!

ಗೋಣಿಕೊಪ್ಪಲು, ಆ. ೧೨: ದ.ಕೊಡಗಿನಲ್ಲಿ ಸುರಿಯುತ್ತಿದ್ದ ವರುಣ ಇದೀಗ ಕೊಂಚಮಟ್ಟಿಗೆ ಗ್ರಾಮೀಣ ಭಾಗದಲ್ಲಿ ಬಿಡುವು ನೀಡಿದ್ದಾನೆ. ನಗರ ಪ್ರದೇಶದಲ್ಲಿ ಮುಂಜಾನೆಯಿAದ ಸಂಜೆತನಕ ವರುಣನ ದರ್ಶನವಾಗಲಿಲ್ಲ. ಬಿಸಿಲಿನ ವಾತಾವರಣ ಕಂಡು ಬಂದಿದ್ದು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ನಗರದ ಕೀರೆ ಹೊಳೆ ಸೇರಿದಂತೆ ಬಾಳೆಲೆ, ನಿಟ್ಟೂರು, ಹರಿಹರ ಕಾನೂರು ಭಾಗದಲ್ಲಿ ಹರಿಯುವ ಲಕ್ಷö್ಮಣ ತೀರ್ಥ ನದಿಯ ಮಟ್ಟ ಕೆಳಗಿಳಿದಿದೆ.

ಮಳೆ ಬಿಡುವು ನೀಡಿದ ಪರಿಣಾಮ ಬಿಸಿಲಿನ ವಾತಾವರಣ ಕಂಡು ಬರುತ್ತಿದ್ದಂತೆಯೇ ಭತ್ತದ ಗದ್ದೆಗಳಿಗೆ ಇಳಿದ ರೈತರು ಭತ್ತ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿ.ಶೆಟ್ಟಿಗೇರಿ ಗ್ರಾಮದ ರೈತರಾದ ಚೇರಂಡ ಜಗನ್‌ರವರಿಗೆ ಸೇರಿದ ಕೆರೆಯು ನೀರಿನ ರಭಸಕ್ಕೆ ಜರಿದು ಹೋಗಿದ್ದು ಕೆರೆ ಅರ್ಧ ಭಾಗವು ಮಣ್ಣಿನಿಂದ ಮುಚ್ಚಿ ಹೋಗಿವೆ. ಅಲ್ಲದೆ ಈ ಭಾಗದ ಬಹುತೇಕ ರೈತರ ಕಾಫಿ ತೋಟದಲ್ಲಿ ಕಾಫಿ, ಅಡಿಕೆ ಉದುರಲಾರಂಭಿಸಿದೆ. ಗ್ರಾಮೀಣ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ.

ಅಮ್ಮತ್ತಿ ಹೋಬಳಿಯ ನಲ್ವತ್ತೋಕ್ಲು ಗ್ರಾಮದ ಡಿ.ಎಸ್.ರಫೀಕ್ ಅವರಿಗೆ ಸೇರಿದ ವಾಸದ ಮನೆಯು ರಾತ್ರಿ ಸುರಿದ ಗಾಳಿ ಮಳೆಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಹುದಿಕೇರಿ ಹೋಬಳಿ ಬೆಳ್ಳೂರು ಗ್ರಾಮದ ನೂರೆರ ಬೋಪಯ್ಯನವರ ವಾಸದ ಮನೆಯು ರಾತ್ರಿ ಸುರಿದ ಮಳೆಗೆ ಭಾಗಶಃ ಹಾನಿಯಾಗಿ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಹುದಿಕೇರಿ ಹೋಬಳಿಯ ತೂಚಮಕೇರಿ ಬಳಿಯ ಬಲ್ಯಮಂಡೂರುವಿನ ಮಾಪಣಮಾಡ ಬಿದ್ದಪ್ಪ ಇವರಿಗೆ ಸೇರಿದ ಮನೆಯು ಮಳೆಯಿಂದ ಹಾನಿಗೊಳಗಾಗಿವೆ.

