ಡಾ. ಜೆ. ಸೋಮಣ್ಣ
ಪೊನ್ನಂಪೇಟೆ, ಆ. ೧೨: ಕೊಡಗಿನ ಕನ್ನಡ ಸಾಹಿತ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಜೊತೆಗೆ ಭಾಷೆ ಬೆಳೆಸುವಲ್ಲಿಯೂ ಇವರ ಸೇವೆ ಅನನ್ಯ ಎಂದು ಸಾಹಿತಿ ಡಾ. ಜೆ. ಸೋಮಣ್ಣ ಹೇಳಿದರು.
ಪೊನ್ನಂಪೇಟೆ ಸರ್ಕಾರಿ ಸಂಯಕ್ತ ಪದವಿಪೂರ್ವ ಕಾಲೇಜಿನಲ್ಲಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ‘ಡಾ. ಎಂ.ಜಿ. ನಾಗರಾಜು ದತ್ತಿನಿಧಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ಭಾರತಿಸುತರು ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಎಡಕಲ್ಲು ಗುಡ್ಡದ ಮೇಲೆ, ಬಯಲುದಾರಿ ಮೊದಲಾದ ಅಮೂಲ್ಯ ಕಾದಂಬರಿಗಳನ್ನು ರಚಿಸಿದರು. ಇವುಗಳಲ್ಲೆಲ್ಲ ಕೊಡಗಿನ ಸಂಸ್ಕೃತಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅಂತೆಯೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಕೆ.ಜಿ. ರಮ್ಯ, ಕಾಜೂರು ಸತೀಶ್ ಕೂಡ ಉತ್ತಮ ಕವಿತೆ ರಚಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಿರುವ ಆಸಕ್ತಿ ಮತ್ತು ಅಭಿರುಚಿ ಮೆಚ್ಚುವಂತಹದ್ದು ಎಂದು ನುಡಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಗಿನ ಗೌರಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಥನ ಬರಹಗಳನ್ನು ಮೀರಿ ನಿಲ್ಲುವ ಬರಹಗಾರರು ಬರುವ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ಕನ್ನಡ ಕೊಡವ ಭಾಷೆ ಸೇರಿದಂತೆ ಎಲ್ಲ ಉಪ ಭಾಷೆಗಳ ಆಧಾರ ಸ್ಥಂಭವಾಗಿದೆ. ಕೊಡವ ಭಾಷೆ ಸೇರಿದಂತೆ ತುಳು, ಅರೆಭಾಷೆ ಮತ್ತು ಹಲವು ಹಲವು ಬುಡಕಟ್ಟು ಭಾಷೆಗಳೂ ಕನ್ನಡದ ಲಿಪಿಯನ್ನೇ ಬಳಸುತ್ತಿವೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿರುವ ಎಂ.ಜಿ. ನಾಗರಾಜು ಅವರು ಸ್ಥಳೀಯ ಕಾಲೇಜಿನಲ್ಲಿ ಗಣಿತದ ಶಿಕ್ಷಕರಾಗಿದ್ದರೂ ಕನ್ನಡದಲ್ಲಿ ಹೆಚ್ಚಿನ ಪ್ರಭುತ್ವ ಸಾಧಿಸಿದ್ದರು. ಕೊಡಗಿನ ಐನ್ಮನೆ, ಕೈಮಡ, ಕಾರಣ ಕೊಡುವುದು, ಕೊಡಗಿನ ಸಂಸ್ಕೃತಿ ಮೊದಲಾದವುಗಳ ಬಗ್ಗೆ ಅತ್ಯುತ್ತಮ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಬರವಣಿಗೆಗೆ ಕನ್ನಡ ಭಾಷಾ ಡಾ. ಜೆ. ಸೋಮಣ್ಣ
ಪೊನ್ನಂಪೇಟೆ, ಆ. ೧೨: ಕೊಡಗಿನ ಕನ್ನಡ ಸಾಹಿತ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಜೊತೆಗೆ ಭಾಷೆ ಬೆಳೆಸುವಲ್ಲಿಯೂ ಇವರ ಸೇವೆ ಅನನ್ಯ ಎಂದು ಸಾಹಿತಿ ಡಾ. ಜೆ. ಸೋಮಣ್ಣ ಹೇಳಿದರು.
ಪೊನ್ನಂಪೇಟೆ ಸರ್ಕಾರಿ ಸಂಯಕ್ತ ಪದವಿಪೂರ್ವ ಕಾಲೇಜಿನಲ್ಲಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ‘ಡಾ. ಎಂ.ಜಿ. ನಾಗರಾಜು ದತ್ತಿನಿಧಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ಭಾರತಿಸುತರು ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಎಡಕಲ್ಲು ಗುಡ್ಡದ ಮೇಲೆ, ಬಯಲುದಾರಿ ಮೊದಲಾದ ಅಮೂಲ್ಯ ಕಾದಂಬರಿಗಳನ್ನು ರಚಿಸಿದರು. ಇವುಗಳಲ್ಲೆಲ್ಲ ಕೊಡಗಿನ ಸಂಸ್ಕೃತಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅಂತೆಯೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಕೆ.ಜಿ. ರಮ್ಯ, ಕಾಜೂರು ಸತೀಶ್ ಕೂಡ ಉತ್ತಮ ಕವಿತೆ ರಚಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಿರುವ ಆಸಕ್ತಿ ಮತ್ತು ಅಭಿರುಚಿ ಮೆಚ್ಚುವಂತಹದ್ದು ಎಂದು ನುಡಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಗಿನ ಗೌರಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಥನ ಬರಹಗಳನ್ನು ಮೀರಿ ನಿಲ್ಲುವ ಬರಹಗಾರರು ಬರುವ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ಕನ್ನಡ ಕೊಡವ ಭಾಷೆ ಸೇರಿದಂತೆ ಎಲ್ಲ ಉಪ ಭಾಷೆಗಳ ಆಧಾರ ಸ್ಥಂಭವಾಗಿದೆ. ಕೊಡವ ಭಾಷೆ ಸೇರಿದಂತೆ ತುಳು, ಅರೆಭಾಷೆ ಮತ್ತು ಹಲವು ಹಲವು ಬುಡಕಟ್ಟು ಭಾಷೆಗಳೂ ಕನ್ನಡದ ಲಿಪಿಯನ್ನೇ ಬಳಸುತ್ತಿವೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿರುವ ಎಂ.ಜಿ. ನಾಗರಾಜು ಅವರು ಸ್ಥಳೀಯ ಕಾಲೇಜಿನಲ್ಲಿ ಗಣಿತದ ಶಿಕ್ಷಕರಾಗಿದ್ದರೂ ಕನ್ನಡದಲ್ಲಿ ಹೆಚ್ಚಿನ ಪ್ರಭುತ್ವ ಸಾಧಿಸಿದ್ದರು. ಕೊಡಗಿನ ಐನ್ಮನೆ, ಕೈಮಡ, ಕಾರಣ ಕೊಡುವುದು, ಕೊಡಗಿನ ಸಂಸ್ಕೃತಿ ಮೊದಲಾದವುಗಳ ಬಗ್ಗೆ ಅತ್ಯುತ್ತಮ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಬರವಣಿಗೆಗೆ ಕನ್ನಡ ಭಾಷಾ