ಸೋಮವಾರಪೇಟೆ, ಆ.೧೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೃಷ್ಟಿಯ ಚಿಗುರು ಕವಿ ಬಳಗದ ವತಿಯಿಂದ ತಾ. ೧೪ರಂದು (ನಾಳೆ) ಪಟ್ಟಣದ ಮಹಿಳಾ ಸಮಾಜದಲ್ಲಿ ಗೀತಗಾಯನ, ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೯.೩೦ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಉದ್ಘಾಟಿಸಲಿದ್ದು, ಗೌರಮ್ಮ ದತ್ತಿ ನಿಧಿ ಪುರಸ್ಕೃತೆ ಜಲಾ ಕಾಳಪ್ಪ, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್, ಪ.ಪಂ. ಉಪಾಧ್ಯಕ್ಷ ಸಂಜೀವ, ಕರವೇ ಅಧ್ಯಕ್ಷ ದೀಪಕ್, ನಿವೃತ್ತ ಮುಖ್ಯ ಶಿಕ್ಷಕ ನಿರ್ವಾಣಿ ಶೆಟ್ಟಿ, ಮಹಿಳಾ ಸಮಾಜ ಅಧ್ಯಕ್ಷೆ ಸುಮಾ ಸುದೀಪ್, ನಾವು ಪ್ರತಿಷ್ಠಾನದ ಗೌತಮ್, ಹಿರಿಯ ಸಾಹಿತಿ ನ.ಲ. ವಿಜಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕವಿಗಳಾದ ಪುಟ್ಟಣ್ಣ ಆಚಾರ್ಯ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೆಸ್ಕ್ನ ಹಿರಿಯ ಸಹಾಯಕ ಗುಣಶೇಖರ್, ಬರಹಗಾರ ಕೆ.ವಿ. ಪುಟ್ಟಣ್ಣ, ಅಂಗನವಾಡಿ ಶಿಕ್ಷಕಿ ಶಾರದ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಸುದರ್ಶನ್ ಮಾಹಿತಿ ನೀಡಿದ್ದಾರೆ.