದ ಅನೇಕ ಕಾರ್ಯಕ್ರಮ ನಡೆಸಿದ್ದೇವೆ. ದೇಶ ಪ್ರೇಮ ಮೂಡಿಸಲು ಜಾಥಾ ನಡೆಸಲಾಗುತ್ತಿದೆ ಎಂದರು.
ಎಂಎಲ್ಸಿ ಮಂಡೇಪAಡ ಸುಜಾ ಕುಶಾಲಪ್ಪ, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಂಡಲ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಮುಖಂಡರಾದ ಗುಮ್ಮಟ್ಟೀರ ಕಿಲನ್, ಯಮುನಾ ಚಂಗಪ್ಪ, ಮಲಚೀರ ಕವಿತಾ ಬೋಜಪ್ಪ ಇದ್ದರು.
ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಸಂಭ್ರಮ
ಮುಳ್ಳೂರು: ೭೫ನೇ ಸ್ವಾತಂತ್ರö್ಯ ದಿನಾಚರಣೆ ಅಮೃತ ಮಹೋತ್ಸವ ಹಿನ್ನೆಲೆ ಶನಿವಾರ ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅಮೃತ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು. ಶಾಲಾ-ಕಾಲೇಜು, ಗ್ರಾ.ಪಂ., ಮಠಗಳು, ವಿವಿಧ ಸಂಘ-ಸAಸ್ಥೆಗಳಲ್ಲಿ ಅಮೃತ ಮಹೋತ್ಸವಕ್ಕೆ ಸಡಗರ ಸಂಭ್ರಮದಿAದ ಚಾಲನೆ ನೀಡಲಾಯಿತು. ಹಲವಾರು ಮನೆಗಳಲ್ಲಿ ಬೆಳಗ್ಗೆಯಿಂದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ರಾಷ್ಟಿçÃಯ ಧ್ವಜವನ್ನು ಹಾರಿಸಲಾಯಿತು.
ಶನಿವಾರಸಂತೆಯಲ್ಲಿ ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರು ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರಾಷ್ಟಿçÃಯ ಧ್ವಜವನ್ನು ಹಿಡಿದುಕೊಂಡು ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ನಂತರ ಕಾರ್ಯಕರ್ತರು ಆಟೋ ಚಾಲಕರಿಗೆ, ವರ್ತಕರಿಗೆ, ಮನೆಗಳಿಗೆ ತೆರಳಿ ರಾಷ್ಟçಧ್ವಜವನ್ನು ವಿತರಣೆ ಮಾಡಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದಲ್ಲಿ ಬೆಳಗ್ಗೆ ೭ ಗಂಟೆಗೆ ಮಠಾದೀಶರಾದ ಸದಾಶಿವಸ್ವಾಮೀಜಿ ಅವರು ಮಠದ ಮುಂಭಾಗದಲ್ಲಿ ಅಳವಡಿಸಿರುವ ಧ್ವಜ ಸ್ತಂಭಕ್ಕೆ ರಾಷ್ಟಿçÃಯ ಧ್ವಜಾರೋಹಣ ನೆರವೇರಿಸಿದ ಮೂಲಕ ಸ್ವಾತಂತ್ರö್ಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದರು. ಕೊಡ್ಲಿಪೇಟೆ ಕಲ್ಲುಮಠದ ಎಸ್‌ಕೆಎಸ್ ವಿದ್ಯಾಸಂಸ್ಥೆಯಲ್ಲಿ ೭೫ನೇ ಸ್ವಾತಂತ್ರ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಮಹಂತಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ವಿದ್ಯಾಸಂಸ್ಥೆ ನಿರ್ದೇಶಕರು ಹಾಜರಿದ್ದರು.
ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿದ ಬಳಿಕ ಶಾಲಾ ವಿದ್ಯಾರ್ಥಿಗಳು ರಾಷ್ಟಿçÃಯ ಧ್ವಜವನ್ನು ಪ್ರದರ್ಶನಗೊಳಿಸುವ ಮೂಲಕ ಅರಿವು ಮೂಡಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ತಿರಂಗ
ಸೋಮವಾರಪೇಟೆ: ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ಎಲ್ಲೆಡೆ ರಾಷ್ಟç ಧ್ವಜವನ್ನು ಹಾರಿಸಲಾಗಿದ್ದು, ಮನೆ, ಕಚೇರಿ, ಅಂಗಡಿ ಮುಂಗಟ್ಟುಗಳಲ್ಲಿ ತಿರಂಗ ರಾರಾಜಿಸುತ್ತಿದೆ.
ಇಲ್ಲಿನ ತಾಲೂಕು ಕಚೇರಿಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ರಾಷ್ಟçöಧ್ವಜಾರೋಹಣ ಮಾಡಿದರು. ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರ ನೇತೃತ್ವದಲ್ಲಿ ಧ್ವಜ ಹಾರಿಸಲಾಯಿತು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರುಗಳು, ಮುಖ್ಯಾಧಿಕಾರಿ ನಾಚಪ್ಪ ಅವರು ಧ್ವಜಾರೋಹಣ ಸಂದರ್ಭ ಹಾಜರಿದ್ದರು.
ಉಳಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿತು. ಇದರೊಂದಿಗೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಅಂಗಡಿಗಳು, ಮನೆಗಳ ಮುಂಭಾಗದಲ್ಲಿ ರಾಷ್ಟçಧ್ವಜವನ್ನು ಹಾರಿಸಿ ದೇಶಾಭಿಮಾನ ಮೆರೆಯಲಾಯಿತು.