ವೀರಾಜಪೇಟೆ, ಆ. ೧೦: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ತಾಲೂಕು ಮೈದಾನದ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಪ್ರಮುಖ ಜಗದೀಶ್ ಕಾರಂತ್ ದಿಕ್ಸೂಚಿ ಭಾಷಣ ಮಾಡುತ್ತಾ ೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿ ನಮ್ಮ ದೇಶ ವಿಭಜನೆಗೊಂಡಿರುವುದು ಇತಿಹಾಸದ ಕರಾಳ ಸತ್ಯವಾಗಿದೆ. ಸಾವಿರಾರು ದೇಶಭಕ್ತರ ತ್ಯಾಗ, ಬಲಿದಾನ, ಹೋರಾಟಗಳಿಂದ ಪಡೆದ ಅಖಂಡ ಭಾರತದ ಸ್ವಾತಂತ್ರö್ಯವನ್ನು ಮತೀಯ ನೆಲೆಗಟ್ಟಿನಲ್ಲಿ ಚೂರು ಚೂರು ಮಾಡಿದ ಅಂದಿನ ಅವಕಾಶವಾದಿಗಳ ನಿಜ ಬಣ್ಣವನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಅಂದು ಕಳೆದುಕೊಂಡಿರುವ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಮೂಲಕ ಈ ದೇಶದ ಸ್ವಾತಂತ್ರö್ಯಕ್ಕಾಗಿ ಪ್ರಾಣತೆತ್ತ ಎಲ್ಲ ಸ್ವಾತಂತ್ರö್ಯ ಯೋಧರಿಗೆ ಗೌರವ ಸಮರ್ಪಣೆ ಮಾಡಬೇಕಾಗಿದೆ. ಈ ಉದ್ದೇಶಕ್ಕಾಗಿಯೇ ಹಿಂದೂ ಜಾಗರಣ ವೇದಿಕೆಯು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ವನ್ನು ನಡೆಸುತ್ತಿದೆ. ಮುಂದೊAದು ದಿನ ಅಖಂಡ ಭಾರತ ನಿರ್ಮಾಣ ಶತಸಿದ್ಧ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ವಹಿಸಿದ್ದರು. ಹಿಂ.ಜಾ.ವೇ. ಪ್ರಾಂತ ಸಮಿತಿಯ ಜೀವನ್ ಪೊನ್ನಂಪೇಟೆ, ಜಿಲ್ಲಾ ಸಮಿತಿಯ ಪ್ರಮುಖರಾದ ಚೇತನ್ ಶಾಂತಿನಿಕೇತನ, ಮಂಜುನಾಥ್, ಯೋಗೇಶ್ ಬಿಟ್ಟಂಗಾಲ ಹಾಗೂ ತಾಲೂಕು ಸಮಿತಿಯ ಪ್ರಮುಖರಾದ ಅನಿಲ್, ನಾಗೇಶ್, ಸೋಮಣ್ಣ, ಗಿರೀಶ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಮಾತೆಯರು ಸುರಿಯುತ್ತಿರುವ ಮಳೆಯ ನಡುವೆಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹನಿಮೋಳ್ ಪ್ರಾರ್ಥಿಸಿ, ದಿನೇಶ್ ನಾಯರ್ ಸ್ವಾಗತಿಸಿದರು. ಸುನಿಲ್ ಮಾದಾಪುರ ನಿರೂಪಿಸಿ, ವಿನಯ್ ಮಡಿಕೇರಿ ವಂದನಾರ್ಪಣೆ ಮಾಡಿದರು.