ಶ್ರೀಮಂಗಲ, ಆ. ೧೩: ಪೊನ್ನಂಪೇಟೆ ಕೊಡವ ಸಮಾಜದ ಸದಸ್ಯರುಗಳ ಮಕ್ಕಳಲ್ಲಿ ಕಳೆದ ಸಾಲಿನ ೨೦೨೧-೨೨ ರಲ್ಲಿ ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಸಮಾಜದಿಂದ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿ ಅರ್ಜಿ ಕರೆಯಲಾಗಿದೆ.

ವಿದ್ಯಾರ್ಥಿಗಳ ಅಂಕಪಟ್ಟಿಯ ನಕಲು ಪ್ರತಿ, ಪೋಷಕರ ಫೋನ್ ನಂಬರ್, ಸಮಾಜದ ಸದಸ್ಯರ ಸದಸ್ಯತ್ವ ಸಂಖ್ಯೆ ಇವುಗಳನ್ನು ಸೆಪ್ಟೆಂಬರ್ ೫ ರೊಳಗೆ ಸಮಾಜದ ಕಚೇರಿಗೆ ತಲುಪಿಸಬಹುದಾಗಿದೆ. ಇದರಲ್ಲಿ ಆಯ್ಕೆಯಾದ ಮಕ್ಕಳಿಗೆ ಮಾಹಿತಿ ತಿಳಿಸಿ ಸೆಪ್ಟೆಂಬರ್ ೧೮ರಂದು ನಡೆಯುವ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಫೋನ್ ನಂಬರ್ ೯೮೮೦೨೦೭೬೪೦, ೯೪೪೮೧೩೫೫೪೧ ಸಂಪರ್ಕಿಸಲು ಪೊನ್ನಂಪೇಟೆ ಕೊಡವ ಸಮಾಜದ ಪ್ರಕಟಣೆ ತಿಳಿಸಿದೆ.