ವೀರಾಜಪೇಟೆ, ಆ. ೧೪: ಪುರಸಭೆಯಲ್ಲಿ ಸುದೀರ್ಘ ಮೂವತ್ತೆöÊದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಮೂವರು ಪೌರಕಾರ್ಮಿಕರಿಗೆ ಪುರಭವನದ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಪೌರಕಾರ್ಮಿಕರ ಸೇವೆ, ನಿಸ್ವಾರ್ಥತೆಯ ಬಗ್ಗೆ ಪುರಸಭೆಯ ಸದಸ್ಯರುಗಳಾದ ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ, ಸುನೀತಾ ಮಾತನಾಡಿದರು. ಹಿರಿಯ ಅಭಿಯಂತರ ಹೇಮ್ಕುಮಾರ್ ಅವರು ಸೇವೆಯಿಂದ ನಿವೃತ್ತರಾದ ಸೀನಪ್ಪ, ಚಿಕ್ಕರಾಮು, ರಂಗಮ್ಮ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಂದಾಯ ಅಧಿಕಾರಿ ಸೋಮೇಶ್ ಮಾತನಾಡಿದರು. ಮುಖ್ಯಾಧಿಕಾರಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪುರಸಭೆ ಸದಸ್ಯರು, ಪೌರಕಾರ್ಮಿಕರು, ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರ ಕುಟುಂಬಸ್ಥರು ಹಾಜರಿದ್ದರು.