ಗುಡ್ಡಹೊಸೂರು, ಆ. ೧೨: ಇತ್ತೀಚಿಗೆ ತೀವ್ರ ವಿವಾದಕ್ಕೆ ಒಳಗಾಗಿದ್ದ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಸುಣ್ಣದ ಕೆರೆಯ ಸ್ಮಶಾನ ಪ್ರಕರಣಕ್ಕೆ ಜಿಲ್ಲಾಡಳಿತ ಅಂತ್ಯ ಹಾಡಿದೆ. ಪರ ವಿರೋಧಗಳ ನಡುವೆ ಸ್ಮಶಾನಕ್ಕೆ ಗುರುತಿಸಿದ್ದ ಜಾಗಕ್ಕೆ ಬೇಲಿ ಅಳವಡಿಸಿ ಗುರುವಾರ ನಾಮಫಲಕ ಅಳವಡಿಸಲಾಗಿದೆ. ಎರಡು ಗುಂಪುಗಳ ನಡುವೆ ಸ್ಮಶಾನಕ್ಕೆ ಪರ ವಿರೋಧ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸರ ಸಮ್ಮುಖದಲ್ಲಿ ಸುಣ್ಣದ ಕೆರೆಯ ಸರಕಾರಿ ಜಾಗದಲ್ಲಿ ಸ್ಮಶಾನ ಜಾಗಕ್ಕೆ ಬೇಲಿ ಹಾಕಿ ನಾಮಫಲಕ ಅಳವಡಿಸಿ ಪಂಚಾಯಿತಿ ಸುಪರ್ದಿಗೆ ವಹಿಸಲಾಗಿದೆ. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ನಂದಿನಿ ದೇವರಾಜ್, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಪ್ರವೀಣ್ ಕುಶಾಲಪ್ಪ, ಶಿವಪ್ಪ, ಮಂಗಳ, ಲಕ್ಷö್ಮಣ, ಚಿದಾನಂದ, ಉಮಾ, ಮಾದಪ್ಪ, ಸೌಮ್ಯ, ರಮೇಶ, ರುಕ್ಮಿಣಿ, ಉಷಾ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಂ ತಮ್ಮಯ್ಯ, ಉಪ ತಹಶೀಲ್ದಾರ್ ಮಧುಸೂದನ್, ಗ್ರಾಮಲೆಕ್ಕಿಗ ಗೌತಮ್, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಸ್ಥಳದಲ್ಲಿದ್ದರು.