ಗೋಣಿಕೊಪ್ಪಲು, ಆ.೧೩: ಎರಡು ದಿನಗಳ ಹಿಂದೆ ಮೇಯಲು ತೆರಳಿದ್ದ ಹಸುವೊಂದು ಹೊಳೆ ಬದಿಗೆ ತೆರಳಿದ ವೇಳೆ ಆಯ ತಪ್ಪಿ ಹರಿಯುವ ನೀರಿನೊಂದಿಗೆ ಕೊಚ್ಚಿ ಹೋಗಿದೆ. ಇದರ ಮೃತ ದೇಹವು ಶನಿವಾರ ಮಧ್ಯಾಹ್ನದ ವೇಳೆ ಹೊಳೆಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಬಿರುನಾಣಿ ಸಮೀಪದ ತೆರಾಲು ಗ್ರಾಮದ ರೈತರಾದ ಮಹೇಶ್ ಎಂಬವರಿಗೆ ಸೇರಿದ ಹಸು ಮಳೆಯಿಂದಾಗಿ ಮೃತಪಟ್ಟಿದೆ.
ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಆಲೆಯಂಡ ಲೋಕೇಶ್ರವರ ಮನೆಯು ಮಳೆಯಿಂದ ಮನೆಯ ಹಿಂಭಾಗವು ಬಹುತೇಕ ಕುಸಿದು ಬಿದ್ದಿದ್ದು ಮನೆಯಲ್ಲಿ ವಾಸಿಸಲು ಸಮಸ್ಯೆ ಎದುರಾಗಿದೆ. ಸ್ಥಳಕ್ಕೆ ರೈತ ಸಂಘದ ಮುಖಂಡರಾದ ಚೇರಂಡ ಜಗನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಯುವಕರ ಸಹಾಯದಿಂದ ಲೋಕೇಶ್ರವರ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಸಾಗಿಸಲು ಸ್ಥಳೀಯ ಯುವಕರು ಸಹಕರಿಸಿದರು.