ಮಡಿಕೇರಿ: ಮಡಿಕೇರಿ ನಗರಸಭೆಯ ಆರೋಗ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳಿಗೆ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟçಧ್ವಜವನ್ನು ವಿತರಿಸಿದರು.ವೀರಾಜಪೇಟೆ: ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ವೀರಾಜಪೇಟೆ ಪುರಸಭೆ ವತಿಯಿಂದ ಧ್ವಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪುರಸಭೆಯ ಕಚೇರಿಯ ಆವರಣದಲ್ಲಿ ಪೌರಕಾರ್ಮಿಕರಿಗೆ ಧ್ವಜವನ್ನು ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಪುರಸಭೆಯ ಸದಸ್ಯರುಗಳು, ಮುಖ್ಯಾಧಿಕಾರಿ ನೀಡಿದರು. ಪ್ರತಿ ಮನೆಮನೆಗೂ ಧ್ವಜವನ್ನು ತಲುಪಿಸುವ ಕಾರ್ಯವನ್ನು ಪುರಸಭೆಯ ಸಿಬ್ಬಂದಿಗಳು ಮಾಡಲಿದ್ದಾರೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ಪುರಸಭೆ ಸದಸ್ಯರುಗಳಾದ ದೇಚಮ್ಮ, ರಾಜೇಶ್ ಪದ್ಮನಾಭ, ಸುನೀತಾ, ಸಚಿನ್, ಪೃಥ್ವಿನಾಥ್, ರಜನಿಕಾಂತ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ವೀರಾಜಪೇಟೆ: ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ವೀರಾಜಪೇಟೆ ಪುರಸಭೆ ವತಿಯಿಂದ ಧ್ವಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪುರಸಭೆಯ ಕಚೇರಿಯ ಆವರಣದಲ್ಲಿ ಪೌರಕಾರ್ಮಿಕರಿಗೆ ಧ್ವಜವನ್ನು ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಪುರಸಭೆಯ ಸದಸ್ಯರುಗಳು, ಮುಖ್ಯಾಧಿಕಾರಿ ನೀಡಿದರು. ಪ್ರತಿ ಮನೆಮನೆಗೂ ಧ್ವಜವನ್ನು ತಲುಪಿಸುವ ಕಾರ್ಯವನ್ನು ಪುರಸಭೆಯ ಸಿಬ್ಬಂದಿಗಳು ಮಾಡಲಿದ್ದಾರೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ಪುರಸಭೆ ಸದಸ್ಯರುಗಳಾದ ದೇಚಮ್ಮ, ರಾಜೇಶ್ ಪದ್ಮನಾಭ, ಸುನೀತಾ, ಸಚಿನ್, ಪೃಥ್ವಿನಾಥ್, ರಜನಿಕಾಂತ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.