ಭಾಗಮಂಡಲ, ಆ. ೧೨ : ಗೌಡ ಜನಾಂಗದ ಸಂಸ್ಕೃತಿ, ಆಟಿ ತಿಂಗಳ ವಿಶೇಷತೆ ಸಂಸ್ಕೃತಿಯ ಬಗ್ಗೆ ಅದೊಂದು ವಿಶಿಷ್ಟ ಸಮಾರಂಭ. ಮಗುವನ್ನು ತೊಟ್ಟಿಲಿಗೆ ಹಾಕುವುದು, ಗದ್ದೆ ಉಳುವುದು, ದೈವದ ಕೋಲ, ಆಟಿ ಸಂಭ್ರಮ. ಗೌಡ ಜನಾಂಗದ ಸಂಸ್ಕೃತಿಯಲ್ಲಿ ಒಂದಾದ ಮದುವೆ ಮನೆಯಲ್ಲಿ ಹಸೆ ಬರೆಯುವುದು, ಗೌಡ ಧಿರಿಸಿನಲ್ಲಿ ಬಂದು ರಾಗಕ್ಕೆ ರಾಗ ಬೆರೆಸುತ್ತಾ ಸೋಬಾನೆ ಹಾಡುವುದು ಹೀಗೆ ಹತ್ತಾರು ಸ್ಪರ್ಧೆಗಳಲ್ಲಿ ತಾ ಮುಂದು ನಾ ಮುಂದು ಎಂದು ಸಂಭ್ರಮಿಸಿದವರು ಹಲವರು.

ಇವೆಲ್ಲ ಮೂಡಿಬಂದದ್ದು ಭಾಗಮಂಡಲ ಕಾವೇರಿ ಕಾಲೇಜಿನ ಆವರಣದಲ್ಲಿ, ಭಾಗಮಂಡಲ ನಾಡು ಯುವ ಒಕ್ಕೂಟ ಆಯೋಜಿಸಿದ್ದ ವಿಶ್ವ ಅರೆಭಾಷೆ ೧೮ ಜಂಬರ ಸ್ಪರ್ಧಾ ಭಾಗಮಂಡಲ, ಆ. ೧೨ : ಗೌಡ ಜನಾಂಗದ ಸಂಸ್ಕೃತಿ, ಆಟಿ ತಿಂಗಳ ವಿಶೇಷತೆ ಸಂಸ್ಕೃತಿಯ ಬಗ್ಗೆ ಅದೊಂದು ವಿಶಿಷ್ಟ ಸಮಾರಂಭ. ಮಗುವನ್ನು ತೊಟ್ಟಿಲಿಗೆ ಹಾಕುವುದು, ಗದ್ದೆ ಉಳುವುದು, ದೈವದ ಕೋಲ, ಆಟಿ ಸಂಭ್ರಮ. ಗೌಡ ಜನಾಂಗದ ಸಂಸ್ಕೃತಿಯಲ್ಲಿ ಒಂದಾದ ಮದುವೆ ಮನೆಯಲ್ಲಿ ಹಸೆ ಬರೆಯುವುದು, ಗೌಡ ಧಿರಿಸಿನಲ್ಲಿ ಬಂದು ರಾಗಕ್ಕೆ ರಾಗ ಬೆರೆಸುತ್ತಾ ಸೋಬಾನೆ ಹಾಡುವುದು ಹೀಗೆ ಹತ್ತಾರು ಸ್ಪರ್ಧೆಗಳಲ್ಲಿ ತಾ ಮುಂದು ನಾ ಮುಂದು ಎಂದು ಸಂಭ್ರಮಿಸಿದವರು ಹಲವರು.

ಇವೆಲ್ಲ ಮೂಡಿಬಂದದ್ದು ಭಾಗಮಂಡಲ ಕಾವೇರಿ ಕಾಲೇಜಿನ ಆವರಣದಲ್ಲಿ, ಭಾಗಮಂಡಲ ನಾಡು ಯುವ ಒಕ್ಕೂಟ ಆಯೋಜಿಸಿದ್ದ ವಿಶ್ವ ಅರೆಭಾಷೆ ೧೮ ಜಂಬರ ಸ್ಪರ್ಧಾ ಬಹಳಷ್ಟು ಜನರು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದರು.

