ಗೋಣಿಕೊಪ್ಪ ವರದಿ, ಆ. ೧೨: ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮವನ್ನು ಗೋಣಿಕೊಪ್ಪ ಕಿತ್ತಳೆ ಬೆಳೆಗಾರರ ಸಂಘದ ಸಭಾಂಗಣದಲ್ಲಿ ತಾ.೧೪ ರಂದು ಆಯೋಜಿಸಲಾಗಿದೆ.

ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಪುರುಷರಿಗೆ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆ, ಮಹಿಳೆಯರಿಗೆ ವಿಷದ ಚೆಂಡು ಸ್ಪರ್ಧೆ ನಡೆಯಲಿದೆ. ಕಕ್ಕಡ ಆಚರಣೆ ವಿಶೇಷ ತಿನಿಸುಗಳಾದ ಮದ್ದ್ ಪುಟ್ಟ್, ಮದ್ದ್ ಪಾಯಸ, ಮರ ಕೇಂಬೆಲೆ ಪುಟ್ಟ್ ವಿಶೇಷವಾಗಿ ತಯಾರಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್ ಪ್ರಥ್ಯು ಹೇಳಿಕೆಯಲ್ಲಿ ತಿಳಿಸಿದ್ದಾರೆ.