ವೀರಾಜಪೇಟೆ. ಆ.೧೧: ತಾ. ೧ರಂದು ಮಡಿಕೇರಿ ರಸ್ತೆಯ ಕದನೂರಿನಲ್ಲಿ ಉಂಟಾದ ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಗರದ ಹಿರಿಯ ದಿನಸಿ ವಸ್ತುಗಳ ಹೋಲ್ಸೇಲ್ ವರ್ತಕ, ತೆಲುಗರ ಬೀದಿಯ ಟಿ.ಕೆ. ಶ್ರೀನಿವಾಸ ಶೆಟ್ಟಿ (೬೫) ತಾ. ೧೦ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತರು ತೆಲುಗರಬೀದಿಯ ಶ್ರೀ ಮಾರಿಯಮ್ಮ ಅಂಗಾಳ ಪರಮೇಶ್ವರಿ ದೇವಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತೆಲುಗರ ಬೀದಿಯ ಸ್ಮಶಾನದಲ್ಲಿ ಸಂಸ್ಕರಿಸಲಾಯಿತು. ಮೃತರ ಮೇಲಿನ ಗೌರವ ಸೂಚಕವಾಗಿ ವೀರಾಜಪೇಟೆ ನಗರದ ವರ್ತಕರು ಎರಡು ಗಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಿದರು.