ಇನ್ನೊಂದು ತಿಂಗಳಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗ
ಪಾಟ್ನ, ಆ. ೧೨: ತಾ. ೨೪ಕ್ಕೆ ಬಿಹಾರದಲ್ಲಿ ಹೊಸ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಮಾತನಾಡಿರುವ ಉಪಮುಖ್ಯಮಂತ್ರಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್, ತಾವು ಅಧಿಕಾರದಲ್ಲಿ ಮುಂದುವರೆದರೆ, ಯುವಕರ ಭವಿಷ್ಯಕ್ಕೆ ಸಂಬAಧಿಸಿದ ಉದ್ಯೋಗ ಸೇರಿದಂತೆ ಹಲವು ವಿಷಯಗಳೆಡೆಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ನಾವು ಈಗ ಸರ್ಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗ ಮೊದಲಾದ ಯುವಪೀಳಿಗೆಯ ಭವಿಷ್ಯಕ್ಕೆ ಸಂಬAಧಿಸಿದ ವಿಷಯಗಳನ್ನು ಬಗೆಹರಿಸುವುದಕ್ಕೆ ಗಮನ ನೀಡುತ್ತೇವೆ. ಹಿಂದೂ-ಮುಸ್ಲಿA ವಿಷಯ, ಮಂದಿರ-ಮಸೀದಿಯ ವಿಷಯಗಳು ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಚರ್ಚೆಯಾಗುತ್ತಿತ್ತು. ಆಗ ಸಮಾಜದಲ್ಲಿ ದ್ವೇಷ ಮಾತ್ರ ಹರಡುತ್ತಿತ್ತು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ನಿತೀಶ್ ಕುಮಾರ್ ಅವರ ಜೆಡಿ(ಯು) ಜೊತೆಗಿನ ಮೈತ್ರಿಯನ್ನು ಸಹಜ ಮೈತ್ರಿ ಎಂದು ಹೇಳಿದ್ದ ತೇಜಸ್ವಿ ಯಾದವ್, ಇದು ಡೀಲ್ ಅಲ್ಲ ಎಂದು ಹೇಳಿದ್ದಾರೆ. ತಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಒಂದು ತಿಂಗಳ ಅವಧಿಯಲ್ಲಿ ಬಿಹಾರ ಸರ್ಕಾರಿ ನೌಕರಿ ನೀಡುವ ಅತಿ ಡೊಡ್ಡ ರಾಜ್ಯವಾಗಲಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ತಗ್ಗಿದ ಆಹಾರ ಪದಾರ್ಥಗಳ ಬೆಲೆ
ನವದೆಹಲಿ, ಆ. ೧೨: ಆಹಾರ ಪದಾರ್ಥಗಳ ಬೆಲೆ ಸ್ವಲ್ಪ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ. ೬.೭೧ ಇಳಿಕೆಯಾಗಿದೆ. ಇದು ಮಾರ್ಚ್ ನಂತರದ ಅತ್ಯಂತ ಕಡಿಮೆ ಹಣದುಬ್ಬರವಾಗಿದೆ. ಕಳೆದ ಜೂನ್ನಲ್ಲಿ, ಚಿಲ್ಲರೆ ಹಣದುಬ್ಬರವು ಶೇ. ೭.೦೧ ರಷ್ಟಿತ್ತು ಮತ್ತು ಜುಲೈ ೨೦೨೧ ರಲ್ಲಿ ಇದು ಶೇ. ೫.೫೯ ರಷ್ಟಿತ್ತು. ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಆಹಾರ ಹಣದುಬ್ಬರವು ಜೂನ್ನಲ್ಲಿ ಶೇ. ೭.೭೫ ರಷ್ಟು ಇತ್ತು. ಇದು ಜುಲೈ ೨೦೨೨ ರಲ್ಲಿ ಶೇ. ೬.೭೫ ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಲ್ಲಿ ಶೇ. ೬.೭೧ಕ್ಕೆ ಇಳಿದರೂ ಭಾರತೀಯ ರಿಸರ್ವ್ ಬ್ಯಾಂಕ್ನ ಗುರಿಯ ಮೇಲಿನ ಮಿತಿಯನ್ನು ಮೀರಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ. ೭ಕ್ಕಿಂತ ಹೆಚ್ಚಿತ್ತು.
