ಶನಿವಾರಸಂತೆ, ಆ. ೧೨: ಉದ್ಯೋಗಖಾತ್ರಿ ಯೋಜನೆಯಡಿ ದುರಸ್ತಿಪಡಿಸಲಾದ ಕೆರೆಯ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಗ್ರಾ.ಪಂ. ಸದಸ್ಯರುಗಳೇ ಆಗ್ರಹಿಸಿದ ಪ್ರಸಂಗ ದುಂಡಳ್ಳಿ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ನಡೆದಿದೆ.
ಸದಸ್ಯ ಡಿ.ಪಿ. ಭೋಜಪ್ಪ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುರಸ್ತಿ ಮಾಡಿರುವ ಕೆರೆ ಮತ್ತು ಅದರ ಮೇಲಕ್ಕೋಡಿ ಕೆಲಸವು ಕಳಪೆ ಕಾಮಗಾರಿಯಾಗಿದ್ದು, ಕೆರೆಯ ಕಟ್ಟೆ ಒಡೆದು ಹೋಗುವ ಭೀತಿಯಿಂದ ತೊಂದರೆ ಗೊಳಗಾಗುವ ಅಲ್ಲಿಯ ಗ್ರಾಮಸ್ಥರು ಪಂಚಾಯಿತಿಗೆ ಮೌಕಿಕವಾಗಿ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರುಗಳು ಖುದ್ದು ಪರಿಶೀಲಿ ಸಲಾಗಿ ಕಳಪೆ ಕಾಮಗಾರಿ ಯಾಗಿರುವುದು ಕಂಡುಬAದಿದೆ.
ಈ ಕಾಮಗಾರಿಯನ್ನು ಪಂಚಾಯಿತಿ ಅಧ್ಯಕ್ಷರ ಪತಿ ಕಿರಣ್ ಗುತ್ತಿಗೆ ಪಡೆದು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕಾಮಗಾರಿಯಾಗಿದ್ದು, ಕೆರೆಯ ಕಟ್ಟೆ ಒಡೆದು ಹೋಗುವ ಭೀತಿಯಿಂದ ತೊಂದರೆ ಗೊಳಗಾಗುವ ಅಲ್ಲಿಯ ಗ್ರಾಮಸ್ಥರು ಪಂಚಾಯಿತಿಗೆ ಮೌಕಿಕವಾಗಿ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರುಗಳು ಖುದ್ದು ಪರಿಶೀಲಿ ಸಲಾಗಿ ಕಳಪೆ ಕಾಮಗಾರಿ ಯಾಗಿರುವುದು ಕಂಡುಬAದಿದೆ.
ಈ ಕಾಮಗಾರಿಯನ್ನು ಪಂಚಾಯಿತಿ ಅಧ್ಯಕ್ಷರ ಪತಿ ಕಿರಣ್ ಗುತ್ತಿಗೆ ಪಡೆದು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಉಪಾಧ್ಯಕ್ಷರ ಸದಸ್ಯತ್ವ ರದ್ದುಪಡಿಸುವಂತೆ ನಡಾವಳಿ ಮಾಡಿ ಕಳುಹಿಸುವಂತೆ ಆಗ್ರಹಿಸಿದರು.
ಪಂಚಾಯಿತಿ ಸದಸ್ಯ ಎಂ.ಡಿ. ದೇವರಾಜ್ ಮಾತನಾಡಿ, ದುಂಡಳ್ಳಿ ಗ್ರಾಮ ಪಂಚಾಯಿತಿ ಹಣಕಾಸು ವಿಚಾರದಲ್ಲಿ ದುರುಪಯೋಗ ವಾಗಿದ್ದು, ದಿವಾಳಿ ಆಗುವ ಅಂಚಿನಲ್ಲಿದೆ. ಈ ಬಗ್ಗೆ ಸೂಕ್ತ ತನಿಖೆ ಯಾಗಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಸದಸ್ಯರುಗಳಾದ ಕೆ.ಎಸ್. ಜಾನಕಿ, ಹೆಚ್.ಆರ್. ಭವಾನಿ, ಎಸ್.ಪಿ. ಭಾಗ್ಯ, ಸಿ.ಜೆ. ಗಿರೀಶ್, ಎಸ್.ಡಿ. ದೇವರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.