ಸಿದ್ದಾಪುರ, ಆ ೧೧: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಹಸುಗಳು ಸಾವನ್ನಪ್ಪಿವೆ. ಹಾಲು ನೀಡುತ್ತಿದ್ದ ಹಸುವೊಂದು ಮೇಯಲು ಬಿಟ್ಟಿದ್ದ ವೇಳೆ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾಲ್ದಾರೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಮಾಲ್ದಾರೆ ಗ್ರಾಮದ ಶಿವಕುಮಾರ್ ಎಂಬವರಿಗೆ ಸೇರಿದ ಹಸುವನ್ನು ಮೇಯಲು ಬಿಡಲಾಗಿತ್ತು. ಹಸುವನ್ನು ಕಟ್ಟಿದ್ದ ಜಾಗದ ಬಳಿ ಇದ್ದ ಹರಿಯುವ ನೀರಿನ ತೋಡಿಗೆ ಆಕಸ್ಮಿಕವಾಗಿ ಬಿದ್ದ ಪರಿಣಾಮ ಹಸು ಸಾವನ್ನಪ್ಪಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಪ್ರವೀಣ್, ಗ್ರಾಮ ಸಹಾಯಕಿ ಸಾವಿತ್ರಿ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. *ಗಾಳಿ-ಮಳೆಗೆ ಸಿಲುಕಿ ಹಸುವೊಂದು ಸಾವನ್ನಪ್ಪಿರುವ ಘಟನೆ ಇಂಜಿಲಗೆರೆ ಗ್ರಾಮದಲ್ಲಿ ನಡೆದಿದೆ. ಧಾರಾಕಾರ ಮಳೆಯಿಂದಾಗಿ ಅತಿಯಾದ ಶೀತದಿಂದ ಇಂಜಿಲಗೆರೆಯ ಪುಲಿಯೇರಿ ಗ್ರಾಮದ ನಿವಾಸಿಯಾಗಿರುವ ಪ್ರಹ್ಲಾದ ಎಂಬವರಿಗೆ ಸೇರಿದ ಗಬ್ಬದ ಹಸು ಗುರುವಾರ ಸಾವನ್ನಪ್ಪಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಮೋನಿಕ, ಗ್ರಾಮ ಸಹಾಯಕ ಸತೀಶ್, ಇತರರು ಭೇಟಿ ನೀಡಿ ಪರಿಶೀಲನೆ ಮಾಡಿದರು.ನಾಪೋಕ್ಲು: ಕೊಳಕೇರಿ ಗ್ರಾಮದ ಕಾಂಡAಡ ಕುಮಾರಿ ಎಂಬವರಿಗೆ ಸೇರಿದ ಹಾಲು ನೀಡುತ್ತಿದ್ದ ಹಸು ಭಾರೀ ಗಾಳಿ ಮಳೆಗೆ ತೋಟದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿ ಎರಡು ತಿಂಗಳ ಕರು ಅನಾಥವಾಗಿ ಆದಾಯವು ಇಲ್ಲದಂತಾಗಿ ಸುಮಾರು ೩೦ ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಕುಮಾರಿ ಅವರು ಸೂಕ್ತ ಪರಿಹಾರಕ್ಕೆ ಸಂಬAಧಿಸಿದವರನ್ನು ಒತ್ತಾಯಪಡಿಸಿದ್ದಾರೆ. ಸ್ಥಳಕ್ಕೆ ಪಶು ವೈದ್ಯಕೀಯ ಸಿಬ್ಬಂದಿ ಸುನಿಲ್ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡಿದ್ದಾರೆ.