ವೀರಾಜಪೇಟೆ, ಆ. ೧೨: ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಬೇಟೋಳಿ-ರಾಮನಗರದ ಪುದುಪಾಡಿ ಅಯ್ಯಪ್ಪ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಭೆಯ ಅಧ್ಯಕ್ಷತೆಯನ್ನು ಬೇಟೋಳಿ ಪಂಚಾಯಿತಿಯ ಅಧ್ಯಕ್ಷೆ ಬಿ.ಜೆ. ಯಶೋಧ ವಹಿಸಿದ್ದರು.
೧೦ನೇ ತರಗತಿಯಲ್ಲಿ ಪೊನ್ನಣ್ಣ ಕೆ.ಸಿ., ಅಭಯ್ ಬಿ.ಆರ್., ಅಂಜಲಿ ಬಿ.ಜೆ., ಕೌಶಿಕ್ ಬಿ.ಕೆ., ಸ್ವಸ್ತಿಕ್ ಎಂ.ಎಸ್., ತ್ರಿಶಾ ಪಿ.ಎಸ್., ಅನುಶ್ರೀ ಟಿ.ಜೆ., ಮಿಶ್ರಿತಾ ಟಿ.ಎಸ್., ಆಶಿಕಾ ವಿ.ಎನ್., ಸುಖನ್ಯ ಎಂ.ಆರ್., ಕನ್ನಡ ವಿಷಯದಲ್ಲಿ ೧೨೫ ಅಂಕಗಳಿಸಿದ ಯಶಸ್ವಿನಿ ಪಿ.ಕೆ., ಸಮಾಜ ವಿಜ್ಞಾನ ವಿಷಯದಲ್ಲಿ ೧೦೦ ಅಂಕಗಳಿಸಿದ ಸ್ವಸ್ತಿಕ್ ಎಂ.ಎಸ್., ೧೨ನೇ ತರಗತಿಯಲ್ಲಿ ಎನ್.ಟಿ. ಆಯುಷ್ ಕಾರ್ಯಪ್ಪ, ಸಬಿನ್ ಪಿ.ಎಸ್., ಬಿ.ಬಿ. ರಾಶಿ ಮುತ್ತಮ್ಮ, ದಿಯಾ ಪಿ.ಎಸ್., ಕ್ರೀಡಾ ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟçಮಟ್ಟವನ್ನು ಪ್ರತಿನಿಧಿಸಿದ ಕೆ.ಜಿ. ನಿಖಿಲ್ ಜೋಸೆಫ್ (ಹಾಕಿ), ದೇಶ್ ಪೂವಯ್ಯ (ಹಾಕಿ), ಭರತ್ ಎಂ.ಆರ್. (ಕಬಡ್ಡಿ) - ಕಲಾ ವಿಭಾಗದಲ್ಲಿ ಬಿ.ಎನ್. ಲಾವಣ್ಯ (ಭರತನಾಟ್ಯ), ಬಿ.ಬಿ. ಸಾನಿಧ್ಯ (ಭರತನಾಟ್ಯ) ಅತ್ಯುತ್ತಮ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತೆ ಬೇಟೋಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಾದ ಆಯಿಷಾ ಫಜಲು, ಅತ್ಯುತ್ತಮ ಗ್ರಂಥಾಲಯ ಮೇಲ್ವಿಚಾರಕಿ ಕೆ.ಎ. ಸರಸ್ವತಿ, ಅತ್ಯುತ್ತಮ ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ ಇವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ವೈ.ಯಂ. ಶಾಂತಿ, ಪಿ.ಡಿ.ಓ ಮಣಿ, ಜಿಲ್ಲಾ ವಿಷಯ ನಿರೀಕ್ಷಕ ಬಿಂದು ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಸ್ಥರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.