ಮಡಿಕೇರಿ, ಆ. ೧೦: ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ತಾ. ೧೯ ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ವಿಶ್ವ ಛಾಯಾಗ್ರಾಹಣ ದಿನಾಚರಣೆ ನಡೆಯಲಿದ್ದು, ಕೊಡಗಿನ ಐವರು ಹಿರಿಯ ಪತ್ರಿಕಾ ಛಾಯಾಗ್ರಹಕ ರನ್ನು ಸನ್ಮಾನಿಸಲಾಗುತ್ತಿದೆ.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಅಧ್ಯಕ್ಷತೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಎಸ್.ಎಲ್. ಶಿವಣ್ಣ, ಹೆಚ್.ಎನ್. ಲಕ್ಷಿö್ಮÃಶ್, ವಿನ್ಸೆಂಟ್ ಸುಂಟಿಕೊಪ್ಪ, ಟಿ.ಸಿ. ನಾಗರಾಜ್, ಐನಂಡ ಬೋಪಣ್ಣ ಅವರನ್ನು ಸನ್ಮಾನಿಸಿ ಗೌರವಿಸಲು ನಿರ್ಧರಿಸಲಾಯಿತು.

ಕಾರ್ಯಕ್ರಮದ ಸಂಚಾಲಕರಾಗಿ ಲಕ್ಷಿö್ಮÃಶ್, ಉಸ್ತುವಾರಿಯಾಗಿ ಜಿ.ವಿ. ರವಿಕುಮಾರ್, ಸಮಿತಿಯ ಸದಸ್ಯ ರಾಗಿ ಕೌಸರ್, ರಂಜಿತ್ ಕವಲಪಾರ, ಸಂದೀಪ್, ವಿವೇಕ್ ನರೇನ್, ವಿಘ್ನೇಶ್ ಅವರನ್ನು ನೇಮಿಸಲಾಯಿತು.

ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಸಂಘದ ಸದಸ್ಯರಿಗೆ ಹಾಗೂ ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿ ಗಳಿಗೆ ‘ಮುಂಗಾರು ಮಳೆಯ ಮುಖಗಳು’ ಎಂಬ ವಿಷಯದ ಬಗ್ಗೆ ಛಾಯಾಚಿತ್ರ ಹಾಗೂ ವೀಡಿಯೋ ಗ್ರಫಿ ಸ್ಪರ್ಧೆ ನಡೆಯಲಿದ್ದು, ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.

ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಉಪಾಧ್ಯಕ್ಷ ರವಿ ಕುಮಾರ್, ಖಜಾಂಚಿ ಟಿ.ಕೆ. ಸಂತೋಷ್, ಸಹ ಖಜಾಂಚಿ ಸಯ್ಯದ್ ಇರ್ಫಾನ್, ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕ್ಷೇಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಅರುಣ್ ಕೂರ್ಗ್, ಸದಸ್ಯ ಎಸ್.ಜಿ. ಉಮೇಶ್, ಸಂಘದ ನಿರ್ದೇಶಕರಾದ ಪಿ.ವಿ. ಪ್ರಭಾಕರ್, ವಿಘ್ನೇಶ್ ಭೂತನಕಾಡು ಇದ್ದರು.