ಸುAಟಿಕೊಪ್ಪ, ಆ. ೧೨: ತನ್ನ ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ತುರ್ತಾಗಿ ರೂ. ೫ ಸಾವಿರ ಹಣ ಬೇಕೆಂದು ಕರೆ ಮಾಡಿ ಹಣ ಹಾಕಿಸಿಕೊಂಡು ಬೇಕರಿ ಮಾಲೀಕನೊಬ್ಬರಿಗೆ ಪಂಗನಾಮ ಹಾಕಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಬೇಕರಿಯ ಹೊರಗಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದ ಅಪರಿಚಿತರೊಬ್ಬರು ತಾನು ಬೇಕರಿಯ ನಿತ್ಯದ ಗ್ರಾಹಕನಾಗಿದ್ದು, ತನ್ನ ಸ್ನೇಹಿತನ ಹೆಂಡತಿಗೆ ಚಿಕಿತ್ಸೆಗೆ ಹಣ ಬೇಕಿದೆ. ತಾನು ಈಗ ಸುಳ್ಯದಲ್ಲಿದ್ದು, ಅಲ್ಲಿನ ಎ.ಟಿ.ಎಂ.ಗಳಲ್ಲಿ ಹಣವಿಲ್ಲವೆಂದು ಹೇಳಿದ್ದಾನೆ. ಬೇಕರಿ ಮಾಲೀಕ ರೂ. ೫ ಸಾವಿರ ಆನ್‌ಲೈನ್ ಮೂಲಕ ನೀಡಿದ ನಂತರ ಅಪರಿಚಿತನ ಫೋನ್ ‘ಸ್ವಿಚ್ ಆಫ್’ ಮಾಡಿದ್ದಾನೆ. - ರಾಜು ರೈ