ಮತ್ತೋರ್ವ ಅತಿಥಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ ಆಟಿ ತಿಂಗಳಲ್ಲಿ ಬಿಡುವಿಲ್ಲದ ಕೆಲಸವಿದ್ದರೂ ಕೃಷಿಕರು ಹಾಗೂ ಜನಾಂಗ ಬಾಂಧವರು ಬಿಡುವು ಮಾಡಿಕೊಂಡು ಇಂತಹ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸಂಪ್ರದಾಯ ಆಚಾರ ವಿಚಾರಗಳನ್ನು ಕಲಿತಂತಾಗಿದೆ. ಮುಂದಿನ ಜನಾಂಗಕ್ಕೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇದೊಂದು ಅರ್ಥಗರ್ಭಿತ ಕಾರ್ಯಕ್ರಮವಾಗಿ ಜನಾಂಗದ ಒಗ್ಗೂಡಿವಿಕೆಗೆ ಸಹಕಾರಿ ಆಗಿದೆ. ಯುವ ಜನಾಂಗ ದುಶ್ಚಟಗಳಲ್ಲಿ ಭಾಗಿಯಾಗದೆ ಪುಸ್ತಕಗಳನ್ನು ಓದಿ ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕು, ಸಂಸ್ಕೃತಿಯ ಬಗ್ಗೆ ಅರಿವು ಹೊಂದಿರಬೇಕು. ಭಾಗಮಂಡಲ ಯುವ ಒಕ್ಕೂಟವು ಜನಾಂಗದ ಬಗ್ಗೆ ಒತ್ತು ಕೊಟ್ಟು ಕೆಲಸವನ್ನು ಮಾಡಿಕೊಂಡು ಬರುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ ಮಾತನಾಡಿ, ಜನಾಂಗ ಬಾಂಧವರು ಸಂಸ್ಕೃತಿಯನ್ನು ಚಾಚು ತಪ್ಪದೆ ಅನುಸರಿಸಬೇಕು ಎಂದರು. ಅರೆಭಾಷಿಕರ ಬಗ್ಗೆ, ಸಂಸ್ಕೃತಿ, ಸಾಹಿತ್ಯ ಕುರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಕಡ್ಲೇರ ತುಳಸಿ ಮೋಹನ್ ನಡೆಸಿಕೊಟ್ಟರು.

ಅರೆಭಾಷೆ ಕಥೆ ಹೇಳುವ ಸ್ಪರ್ಧೆಯಲ್ಲಿ ಕುದುಪಜೆ ತನ್ವಿತ ಕವನ ಪ್ರಥಮ, ತನ್ಮಯಿ ಕಿಶೋರ್ ಕುದುಕುಳಿ ಮತ್ತು ವೆನಿಲ್ ನಂಗಾರು ದ್ವಿತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ಯಶ್ವಥ್ ಎಡಿಕೇರಿ ಪ್ರಥಮ, ಮಯೂರಿ ಪಾಣತ್ತಲೆ ದ್ವಿತೀಯ ಹಸೆ ಬರೆಯುವುದರಲ್ಲಿ ಚೆರುಕನ ಪ್ರಸನ್ನ ಪ್ರಥಮ, ಸಿರಕಜೆ ಪ್ರಶಾಂತ್ ದ್ವಿತೀಯ, ಸೋಬಾನೆ ಹಾಡುವುದರಲ್ಲಿ, ನಿಡ್ಯಮಲೆ ಲೋಲಾಕ್ಷಿ ತಂಡ ಪ್ರಥಮ ಕಾವೇರಿ ಮನೆ ದಕ್ಷ ತಂಡ ದ್ವಿತೀಯ.

ರಸಪ್ರಶ್ನೆಯಲ್ಲಿ ಕುದುಪಜೆ ಬೃಂದಾ ಮತ್ತು ತಂಡ ಪ್ರಥಮ, ಪೈಕೆ ಚರಿತ್ರ ಮತ್ತು ತಂಡ ದ್ವಿತೀಯ ಬಹುಮಾನ ಪಡೆದರು. ಸಭೆಯ ಅಧ್ಯಕ್ಷತೆಯನ್ನು ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ವಹಿಸಿದ್ದರು. ವೇದಿಕೆಯಲ್ಲಿ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಹೊಸಗದ್ದೆ ಲಲಿತ ಭಾಸ್ಕರ, ಗ್ರಾಮ ಪಂಚಾಯಿತಿ ಸದಸ್ಯ ಶಿರಕಜೆ ನಾಗೇಶ್, ನಂಗಾರು ವೀಣಾ, ಯುವ ಪ್ರತಿಭೆ ಕೇಡನ ಪ್ರಗತಿ, ಕಾರ್ಯದರ್ಶಿ ನಿಡ್ಯಮಲೆ ಚಲನ್, ನಿರ್ದೇಶಕರಾದ ಕೋಳಿಬೈಲು ಸುರೇಂದ್ರ, ಕುಯ್ಯಮುಡಿ ಸುನಿಲ್, ಕುದುಕುಳಿ ಅಶ್ವಥ್, ಬಾರಿಕೆ ದೀಪಕ್, ನಂಗಾರು ಪುನೀತ್, ಬಾರಿಕೆ ಶೈಲಜಾ, ಕಾವೇರಿಮನೆ ಧರಣಿ, ರವೀಂದ್ರ ನಿಡ್ಯಮಲೆ, ಕೂಡಕಂಡಿ ಚೇತನ್, ಉಪಸ್ಥಿತರಿದ್ದರು.

ಕುಯ್ಯಮುಡಿ ಲಕ್ಷಿತ ಸುನಿಲ್, ದರ್ಶಿನಿ, ಅನನ್ಯ ಕೋಳಿಬೈಲು ಪ್ರಾರ್ಥಿಸಿದರೆ, ಕುದುಕುಳಿ ಚೈತ್ರ. ಕೇಕಡ ಜರಿತ, ಅಮೆಮನೆ ತಶ್ಮಿ ನಿರೂಪಿಸಿದರು.