ಮಳೆ ಬಿಡುವು ನೀಡಿದ್ದರೂ ಆಗಿಂದ್ದಾಗ್ಗೆ ಗಾಳಿಯು ರಭಸವಾಗಿ ಬೀಸುತ್ತಿರುವುದರಿಂದ ವಿದ್ಯುತ್ ಕಂಬಗಳ ಮೇಲೆ ಗ್ರಾಮೀಣ ಭಾಗದಲ್ಲಿ ಮರಗಳು ಬೀಳುತ್ತಲೇ ಇದೆ. ಇದರಿಂದ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗುತ್ತಿದೆ. ಮಳೆ ಬಿಡುವು ನೀಡಿರುವುದರಿಂದ ಸೆಸ್ಕ್ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಅನುಕೂಲಕರವಾಗಿದೆ.

ತೀವ್ರ ಮಳೆಯಿಂದ ಕೆಲವು ಗ್ರಾಮೀಣ ಪ್ರದೇಶಗಳಿಗೆ

ಖಾಸಗಿ ಬಸ್‌ಗಳ ಸಂಚಾರದಲ್ಲಿ ವೆತ್ಯೆಯ ಉಂಟಾಗಿತ್ತು. ಇದೀಗ ಗ್ರಾಮೀಣ ಭಾಗಕ್ಕೆ ಎಂದಿನAತೆ ಖಾಸಗಿ ಬಸ್‌ಗಳ ಸಂಚಾರ ಆರಂಭಗೊAಡಿದೆ.