ಪದಕ ವಿಜೇತರಿಗೆ ಪ್ರಧಾನಿ ಮೋದಿಯಿಂದ ಆತಿಥ್ಯ
ನವದೆಹಲಿ, ಆ. ೧೨: ಇತ್ತೀಚಿಗೆ ಮುಕ್ತಾಯವಾದ ಕಾಮನ್ವೆಲ್ತ್ ಗೇಮ್ಸ್ ೨೦೨೨ರ ಎಲ್ಲಾ ಪದಕ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ತಾ. ೧೩ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ತನ್ನ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಲಿದ್ದಾರೆ. ಜುಲೈ ೨೮ ರಿಂದ ಆಗಸ್ಟ್ ೮ ರವರೆಗೆ ಬರ್ಮಿಂಗ್ ಹ್ಯಾಮ್ನಲ್ಲಿ ನಡೆದ ಬಹು ಕ್ರೀಡೆಗಳ ಕ್ರೀಡೂಕೂಟದಲ್ಲಿ ಸುಮಾರು ೨೦೦ ಭಾರತೀಯ ಆಥ್ಲಿಟ್ಗಳು ೧೬ ವಿವಿಧ ಕ್ರೀಡೆಗಳಲ್ಲಿ ಪದಕಗಳಿಗಾಗಿ ಸ್ಪರ್ಧೆ ಮಾಡಿದ್ದರು. ಭಾರತ ೨೨ ಚಿನ್ನ, ೧೬ ಬೆಳ್ಳಿ ಮತ್ತು ೨೩ ಕಂಚಿನ ಪದಕದೊಂದಿಗೆ ಒಟ್ಟಾರೇ ೬೧ ಪದಕ ಗೆಲ್ಲುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕುಸ್ತಿಯಲ್ಲಿಯೇ ಭಾರತ ಹೆಚ್ಚಿನ ಪದಕ ಗಳಿಸಿದೆ. ಆರು ಚಿನ್ನ ಸೇರಿದಂತೆ ೧೨ ಪದಕಗಳನ್ನು ಕುಸ್ತಿಯಲ್ಲಿಯೇ ಬಂದಿವೆ. ಭಾರ ಎತ್ತುವ ಸ್ಪರ್ಧೆಯಲ್ಲಿ ೧೦ ಪದಕಗಳು ಭಾರತಕ್ಕೆ ಲಭಿಸಿದೆ. ೫೦ ಕೆ.ಜಿ. ತೂಕದ ಮಹಿಳೆಯರ ವಿಭಾಗದ ಕುಸ್ತಿ ಪಂದ್ಯದ ಫೈನಲ್ ಪಂದ್ಯದಲ್ಲಿ ಚಿನ್ನ ಪದಕ ಗೆದ್ದ ನಂತರ ಮಾತನಾಡಿದ್ದ ಜರೀನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಮತ್ತು ತನ್ನ ಬಾಕ್ಸಿಂಗ್ ಗ್ಲೌಸ್ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಕಳೆದ ಬಾರಿ ನಾನು ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದೆ ಮತ್ತು ಈಗ ಹೊಸದನ್ನು ಬಯಸುತ್ತೇನೆ. ಕಳೆದ ಬಾರಿ, ನಾನು ನನ್ನ ಟಿ-ಶರ್ಟ್ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದೇ. ಈಗ ನಾನು ಅದನ್ನು ನನ್ನ ಬಾಕ್ಸಿಂಗ್ ಗ್ಲೌಸ್ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಆಗಸ್ಟ್ ೭ ರಂದು ಚಿನ್ನ ಗೆದ್ದ ನಂತರ ನಿಕಾತ್ ಜರೀನ್ ಎಎನ್ಐಗೆ ತಿಳಿಸಿದ್ದರು.
