*ಸಿದ್ದಾಪುರ, ಆ. ೧೨: ಅಭ್ಯತ್‌ಮಂಗಲ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಗ್ರೀನ್ ಫೀಲ್ಡ್ ಎಸ್ಟೇಟ್‌ನ “ಎ” ಡಿವಿಷನ್ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ತೋಟಕ್ಕೆ ಹಾನಿ ಮಾಡಿವೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಿದರೂ ಮರಳಿ ಬಂದು ದಾಂಧಲೆ ನಡೆಸುತ್ತಿವೆ. ನಿರಂತರ ದಾಳಿಯಿಂದ ಕಾಫಿ ತೋಟ ನಾಶವಾಗುತ್ತಿದ್ದು, ಅಪಾರ ನಷ್ಟವಾಗುತ್ತಿದೆ. ತಕ್ಷಣ ಶಾಶ್ವತ ಪರಿಹಾರ ಕಂಡುಕೊAಡು ಗ್ರಾಮವನ್ನು ಕಾಡಾನೆ ಮುಕ್ತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.