ಹೊದ್ದೂರು : ನಿನ್ನೆ ಸುರಿದ ಭಾರೀ ಮಳೆಗೆ ಹೊದ್ದೂರು ಗ್ರಾಮದ ಕೆ.ಎಂ. ನಾಣಯ್ಯ ಅವರ ಮನೆಯ ಅಂಗಳದ ಮುಂಭಾಗದ ತಡೆಗೋಡೆ ಕುಸಿತಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.ನಾಪೋಕ್ಲು: ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ಪ್ರವಾಹದಿಂದಾಗಿ ಜಲಾವೃತಗೊಂಡ ರಸ್ತೆಗಳಲ್ಲಿ ನೀರಿನ ಹರಿವು ತಗ್ಗಿದೆ. ಆದರೆ ತಗ್ಗುಪ್ರದೇಶಗಳಲ್ಲಿ ಇನ್ನೂ ನೀರಿನ ಹರಿವು ಕಡಿಮೆಯಾಗಿಲ್ಲ. ಇಲ್ಲಿನ ಕಾಫಿ ತೋಟಗಳಲ್ಲಿ ನೀರು ಹಲವು ದಿನಗಳಿಂದ ಶೇಖರಣೆಗೊಂಡಿದ್ದು ಕಾಫಿಯ ಫಸಲು ಉದುರುತ್ತಿದ್ದು ಗಿಡಗಳಿಗೆ ಕೊಳೆರೋಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.ಸೋಮವಾರಪೇಟೆ: ವಾತಾವರಣದಲ್ಲಿನ ಅತೀ ತೇವಾಂಶ, ಮಳೆ-ಗಾಳಿಗೆ ಸೋಮವಾರಪೇಟೆ ತಾಲೂಕಿನ ವಿವಿಧೆಡೆ ವಾಸದ ಮನೆಗಳು ಕುಸಿತಗೊಂಡು ನಷ್ಟ ಸಂಭವಿಸಿವೆ. ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿಯ ಕಲ್ಕಂದೂರು ಗ್ರಾಮದ ಅಕ್ಬರ್ ಆಲಿ ಅವರಿಗೆ ಸೇರಿದ ವಾಸದ ಮನೆ ನಿನ್ನೆ ರಾತ್ರಿ ಕುಸಿದುಬಿದ್ದಿದೆ. ಮನೆಯಲ್ಲಿ ೬ ಮಂದಿ ಇದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಕೊಡ್ಲಿಪೇಟೆ ಹೋಬಳಿಯ ಕೋಣಿಗನಹಳ್ಳಿ ಗ್ರಾಮದ ಸುರೇಶ್ ಅವರಿಗೆ ಸೇರಿದ ಮನೆ ಶೇ.೨೦ರಷ್ಟು ಹಾನಿಗೊಂಡಿದೆ. ರಾಮೇನಹಳ್ಳಿ ಗ್ರಾಮದ ಸುಶೀಲ, ಚೆನ್ನಾಪುರ ಗ್ರಾಮದ ಲಲಿತಾ ಅವರುಗಳಿಗೆ ಸೇರಿದ ಮನೆಗಳೂ ಅತೀ ಮಳೆಗೆ ಭಾಗಶಃ ಕುಸಿದು ನಷ್ಟ ಸಂಭವಿಸಿದೆ. ಶಾಂತಳ್ಳಿ ಹೋಬಳಿ ದೊಡ್ಡತೋಳೂರು ಗ್ರಾಮದ ಹೆಚ್.ಕೆ. ಮೋಹನ ಅವರ ವಾಸದ ಮನೆಯ ಗೋಡೆ ಕುಸಿದು ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿಂಭಾಗದ ನಿವಾಸಿ ಲತೀಫ್ ಅವರ ಮನೆಯ ಪಕ್ಕದಲ್ಲಿ ಬರೆ ಕುಸಿದಿದ್ದು, ಮನೆಯೊಳಗೆ ಕೆಸರು ಶೇಖರಣೆಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಮನುಕುಮಾರ್, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ಲೀನಾ, ಸದಸ್ಯರಾದ ಹನೀಫ್, ಪಾವನ, ಕಾರ್ಯದರ್ಶಿ ಅಶ್ವಥ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಂಚಾಯಿತಿ ವತಿಯಿಂದ ಮಣ್ಣು ತೆರವು ಕಾರ್ಯ ನಡೆಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ಕೊಡ್ಲಿಪೇಟೆ ಹೋಬಳಿಗೆ ೫೦ ಮಿ.ಮೀ., ಶನಿವಾರಸಂತೆ ಹೋಬಳಿಗೆ ೪೮, ಶಾಂತಳ್ಳಿಗೆ ೧೯೮ ಹಾಗೂ ಸೋಮವಾರಪೇಟೆ ವ್ಯಾಪ್ತಿಗೆ ೭೨.೬ ಮಿ.ಮೀ. ಮಳೆಯಾಗಿದೆ.ಹೊದ್ದೂರು : ನಿನ್ನೆ ಸುರಿದ ಭಾರೀ ಮಳೆಗೆ ಹೊದ್ದೂರು ಗ್ರಾಮದ ಕೆ.