ಕೊಯಂಬತ್ತೂರು: ಗೋ ಫಸ್ಟ್ ತುರ್ತು ಭೂ ಸ್ಪರ್ಶ
ಕೊಯಮತ್ತೂರು, ಆ. ೧೨: ಬೆಂಗಳೂರಿನಿAದ ಮಾಲ್ಡೀವ್ಸ್ನ ಮಾಲೆಗೆ ತೆರಳುತ್ತಿದ್ದ ೯೨ ಪ್ರಯಾಣಿಕರಿದ್ದ ಗೋ ಫಸ್ಟ್ ವಿಮಾನವೊಂದು ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶವಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿಮಾನ ಹಾರುತ್ತಿರುವಾಗ ಹೊಗೆಯ ಎಚ್ಚರಿಕೆಯನ್ನು ಪೈಲಟ್ ಗಮನಿಸಿದ ನಂತರ ವಿಮಾನ ತುರ್ತು ಭೂ ಸ್ಪರ್ಶ ಮಾಡಿತು. ಆದರೆ, ಇದು ತಪ್ಪಾದ ಎಚ್ಚರಿಕೆಯಿಂದ ಆಗಿರುವುದಾಗಿ ಕೊಯಮತ್ತೂರಿನ ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ. ಎರಡು ಎಂಜಿನ್ಗಳು ಹೆಚ್ಚಾಗಿ ಬಿಸಿಯಾದ ನಂತರ ಎಚ್ಚರಿಕೆ ನೀಡಲಾಯಿತು. ಎಂಜಿನ್ಗಳನ್ನು ಪರಿಶೀಲಿಸಿದ ಎಂಜಿನಿಯರ್ಗಳು, ಎಚ್ಚರಿಕೆ ನೀಡುವಲ್ಲಿ ತಪ್ಪಾಗಿದೆ. ವಿಮಾನ ಹಾರಾಟ ನಡೆಸಲು ಸಮರ್ಥವಾಗಿದೆ ಎಂದು ಪ್ರಕಟಿಸಿದ್ದಾಗಿ ಹೇಳಲಾಗಿದೆ. ಈ ವಿಷಯಕ್ಕೆ ಸಂಬAಧಿಸಿದAತೆ ಗೋ ಫಸ್ಟ್ ಎಂಜಿನಿಯರಿAಗ್ ತಂಡ ಪರಿಶೀಲನೆ ನಡೆಸುತ್ತದೆ ಎಂದು ವಿಮಾನಯಾನದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಕರ್ನಾಟಕದ ೬ ಪೊಲೀಸ್ ಅಧಿಕಾರಿಗಳಿಗೆ ಶ್ರೇಷ್ಠ ತನಿಖಾ ಪದಕ
ನವದೆಹಲಿ/ಬೆಂಗಳೂರು, ಆ. ೧೨: ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ದೇಶದ ಒಟ್ಟು ೧೫೧ ಮಂದಿಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ನೀಡಲಾಗಿದೆ. ಅಪರಾಧ ಪ್ರಕರಣಗಳ ಉತ್ತಮ ತನಿಖೆಗಾಗಿ ಕರ್ನಾಟಕದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮೀ ಗಣೇಶ್ ಕೆ, ಡಿವೈಎಸ್ಪಿಗಳಾದ ವೆಂಕಟಪ್ಪ ನಾಯಕ, ಮೈಸೂರು ರಾಜೇಂದ್ರ ಗೌತಮ್, ಶಂಕರ್ ಕಾಳಪ್ಪ ಮಾರಿಹಾಳ್, ಶಂಕರಗೌಡ ವೀರಣ್ಣಗೌಡ ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್ ಗುರುಬಸವರಾಜ ಹೆಚ್. ಹಿರೇಗೌಡರ್ ಅವರುಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ ಘೋಷಿಸಲಾಗಿದೆ. ಇನ್ನೂ ಪ್ರಶಸ್ತಿ ಪಡೆದವರಲ್ಲಿ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ೧೫, ಮಹಾರಾಷ್ಟç