ಎಂ. ನಾಣಯ್ಯ ಅವರ ಮನೆಯ ಅಂಗಳದ ಮುಂಭಾಗದ ತಡೆಗೋಡೆ ಕುಸಿತಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.ಶ್ರೀಮAಗಲ: ಕುಟ್ಟ ಸರಕಾರಿ ಗಿರಿಜನ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಬಾವಿ ಮಳೆಗೆ ಕುಸಿದಿದೆ. ಕುಟ್ಟ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗುರುವಾರ ರಾತ್ರಿ ಕುಸಿತ ಉಂಟಾಗಿದೆ. ಬಾವಿ ತುಂಬಾ ಹಳೆಯದ್ದಾಗಿದ್ದು, ರಿಂಗ್ ಬದಲು ಕಲ್ಲಿನಿಂದ ಕಟ್ಟಲಾಗಿತ್ತು. ಸುಮಾರು ೨೦ ಅಡಿಯಷ್ಟು ಆಳ ಕಲ್ಲು ಸಹಿತ ಕುಸಿದು ಬಿದ್ದಿದೆ.ನಾಪೋಕ್ಲು: ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ಪ್ರವಾಹದಿಂದಾಗಿ ಜಲಾವೃತಗೊಂಡ ರಸ್ತೆಗಳಲ್ಲಿ ನೀರಿನ ಹರಿವು ತಗ್ಗಿದೆ. ಆದರೆ ತಗ್ಗುಪ್ರದೇಶಗಳಲ್ಲಿ ಇನ್ನೂ ನೀರಿನ ಹರಿವು ಕಡಿಮೆಯಾಗಿಲ್ಲ. ಇಲ್ಲಿನ ಕಾಫಿ ತೋಟಗಳಲ್ಲಿ ನೀರು ಹಲವು ದಿನಗಳಿಂದ ಶೇಖರಣೆಗೊಂಡಿದ್ದು ಕಾಫಿಯ ಫಸಲು ಉದುರುತ್ತಿದ್ದು ಗಿಡಗಳಿಗೆ ಕೊಳೆರೋಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.*ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಎಂ.ಜಿ ಕಾಲೋನಿಯಲ್ಲಿ ಮುನಿಯಾಂಡಿ ಎಂಬುವವರ ಮನೆ ಮಹಾಮಳೆಯ ಪರಿಣಾಮ ಸಂಪೂರ್ಣ ಕುಸಿದು ಬಿದ್ದಿದೆ. ಆಶ್ರಯವಿಲ್ಲದ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ. ಆದರೆ ಗ್ರಾ.ಪಂ ಆಡಳಿತ ವ್ಯವಸ್ಥೆಯ ಯಾರೊಬ್ಬರೂ ತಿರುಗಿ ನೋಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯ ಜೆಡಿಎಸ್ ಪ್ರಮುಖ ಶಿಯಾಬ್ ಗ್ರಾ.ಪಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಯಿಂದಾಗಿ ಈ ಕಾಲೋನಿಯಲ್ಲಿ ಎರಡು ಮನೆಗಳು ನೆಲಕಚ್ಚಿವೆ. ಆದರೆ ಆಡಳಿತ ವ್ಯವಸ್ಥೆ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆAದು ಆರೋಪಿಸಿದ್ದಾರೆ. ತಕ್ಷಣ ಗ್ರಾ.ಪಂ ಪ್ರತಿನಿಧಿಗಳು ಭೇಟಿ ನೀಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಂಪಾಜೆ: ಭೀಕರ ಮಳೆಯಿಂದ ನೆರೆ ಹಾನಿಗೊಳಗಾದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಮನೆಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ ಭೇಟಿ ನೀಡಿ ತುರ್ತು ಪರಿಹಾರವಾಗಿ ತಲಾ ೧೦,೦೦೧ ನೀಡಿ ಸಾಂತ್ವನ ಹೇಳಿದರು. ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಭೀಕರ ಮಳೆಯಿಂದಾಗಿ ಹಾನಿಗೊಳಗಾದ ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು ಮತ್ತು ಕೆ.ವಿ.ಜಿ ಐ.ಪಿ.ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮನೆಗೆ ಭೇಟಿ ನೀಡಿದರು.