ಪೊಲೀಸ್ ಇಲಾಖೆಯ ೧೧, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ತಲಾ ೧೦, ಕೇರಳ ಪೊಲೀಸ್, ರಾಜಸ್ಥಾನ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ತಲಾ ಎಂಟು ಅಧಿಕಾರಿಗಳು ಪದಕ ಪುರಸ್ಕೃತರಾಗಿದ್ದಾರೆ. ಅಂತೆಯೇ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕೂಡ ಪ್ರಶಸ್ತಿಗೆ ಭಾಜನರಾಗಿದ್ದು, ಇದಲ್ಲದೆ ಪ್ರಶಸ್ತಿ ಪುರಸ್ಕೃತರಲ್ಲಿ ೨೮ ಮಹಿಳಾ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ ೨೦೧೮ರಲ್ಲಿ ಈ ಪದಕ ನೀಡಿಕೆ ಆರಂಭಿಸಲಾಗಿತ್ತು. ಇದನ್ನು ಪ್ರತಿ ವರ್ಷ ಆಗಸ್ಟ್ ೧೨ ರಂದು ಘೋಷಿಸಲಾಗುತ್ತದೆ.
ಆತ್ಮಾಹುತಿ ದಾಳಿಯಲ್ಲಿ ರಹೀಮುಲ್ಲಾ ಹಕ್ಕಾನಿ ಹತ್ಯೆ
ಕಾಬುಲ್, ಆ. ೧೨: ಇಸ್ಲಾಮಿಕ್ ಸ್ಟೇಟ್ ವಿರುದ್ಧ ಕಟು ಶಬ್ದಗಳಲ್ಲಿ ಟೀಕೆ ಮಾಡುತ್ತಿದ್ದ ತಾಲೀಬಾನ್ನ ಹಿರಿಯ ಮೌಲ್ವಿಯನ್ನು ಅಫ್ಘಾನಿಸ್ತಾನದ ತಮ್ಮ ಮದರಸಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಐಎಸ್ ಉಗ್ರ ಸಂಘಟನೆ ಹೇಳಿದೆ. ರಹೀಮುಲ್ಲಾ ಹಕ್ಕಾನಿ ಇತ್ತೀಚಿನ ಸಾರ್ವಜನಿಕ ಭಾಷಣದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಅವಕಾಶ ನೀಡುವುದರ ಪರವಾಗಿ ಮಾತನಾಡಿದ್ದರು. ಅವರ ವಿರುದ್ಧ ಈ ಹಿಂದೆ ೨ ಬಾರಿ ಹತ್ಯೆ ಯತ್ನ ನಡೆದಿತ್ತಾದರೂ ಅಪಾಯದಿಂದ ಪಾರಾಗಿದ್ದರು. ಶೇಖ್ ರಹೀಮುಲ್ಲಾ ಅವರ ಮದರಸಾವನ್ನು ಟಾರ್ಗೆಟ್ ಮಾಡಲಾಯಿತು, ಪರಿಣಾಮವಾಗಿ ಅವರು ಹಾಗೂ ಅವರ ಓರ್ವ ಸಹೋದರ ಹುತಾತ್ಮರಾಗಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲೀದ್ ಝಾದ್ರಾನ್ ಹೇಳಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ, ಘಟನೆಯಲ್ಲಿ ಹಕ್ಕಾನಿ ಮಾತ್ರ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಖಾಲೀದ್ ಝಾದ್ರಾನ್ ಹೇಳಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಐಎಸ್ ಹೊಣೆ ಹೊತ್ತುಕೊಂಡಿದ್ದು, ಮೌಲ್ವಿಯ ಕಚೇರಿಯಲ್ಲಿ ಆತ್ಮಹತ್ಯಾ ಬಾಂಬರ್ ಓರ್ವ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಉಗ್ರ ಸಂಘಟನೆ ಹೇಳಿದೆ.