ಈ ಸಂದರ್ಭ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಸಂಪಾಜೆ: ಭೀಕರ ಮಳೆಯಿಂದ ನೆರೆ ಹಾನಿಗೊಳಗಾದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಮನೆಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ ಭೇಟಿ ನೀಡಿ ತುರ್ತು ಪರಿಹಾರವಾಗಿ ತಲಾ ೧೦,೦೦೧ ನೀಡಿ ಸಾಂತ್ವನ ಹೇಳಿದರು. ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಭೀಕರ ಮಳೆಯಿಂದಾಗಿ ಹಾನಿಗೊಳಗಾದ ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು ಮತ್ತು ಕೆ.ವಿ.ಜಿ ಐ.ಪಿ.ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮನೆಗೆ ಭೇಟಿ ನೀಡಿದರು.

ಈ ಸಂದರ್ಭ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಸಲಹೆಗಾರ ಡಾ. ಉಜ್ವಲ್ ಊರುಬೈಲು, ಕೆ.ವಿ.ಜಿ ಐ.ಪಿ.ಎಸ್ ಪ್ರಾಂಶುಪಾಲ ಅರುಣಕುಮಾರ್, ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈ.ಕೆ, ಕೆ.ವಿ.ಜಿ ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆ.ವಿ.ಜಿ ಪಾಲಿಟೆಕ್ನಿಕ್ ಕಚೇರಿ ಅಧೀಕ್ಷಕ ಶಿವರಾಮ ಕೇರ್ಪಳ, ಎ.ಓ.ಎಲ್.ಇ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ರಾಜ್ಯ ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಭವಾನಿಶಂಕರ ಅಡ್ತಲೆ, ಪಾಲಿಟೆಕ್ನಿಕ್ ಸಿಬ್ಬಂದಿಗಳಾದ ಅರುಣ್ ಕುರುಂಜಿ, ಕಮಲಾಕ್ಷ ನಂಗಾರು, ಕೆ.ವಿ.ಜಿ ಐ.ಪಿ.ಎಸ್ ಸಿಬ್ಬಂದಿಗಳಾದ ಸುಜಿತ್ ಮತ್ತು ಮಂಜುನಾಥ ಮುತ್ಲಾಜೆ ಇದ್ದರು.

ವೀರಾಜಪೇಟೆ: ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ತಾತಂಡ ಪ್ರತಾಪ್ ಅವರ ಮನೆಯ ತಡೆಗೋಡೆ ನಿನ್ನೆ ರಾತ್ರಿ ಸುರಿದ ಮಳೆಗೆ ಕುಸಿತವಾಗಿದ್ದು ತಡೆಗೋಡೆಯ ಮಣ್ಣು ಮತ್ತು ಕಲ್ಲು ಕುಕ್ಲೂರು ಹಾಗೂ ಚೆಂಬೆಬೆಳ್ಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿತ್ತು. ತದ ನಂತರದಲ್ಲಿ ಮನೆಯ ಮಾಲೀಕರು, ಗ್ರಾಮಸ್ಥರ ಸಹಾಯದಿಂದ ಮಣ್ಣು ತೆರವುಗೊಳಿಸಲಾಯಿತು. ಸ್ಥಳಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಲೆಕ್ಕಿಗ ಕೃಷ್ಣ ಚೌಹಾಣ್ ಮತ್ತು ಪಂಚಾಯಿತಿ ಕಾರ್ಯದರ್ಶಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಗೋಣಿಕೊಪ್ಪ : ಚಿಕ್ಕಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಗ್ರಾಮದ ಗದ್ದೆಗಳಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅತಿ ಹೆಚ್ಚು ಮಳೆಯಿಂದ ಕಳ್ಳಿಚಂಡ, ಕೊರಕಂಡ, ಚಿಮ್ಮಣಮಾಡ, ಅಜ್ಜಿಕುಟ್ಟೀರ, ಮುಂಡುಮಾಡ ಕುಂಟುಬಕ್ಕೆ ಸೇರಿದ ಕಾಫಿ ತೋಟ ಮತ್ತು ಗದ್ದೆಗಳಲ್ಲಿದ್ದ ಫಸಲು ಸಂಪೂರ್ಣ ನಾಶವಾಗಿದೆ, ಅತಿ ಹೆಚ್ಚು ಮಳೆ ಸುರಿದ ಪ್ರಮಾಣ ಬರೆಗಳು ಕುಸಿತವಾಗಿದೆ. ಈಗಾಗಲೇ ಬೆಳೆಗಳು ಹಾನಿಯಾಗಿದ್ದು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ, ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಿಸಿದ್ದಾರೆ.